PM Modi@9: ಕೇಂದ್ರ ಬಿಜೆಪಿ ಸರ್ಕಾರಕ್ಕೆ 9 ವರ್ಷ ಪೂರ್ಣ: ಪಿಎಂ ಮೋದಿ ಬಣ್ಣಿಸಿದ್ದು ಹೀಗೆ
ನವದೆಹಲಿ, ಮೇ 30: ಕೇಂದ್ರದಲ್ಲಿ ಆಡಳಿತ ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಒಂಬತ್ತು ವರ್ಷಗಳನ್ನು ಪೂರೈಸಿದೆ. ಇದನ್ನು 'ಒಂಬತ್ತು ವರ್ಷಗಳ ಸೇವೆ' ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರತಿ ನಿರ್ಧಾರದಲ್ಲೂ 'ಜನರ ಜೀವನವನ್ನು ಸುಧಾರಿಸುವ' ದೃಷ್ಟಿ ಮತ್ತು ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, #9YearsOfSeva ಎಂದು ಹ್ಯಾಷ್ ಟ್ಯಾಗ್ ಹಾಕಿ ತಮ್ಮ ಆಡಳಿತ ಕುರಿತು ವಿವರಿಸಿದ್ದಾರೆ.

ಇಂದು, ನಾವು ರಾಷ್ಟ್ರದ ಸೇವೆಯಲ್ಲಿ 9 ವರ್ಷಗಳನ್ನು ಪೂರೈಸುತ್ತಿದ್ದೇವೆ. ನಮ್ರತೆ ಮತ್ತು ಕೃತಜ್ಞತೆಯಿಂದ ಭಾವದೊಂದಿಗೆ ಸಹಕರಿಸಿದ ದೇಶದ ಜನರಿಗೆ ಅಭಿನಂದಿಸುತ್ತೇನೆ. ಕೇಂದ್ರ ಬಿಜೆಪಿ ಸರ್ಕಾರ ತೆಗೆದುಕೊಂಡ ಪ್ರತಿ ನಿರ್ಧಾರವು ಜನ ಜೀವನ ಸುಧಾರಣೆಯ ಆಶಯದೊಂದಿಗೆ ಮಾರ್ಗದರ್ಶಿಸಲ್ಪಟ್ಟಿದೆ.
ಮುಂದಿನ ದಿನಗಳಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಇನ್ನಷ್ಟು ಹೆಚ್ಚಿನ ಶ್ರಮಿಸುತ್ತೇವೆ. ಈ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವವನ್ನಾಗಿ ನಿರ್ಮಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
Today, as we complete 9 years in service to the nation, I am filled with humility and gratitude. Every decision made, every action taken, has been guided by the desire to improve the lives of people. We will keep working even harder to build a developed India. #9YearsOfSeva
— Narendra Modi (@narendramodi) May 30, 2023
ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ್ದರ ಅಂಗವಾಗಿ ಬಿಜೆಪಿ ಪಕ್ಷ ಇಂದಿನಿಂದಲೇ ದೇಶದಾದ್ಯಂತ ಒಂದು ತಿಂಗಳ ಕಾಲ ಬೃಹತ್ ಮತ್ತು ವಿಶೇಷ ಸಂಪರ್ಕ ಅಭಿಯಾನ' ಕಾರ್ಯಕ್ರಮ ಆಯೋಜಿಸಿದೆ. ಮುಂಬರಲಿರುವ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಬಿಜೆಪಿ ಜನ ಸಂಪರ್ಕ ಹೊಂದುವ ಉದ್ದೇಶ ಹೊಂದಿದೆ.

ಬಿಜೆಪಿ ಆಡಳಿತದಲ್ಲಿ ರಾಷ್ಟ್ರವೇ ಮೊದಲು...
ಎರಡು ಭಾರಿ ಆಡಳಿತ ನೀಡಿರುವ ಕೇಂದ್ರ ಬಿಜೆಪಿ "ರಾಷ್ಟ್ರವೇ ಮೊದಲು" ಎಂಬ ಮಂತ್ರದೊಂದಿಗೆ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ ಎಂದು ಮಂಗಳವಾರ ಪಕ್ಷ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರವು ದೇಶದ ಪ್ರತಿ ಭಾಗವು ಸರ್ವತೋಮುಖ ಅಭಿವೃದ್ಧಿಯಿಂದಿ ಹೊಂದಲು ಪ್ರಪಂಚದಾದ್ಯಂತದ ಪ್ರಮುಖ ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರ ಸಂಪರ್ಕ ಮಾಡಿದೆ. 21 ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
ಕಳೆದ ಮೇ 28 ರಂದು ಭಾನುವಾರ ಸುಮಾರು 21 ವಿಪಕ್ಷಗಳ ವಿರೋಧದ ನಡೆವೆಯೇ ಕೋಟ್ಯಂತರ ರೂಪಾಯಿಯಲ್ಲಿ ಕಟ್ಟಿಸಿದ ನೂತನ ಸಂಸತ್ ಭವನ (New Parliment) ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸದೇ ಅವಮಾನ ಮಾಡಿದೆ ಎಂದು ಆರೋಪಿಸಿ ಬಹಿಷ್ಕರಿಸಿದ್ದವು.
ಸದ್ಯ ಉದ್ಘಾಟನೆಯಾಗಿರುವ ನೂತನ ಕಟ್ಟಡವನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಬಣ್ಣಿಸಲಾಗಿದೆ. ಪಾರ್ಲಿಮೆಂಟ್ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ ಒಟ್ಟು ಕಾರ್ಮಿಕರ ಪೈಕಿ ಕೆಲವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.












Click it and Unblock the Notifications