ದೀಪಾವಳಿಗೆ ರೈಲ್ವೆ ನೌಕರರಿಗೆ ಭಾರಿ ಉಡುಗೊರೆ ಘೋಷಿಸಿದ ಕೇಂದ್ರ
ನವದೆಹಲಿ, ಅಕ್ಟೋಬರ್ 06: ಕೇಂದ್ರ ಸರ್ಕಾರವು ರೈಲ್ವೆ ನೌಕರರಿಗೆ ದೀಪಾವಳಿ ಉಡುಗೊರೆ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬೋನಸ್ ಕುರಿತು ನಿರ್ಧಾರ ಪ್ರಕಟಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ 78 ದಿನಗಳ ಬೋನಸ್ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದಿದ್ದಾರೆ.
ದಸರಾ ಹಬ್ಬ ಆರಂಭಕ್ಕೂ ಮುನ್ನವೇ ರೇಲ್ವೆ ಇಲಾಖೆಯ ನೌಕರರಿಗೆ ಈ ಬೋನಸ್ ಹಣವನ್ನು ಪಾವತಿಸಲಾಗುವುದು. ಪ್ರತಿ ವರ್ಷ ರೇಲ್ವೆ ಇಲಾಖೆಯ ಸುಮಾರು 11.56 ಲಕ್ಷ ನಾನ್ ಗೆಜೆಟೆಡ್ ನೌಕರರಿಗೆ ಈ 78 ದಿನಗಳ ಬೋನಸ್ ನೀಡಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.

ಈ ಸಲ ರೈಲ್ವೆ ಇಲಾಖೆಯ ನೌಕರರಿಗೆ ಸುಮಾರು 18000 ರೂ ಹೆಚ್ಚುವರಿ ಬೋನಸ್ ಸಿಗಲಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಾಮಾನ್ಯವಾಗಿ ಬೋನಸ್ 72 ದಿನಗಳ ವೇತನ ಆಗಿರುತ್ತದೆ. ಆದರೆ, ಈ ಬಾರಿ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ.
ರೈಲು ಇಲಾಖೆಯ ಸುಮಾರು 11.56 ಲಕ್ಷ ನೌಕರರಿಗೆ ಇದರ ಲಾಭ ಸಿಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 1985 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದು ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಕೋಲ್ ಇಂಡಿಯಾ ಉಡುಗೊರೆ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ 'ಕೋಲ್ ಇಂಡಿಯಾ ಹಾಗೂ ಅದರ ಸಬ್ಸಿಡರಿ ಸಿಂಗರೆನಿ ಕೊಲಿಯರಿಸ್ ಕಂಪನಿ ಲಿಮಿಟೆಡ್ ಕಾರ್ಯನಿರ್ವಾಹಕರಲ್ಲದ ಕೆಡೆರ್ ನೌಕರರಿಗೆ ಆರ್ಥಿಕ ವರ್ಷ 2020-21 ಕ್ಕಾಗಿ 72, 500 ರೂ.ಗಳ PLR ನೀಡಲಾಗುವದು' ಎಂದು ಹೇಳಿದೆ. ಸೆಂಟ್ರಲ್ ಟ್ರೇಡ್ ಯೂನಿಯನ್ ಪ್ರತಿನಿಧಿಗಳು ಹಾಗೂ ಕೋಲ್ ಇಂಡಿಯಾ ಹಾಗೂ SCCL ಮ್ಯಾನೇಜ್ಮೆಂಟ್ ಮಧ್ಯೆ ನಡೆದ ದ್ವಿಪಕ್ಷಿಯ ಮಾತುಕತೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಎಲ್ಲಾ ನೌಕರರಿಗೆ ಸಿಗಲಿದೆ 72, 500 ರೂ.ಗಳ ರಿವಾರ್ಡ್
ಇನ್ನೊಂದೆಡೆ, ಸಾರ್ವಜನಿಕ ವಲಯದ ಕೋಲ್ ಇಂಡಿಯಾ ಲಿಮಿಟೆಡ್ ಹಬ್ಬದ ಸೀಸನ್ ಗೆ ಮುಂಚಿತವಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಅಂದರೆ, 2020-21ರ ಹಣಕಾಸು ವರ್ಷಕ್ಕೆ ತನ್ನ ಎಲ್ಲ ಕಾರ್ಯನಿರ್ವಾಹಕವಲ್ಲದ ಕೆಲಸಗಾರರಿಗೆ 72,500 ರೂ.ಗಳ PLR ನೀಡುವುದಾಗಿ ಘೋಷಿಸಿದೆ. PLR ಅನ್ನು ಅಕ್ಟೋಬರ್ 11, 2021 ಅಥವಾ ಅದಕ್ಕಿಂತ ಮೊದಲು ಪಾವತಿಸಲಾಗುವುದು ಎಂದು ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಕಂಪನಿ ಹೇಳಿದೆ. ಅಂದರೆ, ದಸರಾಕ್ಕಿಂತ ಮುಂಚಿತವಾಗಿ ಉದ್ಯೋಗಿಗಳಿಗೆ ಇದು ಸಿಗಲಿದೆ.
