ವರ್ಕ್‌ ಫ್ರಮ್ ಹೋಮ್‌ಗೆ ಕೇಂದ್ರ ಸರ್ಕಾರದ ಹೊಸ ನಿಯಮ

ನವದೆಹಲಿ, ಜುಲೈ 20: ಕೊರೊನಾ ಕಾರಣದಿಂದಾಗಿ ನಮ್ಮ ಜೀವನ ಶೈಲಿ ಬದಲಾಗಿದೆ. ಬಹುತೇಕ ಜನ ಮನೆಯಿಂದಲೇ ಕೆಲಸ ಮಾಡಲು ಒಗ್ಗಿಕೊಂಡಿದ್ದಾರೆ. ಹೀಗಾಗಿ ಆಫೀಸ್ ಪ್ರಾರಂಭವಾದರೂ ಹೆಚ್ಚು ಜನ ಕಚೇರಿಗಳಿಗೆ ಹೋಗುವತ್ತ ಮನಸ್ಸು ಮಾಡುತ್ತಿಲ್ಲ.

ಸದ್ಯ ವರ್ಕ್‌ ಫ್ರಮ್ ಹೋಮ್‌ಗೆ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಹೊಸ ಘೋಷಣೆಯನ್ನು ಮಾಡಿದ್ದು ಆರ್ಥಿಕ ವಲಯಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ನೀಡಲು ಸೂಚಿಸಿದೆ.

ಆರ್ಥಿಕ ವಲಯಗಳ ಉದ್ಯೋಗಿಗಳಿಗೆ ಗರಿಷ್ಠ ಒಂದು ವರ್ಷದವರೆಗೆ ಮನೆಯಿಂದ ಕೆಲಸ ಮಾಡಲು (WFH) ಅವಕಾಶವಿದ್ದು, ಗುತ್ತಿಗೆ ಆಧಾರಿತ ಉದ್ಯೋಗಿಗಳನ್ನು ಒಳಗೊಂಡಂತೆ ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ಆಯ್ಕೆ ನೀಡಬಹುದು.

Central government new rule for work from home

ಇನ್ನೂ ಶೇ. 50 ರಷ್ಟು ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀಡುವ ಅಧಿಕಾರವನ್ನು ವಿಶೇಷ ಆರ್ಥಿಕ ವಲಯದ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಶೇಕಡಾ 50 ರಷ್ಟು ಉದ್ಯೋಗಿಗಳಿಗೆ ವರ್ಕ್‌ ಫ್ರಮ್ ಹೋಮ್ ನೀಡಬೇಕಾದರೆ ಅದಕ್ಕೆ ಸೂಕ್ತ ಕಾರಣಗಳನ್ನು ಉದ್ಯೋಗಿ ಲಿಖಿತ ರೂಪದಲ್ಲಿ ನೀಡಬೇಕು.

ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZs) ದೇಶಾದ್ಯಂತ ಏಕರೂಪದ WFH ನೀತಿಯನ್ನು ಜಾರಿಗೆ ತರಲು ಹಾಗೂ ಉದ್ಯಮದ ಬೇಡಿಕೆಯ ಮೇರೆಗೆ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ಹೊಸ ನಿಯಮವು SEZ ನಲ್ಲಿನ ಘಟಕದ ನಿರ್ದಿಷ್ಟ ವರ್ಗದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ನೀಡುತ್ತದೆ. ಇವರಲ್ಲಿ IT/ ITeS SEZ ಘಟಕಗಳ ಉದ್ಯೋಗಿಗಳು ಸೇರಿದ್ದಾರೆ. ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಪ್ರಯಾಣದಲ್ಲಿರುವ ಮತ್ತು ಆಫ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಇದನ್ನು ಸೇರಿಸಲಾಗಿದೆ.

"ಮನೆಯಿಂದ ಕೆಲಸ ಮಾಡುವುದನ್ನು ಈಗ ಗರಿಷ್ಠ ಒಂದು ವರ್ಷದ ಅವಧಿಗೆ ಅನುಮತಿಸಲಾಗಿದೆ. ಆದಾಗ್ಯೂ, ಘಟಕಗಳ ಕೋರಿಕೆಯ ಮೇರೆಗೆ ಡಿಸಿ ಇದನ್ನು ಒಂದು ವರ್ಷಕ್ಕೆ ಇದನ್ನು ವಿಸ್ತರಿಸಬಹುದು" ಎಂದು ಸಚಿವಾಲಯ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+