ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ವಲಯದ ಉದ್ಯೋಗಿಗಳ ಗ್ರಾಚುಟಿ ಮೊತ್ತ ದ್ವಿಗುಣ?

7ನೇ ವೇತನ ಆಯೋಗದ ಶಿಫಾರಸಿನಂತೆ ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ಗ್ರಾಚುಟಿ ಮೊತ್ತವನ್ನು ಹೆಚ್ಚಿಸಲಾಗಿದೆ. ಆದರೆ, ಆಯೋಗವು ಖಾಸಗಿ ವಲಯಕ್ಕೂ ಅದೇ ನಿಯಮ ಜಾರಿಗೊಳಿಸಬೇಕೆಂದು ನೀಡಿದ್ದ ಶಿಫಾರಸು ಈಗ ಮತ್ತೆ ಚರ್ಚೆಗೆ ಬಂದಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 22: ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಗ್ರಾಚುಟಿ ಮೊತ್ತವನ್ನು ದ್ವಿಗುಣಗೊಳಿಸಲು 7ನೇ ವೇತನ ಆಯೋಗ ನೀಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವ ಸಂಭವವಿದೆ ಎಂದು ಮೂಲಗಳು ಹೇಳಿದ್ದು, ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಬೀಳಲಿದೆಯೆಂದು ನಿರೀಕ್ಷಿಸಲಾಗಿದೆ.

ಈ ನಿರೀಕ್ಷೆ ನಿಜವಾದರೆ, ಸದ್ಯಕ್ಕಿರುವ ಗ್ರಾಚುಟಿ ಸೀಲಿಂಗ್ ಮೊತ್ತ 10 ಲಕ್ಷ ರು.ಗಳಿಂದ 20 ಲಕ್ಷ ರು.ಗಳಿಗೆ ಏರಲಿದೆ.[7ನೇ ವೇತನ ಆಯೋಗ ಏನು? ಏತ್ತ? ಯಾಕೆ? ಲೆಕ್ಕಾಚಾರ ಹೇಗೆ?]

Central Government likely to increase gratuity ceiling from 10 to 20 Lakhs

7ನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ಗ್ರಾಚುಟಿ ಮೊತ್ತವನ್ನು ದ್ವಿಗುಣಗೊಳಿಸುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರಿ ನೌಕರರ ವಿಚಾರದಲ್ಲಿ ಅದು ಸ್ವೀಕೃತವಾಗಿದೆ. ಆದರೆ, ಖಾಸಗಿ ವಲಯದ ಉದ್ಯೋಗಿಗಳಿಗೆ ಮಿತಿ ಹೆಚ್ಚಳ (ಸೀಲಿಂಗ್ ಮೊತ್ತ) ದ್ವಿಗುಣಗೊಳಿಸುವ ಸಂಬಂಧ ಸಭೆ ಕರೆಯಲಾಗಿದೆ.[ಬಜೆಟ್ ನಲ್ಲಿ ಏಳನೇ ವೇತನ ಆಯೋಗ, ಮಹಿಳೆಯರಿಗೆ ರಕ್ಷಣೆ: ಸಿದ್ದು]

ಕೇಂದ್ರ ಸರ್ಕಾರದ ಕಾರ್ಮಿಕರ ಇಲಾಖೆಯು ಎಲ್ಲಾ ರಾಜ್ಯಗಳ ವ್ಯಾಪಾರ ಸಂಘ, ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳ ಸಭೆಯನ್ನು ಗುರುವಾರ (ಫೆ. 23) ಕರೆದಿದೆ. ಈ ಸಭೆಯಲ್ಲಿ ಖಾಸಗಿ ಉದ್ಯೋಗಿಗಳ ಗ್ರಾಚುಟಿ ಮೊತ್ತ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿದೆ. ಚರ್ಚೆಯಲ್ಲಿ ಬರುವ ಅಭಿಪ್ರಾಯಗಳನ್ನಾಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

1972ರಲ್ಲಿ ಜಾರಿಗೊಂಡಿದ್ದ ಗ್ರಾಚುಟಿ ನಿಯಮಾವಳಿಗಳನ್ನು ಇತ್ತೀಚಿನ ದಿನಗಳಲ್ಲಿ ಆದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಬದಲಾವಣೆಯ ಅನುಸಾರ ಪರಿಷ್ಕೃತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಗ್ಯಾಚುಟಿ ಬಗ್ಗೆ ಒಂದಿಷ್ಟು...