ರೈಲ್ವೆ ನೌಕರರಿಗೆ 78 ದಿನಗಳ ʻಪಿಎಲ್ಬಿʼ ಪಾವತಿಯಿಂದ 1984.73 ಕೋಟಿ ರೂ.ಗಳ ಆರ್ಥಿಕ ಪರಿಣಾಮ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಅರ್ಹ ನಾನ್-ಗೆಜೆಟೆಡ್ ರೈಲ್ವೆ ನೌಕರರಿಗೆ ʻಪಿಎಲ್ಬಿʼ ಪಾವತಿಸಲು ಮಾಸಿಕ 7000/- ರೂ.ಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ಪಾವತಿಸುವ ಗರಿಷ್ಠ ಮೊತ್ತ 17,951 ರೂಪಾಯಿಗಳು.
ಈ ನಿರ್ಧಾರದಿಂದ ಸುಮಾರು 11.56 ಲಕ್ಷ ಗೆಜೆಟೆಡೇತರ ರೈಲ್ವೆ ಉದ್ಯೋಗಿಗಳು ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ಪ್ರತಿ ವರ್ಷ ದಸರಾ/ ಪೂಜಾ ರಜಾದಿನಗಳಿಗೆ ಮೊದಲು ಅರ್ಹ ರೈಲ್ವೆ ಉದ್ಯೋಗಿಗಳಿಗೆ ʻಪಿಎಲ್ಬಿʼ ಪಾವತಿ ಮಾಡಲಾಗುತ್ತದೆ. ಈ ವರ್ಷವೂ ರಜಾದಿನಗಳಿಗೆ ಮುನ್ನ ಸಂಪುಟದ ನಿರ್ಧಾರವನ್ನು ಜಾರಿಗೊಳಿಸಲಾಗುವುದು.
2010-11ರಿಂದ 2019-20ರ ವರೆಗಿನ ಆರ್ಥಿಕ ವರ್ಷಗಳಲ್ಲಿ 78 ದಿನಗಳ ವೇತನದ ʻಪಿಎಲ್ಬಿʼ ಮೊತ್ತವನ್ನು ಪಾವತಿಸಲಾಗಿದೆ. 2020-21ನೇ ವರ್ಷವೂ 78 ದಿನಗಳ ವೇತನಕ್ಕೆ ಸಮಾನವಾದ ʻಪಿಎಲ್ಬಿʼ ನೀಡಲಾಗುವುದು. ಈ ಕ್ರಮವು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಉದ್ಯೋಗಿಗಳನ್ನು ಉತ್ತೇಜಿಸಬಹುದೆಂಬ ನಿರೀಕ್ಷೆ ಹೊಂದಲಾಗಿದೆ.
ರೈಲ್ವೆಯ ʻಉತ್ಪಾದಕತೆ ಆಧರಿತ ಬೋನಸ್ʼ ದೇಶವ್ಯಾಪಿ ಎಲ್ಲಾ ನಾನ್-ಗೆಜೆಟೆಡ್ ರೈಲ್ವೆ ಉದ್ಯೋಗಿಗಳಿಗೆ (ಆರ್ಪಿಎಫ್/ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಅನ್ವಯಿಸುತ್ತದೆ.
ಎ) 23.9.2000ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದ ಸೂತ್ರದ ಪ್ರಕಾರ 1998-99ರಿಂದ 2013-14ರವರೆಗಿನ ವರ್ಷಗಳಿಗೆ ʻಪಿಎಲ್ಬಿʼಯನ್ನು ಪಾವತಿಸಲಾಯಿತು.
(ಬಂಡವಾಳ ಮೌಲ್ಯ ಮತ್ತು ಸಿಬ್ಬಂದಿ ಬಲಕ್ಕೆ ಸಂಬಂಧಿಸಿದಂತೆ ಸ್ವಲ್ಪ ಬದಲಾವಣೆಗಳನ್ನು ಮಾಡಿದ 2002-03 ರಿಂದ 2004-05ರವರೆಗಿನ ಅವಧಿ ಹೊರತುಪಡಿಸಿ). ಈ ಸೂತ್ರವು ʻಇನ್ಪುಟ್ : ಔಟ್ಪುಟ್ʼ ಆಧಾರಿತವಾಗಿದ್ದು, ಇಲ್ಲಿ ಔಟ್ಪುಟ್ ಅನ್ನು ಸಮೀಕರಿಸಿದ ನಿವ್ವಳ ಟನ್ ಕಿಲೋಮೀಟರ್ಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿತ್ತು. ʻಇನ್ಪುಟ್ʼ ಅನ್ನು ಬಂಡವಾಳ ಮೌಲ್ಯ ಮಾರ್ಪಡಿಸಿದ ಗೆಜೆಟೆಡೇತರ ಸಿಬ್ಬಂದಿ ಸಂಖ್ಯೆ (ಆರ್ಪಿಎಫ್/ಆರ್ಪಿಎಸ್ಎಫ್ ಸಿಬ್ಬಂದಿಯನ್ನು ಹೊರತುಪಡಿಸಿ) ಆಧರಿತವಾಗಿ ಪರಿಗಣಿಸಲಾಗುತ್ತಿತ್ತು.
