ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

VLC ಮೀಡಿಯಾ ಪ್ಲೇಯರ್ ಮೇಲಿನ ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್ 14: ಕೇಂದ್ರ ಸರ್ಕಾರ ನಿಷೇಧಿಸಿದ್ದ ಜನಪ್ರಿಯ ವಿಎಲ್‌ಸಿ (VLC) ಮೀಡಿಯಾ ಪ್ಲೇಯರ್ ಭಾರತದಲ್ಲಿ ಕೊನೆಗೂ ಅನ್‌ಬ್ಲಾಕ್‌ ಮಾಡಲಾಗಿದೆ. ಈಗ ನೀವು ಈ ಜನಪ್ರಿಯ ಓಪನ್ ಸೋರ್ಸ್ ಮತ್ತು ಕ್ರಾಸ್ ಪ್ಲಾಟ್‌ಫಾರ್ಮ್ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮೂಲಕ ಡೌನ್‌ಲೋಡ್ ಮಾಡಬಹುದು. ಕೇಂದ್ರ ಸರ್ಕಾರವು ವಿಎಲ್‌ಸಿ ಮೀಡಿಯಾ ಪ್ಲೇಯರ್ ವೆಬ್‌ಸೈಟ್ ನಿರ್ಬಂಧಿಸಿತ್ತು.

ವಿಎಲ್‌ಸಿ ಮೀಡಿಯಾ ಪ್ಲೇಯರ್ ಮತ್ತೆ ಭಾರತದಲ್ಲಿ ಅನ್‌ಬ್ಲಾಕ್‌ ಮಾಡಿರುವ ಕೇಂದ್ರ ಈ ಸುದ್ದಿಯನ್ನು ಮೊದಲು ಇಂಟರ್ನೆಟ್ ಫ್ರೀಡಮ್ ಫೌಂಡೇಶನ್ (IFF) ಹಂಚಿಕೊಂಡಿದೆ. ಈ ವಿಎಲ್‌ಸಿ ಮೀಡಿಯಾ ಪ್ಲೇಯರ್ ಹೊಂದಿರುವ ಕಂಪನಿಯಾದ VideoLANಗೆ ಕಾನೂನು ಬೆಂಬಲವನ್ನು ನೀಡುತ್ತದೆ ಎಂದಿದೆ. ನೀವು ಈ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಲು ಬಯಸಿದರೆ ನೀವು (http://www.videolan.org) ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಪ್ಲಾಟ್‌ಫಾರ್ಮ್‌ಗಳಲ್ಲಿ ಮೀಡಿಯಾ ಫೈಲ್‌ಗಳನ್ನು ಪ್ಲೇ ಮಾಡಲು ಒಬ್ಬರು ವಿಎಲ್‌ಸಿ ಅಪ್ಲೀಕೇಶನ್‌ನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

Central Government lifts ban on VLC Media Player website

ಕಂಪನಿಯು ಲೀಗಲ್ ನೋಟಿಸ್ ಕಳುಹಿಸಿತ್ತು

ಈ ವಿಚಾರವಾಗಿ ಕಂಪನಿಯು ಸರ್ಕಾರಕ್ಕೆ ಲೀಗಲ್ ನೋಟಿಸ್ ಕಳುಹಿಸಿತ್ತು. ಕೇಂದ್ರ ಸರ್ಕಾರ ಇತ್ತೀಚೆಗೆ ಇದನ್ನು ನಿಷೇಧಿಸಿತ್ತು. ಆದರೆ, ಈಗ ಈ ನಿಷೇಧವನ್ನು ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಸರಕಾರದಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಮುಂದಿನ ಕಾನೂನು ಹೋರಾಟವನ್ನು ಕೈಗೊಳ್ಳುವುದಾಗಿ ಕಂಪನಿ ಬೆದರಿಕೆ ಹಾಕಿತ್ತು. ನಿಷೇಧದ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿ ಬಂದಿಲ್ಲ ಮತ್ತು ಭಾರಿ ಕೋಲಾಹಲದ ಹೊರತಾಗಿಯೂ ನಿಷೇಧದ ಕಾರಣವನ್ನು ವಿವರಿಸಲು ಸರ್ಕಾರ ವಿಫಲವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

Central Government lifts ban on VLC Media Player website

ಕಂಪನಿ ಅಚ್ಚರಿ ವ್ಯಕ್ತಪಡಿಸಿತ್ತು

ಕಂಪನಿಯು ಈ ನಿಷೇಧವನ್ನು "ಆಘಾತಕಾರಿ" ಎಂದು ಕರೆದಿದೆ. ಕೇಂದ್ರ ಸರ್ಕಾರವು ತನ್ನ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ವಿಎಲ್‌ಸಿ ಮೀಡಿಯಾ ಪ್ಲೇಯರ್ ಬೆಂಬಲಿಸುತ್ತದೆ ಎಂದು ಹೇಳಿದೆ. VideoLAN ತನ್ನ ನ್ಯಾಯಾಲಯದ ನೋಟೀಸ್‌ನಲ್ಲಿ ವರ್ಚುವಲ್ ವಿಚಾರಣೆಗಳ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶವನ್ನು ಕೋರಿದೆ ಮತ್ತು URLನ್ನು ನಿಷೇಧಿಸಲು ನೀಡಲಾದ ತರ್ಕಬದ್ಧ ತಡೆಯುವ ಆದೇಶವನ್ನು ಕೋರಿದೆ. ಆದರೆ, ನಿರ್ಬಂಧಕ್ಕೆ ಕಾರಣ ಇನ್ನೂ ಏನು ತಿಳಿದುಬಂದಿಲ್ಲ. ಆದರೆ, ವಿಎಲ್‌ಸಿ ಮೀಡಿಯಾ ಪ್ಲೇಯರ್ ಬಳಕೆದಾರರ ಮಾಹಿತಿಗಳನ್ನು 'ವಿರೋಧಿ ದೇಶಕ್ಕೆ' ರವಾನಿಸುತ್ತಿದೆ ಎಂದು ಭಾರತ ಸರ್ಕಾರ ಪತ್ತೆ ಮಾಡಿತ್ತು. ಈ ಕಾರಣಕ್ಕಾಗಿ ವೆಬ್‌ಸೈಟ್‌ಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ವಿಎಲ್‌ಸಿ ಮೀಡಿಯಾ ಪ್ಲೇಯರ್‍‌ ನಿಷೇಧ ಹೇರಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹೇಳಿಕೊಂಡಿತ್ತು.

English summary
VLC Media Player's website was unblocked by the Ministry of Electronics and Information Technology after a months of legal notice being issued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X