Budget 2024: ಕೇಂದ್ರ ಬಜೆಟ್ ಅಧಿವೇಶನ ದಿನಾಂಕ ಫಿಕ್ಸ್, ಬಜೆಟ್ ಮಂಡನೆ ಯಾವತ್ತು?
ಬೆಂಗಳೂರು, ಜುಲೈ 07: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಭಾರಿಗೆ ಅಧಿಕಾರಕ್ಕೆ ಬಂದು ತಿಂಗಳು ಕಳೆದಿದೆ. ಇದರ ಬೆನ್ನಲ್ಲೆ 18ನೇ ಲೋಕಸಭೆಯ ಬಜೆಟ್ ಮಂಡನೆ ಹಾಗೂ ಬಜೆಟ್ ಅಧಿವೇಶನದ ಮಹೂತ್ಸವ ಫಿಕ್ಸ್ ಆಗಿದೆ. ಈ ಭಾರಿಯು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಬಜೆಟ್ ಮಂಡಿಸಲಿದ್ದಾರೆ.
ಈ ಬಗ್ಗೆ ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಕಿರಣ ರಿಜಿಜು ಅವರು ಸಾಮಾಜಿಕ ಜಾಲತಾನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ 3.0 ಸರ್ಕಾರದ ಬಜೆಟ್ ಅಧಿವೇಶನವು ಜುಲೈ 22ರಿಂದ ಆಗಸ್ಟ್ 12ರವರೆಗೆ ಜರುಗಲಿದೆ. ಒಟ್ಟು 22 ದಿನಗಳ ಕಾಲ ಈ ಬಜೆಟ್ ಸೆಷನ್ ನಡೆಯಲಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಜುಲೈ 23ರಂದು ಮುಂಗಡಪತ್ರ (ಬಜೆಟ್) ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮೇಲೆ ಸಾಕಷ್ಟು ಆಶಾಭಾವನೆ, ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಆಗಸ್ಟ್ 12ರವರೆಗೆ ಬಜೆಟ್ ಅಧಿವೇಶನ
ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿಗಳು 2024ರ ಜುಲೈ 22ರಿಂದ ಆಗಸ್ಟ್ 12ರವರೆಗೆ ಬಜೆಟ್ ಅಧಿವೇಶನ ಕರೆಯಲು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೆ ಬಜೆಟ್ ಮಂಡನೆ ಏಕೆ?
ಇನ್ನೂ 2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲೇ ಪ್ರಧಾನಿ ಮೋದಿ ಸರ್ಕಾರವು ಮಧ್ಯಂತರ ಬಜೆಟ್ ಮಂಡನೆ ಮಾಡಿತ್ತು. ಸಾಮಾನ್ಯವಾಗಿ ಫೆಬ್ರವರಿ 1ರಂದು ಬೆಜೆಜ್ ಮಂಡನೆ ಆಗಬೇಕು. ಅದು ಏಪ್ರಿಲ್ ಹೊಸ ಆರ್ಥಿಕ ವರ್ಷದಿಂದಲೇ ಜಾರಿಗೆ ಬರಬೇಕು.

ಆದರೆ ಈ ಭಾರಿ ಏಪ್ರಿಲ್, ಮೇ ತಿಂಗಳಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆದಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿದೆ. ಆಗ ಅದು ಸೀಮಿತ ಅವಧಿಯ ಮಧ್ಯಂತರ ಬಜೆಟ್ ಮಂಡಲಾಗಿದ್ದು, ಇದೀಗ ಮಂಡಿಸಲಿರುವ ಬಜೆಟ್ 2024-25 ನೇ ಸಾಲಿನ ಪೂರ್ಣವಧಿ ಬಜೆಟ್ ಆಗಿರಲಿದೆ.












Click it and Unblock the Notifications