ಗ್ರಾಚುಟಿ ಎಂದರೆ, ಉದ್ಯೋಗದಾತ ಕಂಪನಿಯು ತನ್ನಲ್ಲಿನ ನೌಕರರಿಗೆ ಅವರ ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ನೀಡುವ ಗೌರವ ಧನ. ಅಂದರೆ, ಉದ್ಯೋಗಿಯು ಕಂಪನಿಯಿಂದ ನಿವೃತ್ತನಾದಾಗ ಅಥವಾ ಸೇವೆಗೆ ರಾಜಿನಾಮೆ ಸಲ್ಲಿಸಿದಾಗ ನೀಡಲಾಗುವ ಮೊತ್ತವಿದು. ಈ ಮೊತ್ತವನ್ನು ಕಂಪನಿಯಲ್ಲಿ ಸೇವೆಯಲ್ಲಿದ್ದಾಗಲೇ ಪಡೆಯುವ ಹಾಗಿಲ್ಲ. 10ಕ್ಕಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಕಡ್ಡಾಯವಾಗಿ ಗ್ರಾಚುಟಿ ನೀಡಬೇಕೆಂಬ ನಿಯಮವಿದೆ.

ಉದ್ಯೋಗಿಯು ದಿನಗೂಲಿ ನೌಕರನಾಗಿದ್ದಲ್ಲಿ ಆತ ಸೇವೆಯಿಂದ ಮುಕ್ತನಾಗುವ ಮುನ್ನ ಪಡೆದಿದ್ದ ಮೂರು ತಿಂಗಳ ಕೂಲಿಯನ್ನು ಒಂದು ದಿನದ ವೇತನವೆಂದು ಪರಿಗಣಿಸುವ ನಿಯಮವಿದೆ.

ಈ ಮೊತ್ತ ಪಡೆಯಲು ನೌಕರಸ್ಥನು ತನಗೆ ಸಂಬಂಧಪಟ್ಟ ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳನ್ನಾದರೂ ಸತತವಾಗಿ ಸೇವೆ ಸಲ್ಲಿಸಿರಬೇಕು.

ಆದರೆ, ಉದ್ಯೋಗಿಯು ಕಂಪನಿಯ ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ ಈ ಐದು ವರ್ಷಗಳ ನಿಯಮ ಅನ್ವಯವಾಗುವುದಿಲ್ಲ. ಉದ್ಯೋಗಿಯು ಮರಣ ಹೊಂದಿದ ಅಥವಾ ಅಂಗವಿಕಲನಾದ ಸಂದರ್ಭದಲ್ಲಿ ಗ್ರಾಚುಟಿ ಮೊತ್ತವನ್ನು ಉದ್ಯೋಗಿಯ ನಾಮಿನಿಗೆ ಅಥವಾ ಕಾನೂನಾತ್ಮಕವಾಗಿ ಯಾರಿಗೆ ಸಲ್ಲಬೇಕೋ ಅವರಿಗೆ ನೀಡಲಾಗುವುದು.

ಗ್ರಾಚುಟಿಗೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ. ಹಾಗಾಗಿ, ಸಾಮಾನ್ಯವಾಗಿ ಇದು ಟ್ಯಾಕ್ಸ್ ಫ್ರೀ ಬೆನಿಫಿಟ್. ಆದರೆ, ಗ್ರಾಚುಟಿಗಾಗಿ ನೀಡುವ ಮೊತ್ತವನ್ನು ಉದ್ಯೋಗಿಯು ಹೆಚ್ಚಿಸಿದಲ್ಲಿ ಆ ಹೆಚ್ಚಳವಾಗುವ ಹಣಕ್ಕೆ ತೆರಿಗೆ ಇರುತ್ತದೆ.

ಉದ್ಯೋಗಿಯಿಂದ ಕಂಪನಿಗೆ ಯಾವುದಾದರೂ ಆರ್ಥಿಕ ನಷ್ಟವಾದರೆ ಆ ನಷ್ಟದ ಹಣವನ್ನು ಸಂಬಂಧಪಟ್ಟ ಉದ್ಯೋಗಿಯ ಗ್ರಾಚುಟಿ ಮೊತ್ತದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಕಂಪನಿಗೆ ಅಧಿಕಾರವಿರುತ್ತದೆ.

English summary
The central government is seriously thinking to implement the recommendation of 7th pay commission, to increase the ceiling amount of gratuity from Rs. 10 lakhs to Rs. 20 lakhs, says the report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X