ಬಿ) 2012-13ನೇ ಹಣಕಾಸು ವರ್ಷದಲ್ಲಿ 78 ದಿನಗಳ ಅವಧಿಯ ʻಪಿಎಲ್ಬಿʼಯನ್ನು ವಿಶೇಷ ಪ್ರಕರಣವಾಗಿ ಅನುಮೋದಿಸಲಾಯಿತು. ಆರನೇ ಕೇಂದ್ರ ವೇತನ ಆಯೋಗದ (ಸಿಪಿಸಿ) ಶಿಫಾರಸುಗಳು ಮತ್ತು ಹಣಕಾಸು ಸಚಿವಾಲಯದ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ʻಪಿಎಲ್ಬಿʼ ಲೆಕ್ಕಾಚಾರ ಸೂತ್ರವನ್ನು ಮರುಪರಿಶೀಲಿಸುವ ಷರತ್ತಿನೊಂದಿಗೆ ಈ ಅನುಮೋದನೆ ನೀಡಲಾಗಿತ್ತು. ಆ ಬಳಿಕ ರೈಲ್ವೆ ಸಚಿವಾಲಯವು ಹೊಸ ಸೂತ್ರವನ್ನು ರೂಪಿಸಲು ಒಂದು ಸಮಿತಿಯನ್ನು ರಚಿಸಿತು.
ಸಿ) ಈ ಸಮಿತಿಯು, 2000ನೇ ವರ್ಷದ ಸೂತ್ರ ಮತ್ತು ಕಾರ್ಯಾಚರಣೆ ಅನುಪಾತ (ಓಆರ್) ಆಧರಿತ ನೂತನ ಸೂತ್ರ ಎರಡನ್ನೂ 50:50 ಅನುಪಾತದಲ್ಲಿ ಅನುಸರಿಸಬಹುದು ಎಂದು ಶಿಫಾರಸು ಸಲ್ಲಿಸಿತು.
ಈ ಸೂತ್ರವು ಭೌತಿಕ ನಿಯತಾಂಕಗಳು ಮತ್ತು ಹಣಕಾಸು ನಿಯತಾಂಕಗಳು ಎರಡೂ ವಿಷಯಗಳಲ್ಲಿ ಉತ್ಪಾದಕತೆಗೆ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿತು. ಸಮಿತಿಯು ಶಿಫಾರಸು ಮಾಡಿದ ಈ ಸೂತ್ರವನ್ನು 2014-15 ರಿಂದ 2019-20 ರವರೆಗೆ ʻಪಿಎಲ್ಬಿʼ ಲೆಕ್ಕಾಚಾರಕ್ಕಾಗಿ ಬಳಸಲಾಗಿದೆ.
ಉತ್ತರ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳು ದೀಪಾವಳಿಯಂದು ತಲಾ ಎರಡು ದೀಪ ಬೆಳಗಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ನಮ್ಮ ಸರ್ಕಾರವು ಪಿಎಂಎವೈ ಯೋಜನೆಯಲ್ಲಿ ಮನೆಗಳ ಆಸ್ತಿ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದೆ. ಇಲ್ಲಿಯವರೆಗೆ ಎಲ್ಲವೂ ಗಂಡ ಅಥವಾ ಮಗನ ಹೆಸರಿನಲ್ಲಿ ಇರುತ್ತಿತ್ತು. ಆರೋಗ್ಯಕರ ಸಮಾಜದಲ್ಲಿ ಸಮತೋಲನ ಇರಬೇಕೆಂದು ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನೀಡಲಾಗುತ್ತಿರುವ ಮನೆಗಳಲ್ಲಿ, ಶೇಕಡಾ 80 ಕ್ಕಿಂತಲೂ ಹೆಚ್ಚು ಮನೆಗಳು ಮಹಿಳೆಯರ ಒಡೆತನದಲ್ಲಿರುವುದು ಅಥವಾ ಅವರು ಜಂಟಿ ಮಾಲೀಕರಾಗಿರುವುದು ನನಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications