Caste Census: ಏಪ್ರಿಲ್ 1, 2026ರಿಂದ ಮನೆ ಪಟ್ಟಿಯೊಂದಿಗೆ ಜನಗಣತಿ ಆರಂಭ
Census: ಮುಂಬರುವ ಜನಗಣತಿಗಾಗಿ ಮನೆಪಟ್ಟಿ ಕಾರ್ಯಾಚರಣೆಗಳು ಏಪ್ರಿಲ್ 1, 2026 ರಿಂದ ಪ್ರಾರಂಭವಾಗಲಿದೆ. ಇದು ದಶಕದ ಮೊದಲ ಹಂತದ ಆರಂಭವನ್ನು ಸೂಚಿಸುತ್ತದೆ ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್. ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, ಜನಗಣತಿ ಆಯುಕ್ತರು ಮತ್ತು ಭಾರತದ ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಮನೆಪಟ್ಟಿ ಕಾರ್ಯಾಚರಣೆಗಳು ಮತ್ತು ವಸತಿ ಗಣತಿಯು ಏಪ್ರಿಲ್ 1, 2026 ರಿಂದ ಪ್ರಾರಂಭ ಆಗಲಿದೆ ಎಂದು ಹೇಳಿದರು.

ಅದಕ್ಕೂ ಮುಂಚೆ ಮೇಲ್ವಿಚಾರಕರು, ಗಣತಿದಾರರ ನೇಮಕಾತಿ ಮತ್ತು ಅವರಲ್ಲಿ ಕೆಲಸದ ವಿತರಣೆಯನ್ನ ರಾಜ್ಯಗಳು ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಮಾಡಲಾಗುತ್ತದೆ ಎಂದು ಅದು ಹೇಳಿದೆ. ಜನಗಣತಿಯು ಎರಡು ಹಂತದ ಪ್ರಕ್ರಿಯೆ ಆಗಿದ್ದು, ಮೊದಲ ಹಂತದಲ್ಲಿ ಅಂದರೆ ಮನೆ ಪಟ್ಟಿ ಕಾರ್ಯಾಚರಣೆಯಲ್ಲಿ ಪ್ರತಿ ಮನೆಯ ವಸತಿ ಪರಿಸ್ಥಿತಿಗಳು, ಆಸ್ತಿಗಳು ಮತ್ತು ಸೌಕರ್ಯಗಳನ್ನು ಸಂಗ್ರಹ ಮಾಡಲಾಗುತ್ತದೆ.
ಬಳಿಕ ಎರಡನೇ ಹಂತದಲ್ಲಿ ಅಂದರೆ ಜನಸಂಖ್ಯಾ ಗಣತಿ, ಫೆಬ್ರವರಿ 1, 2027ರಂದು ನಿಗದಿ ಆಗಿರುವ ಪ್ರತಿ ಮನೆಯ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾ, ಸಾಮಾಜಿಕ-ಆರ್ಥಿಕ, ಸಾಂಸ್ಕೃತಿಕ ಮತ್ತು ಇತರ ವಿವರಗಳನ್ನು ಸಂಗ್ರಹ ಮಾಡಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜನಗಣತಿಯಲ್ಲಿ, ಜಾತಿ ಗಣತಿಯನ್ನು ಕೂಡ ಮಾಡಲಾಗುತ್ತದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜನಗಣತಿ ಕಾರ್ಯಗಳಿಗಾಗು 34,00,000ಕ್ಕೂ ಅಧಿಕ ಗಣತಿದಾರರು ಮತ್ತು ಮೇಲ್ವಿಚಾರಕರು ಹಾಗೂ ಸುಮಾರು 1.3 ಲಕ್ಷ ಗಣತಿ ಕಾರ್ಯಕರ್ತರನ್ನು ನಿಯೋಜನೆ ಮಾಡಲಾಗುವುದು.
ಇದು ಇಲ್ಲಿಯವರೆಗೆ 16ನೇ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿ ಆಗಿದೆ. ಮುಂಬರುವ ಜನಗಣತಿಯನ್ನು ಮೊಬೈಲ್ ಅಪ್ಲಿಕೇಶನ್‌ಗಳನ್ನ ಬಳಕೆ ಮಾಡಿಕೊಂಡು ಡಿಜಿಟಲ್ ವಿಧಾನಗಳ ಮೂಲಕ ನಡೆಸಲಾಗುವುದು. ಸ್ವಯಂ ಗಣತಿಯ ನಿಬಂಧನೆಯನ್ನು ಜನರಿಗೆ ಲಭ್ಯವಾಗುವಂತೆ ಮಾಡಲಾಗುವುದು. ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ನಾಗರಿಕರಿಗೆ ಕೇಳಲು ತುಂಬಾ ಪ್ರಶ್ನೆಗಳನ್ನು ಸಿದ್ಧಪಡಿಸಿತ್ತು.
ಸಮೀಕ್ಷೆಯು ಮನೆಗಳಿಂದ ಫೋನ್‌ಗಳು, ಇಂಟರ್ನೆಟ್, ವಾಹನಗಳು ಮತ್ತು ಉಪಕರಣಗಳು ಮುಂತಾದವುಗಳ ಮಾಲೀಕತ್ವದ ಬಗ್ಗೆ ಕೇಳುತ್ತದೆ. ನಾಗರಿಕರನ್ನು ಧಾನ್ಯಗಳ ಬಳಕೆ, ಕುಡಿಯುವ ನೀರು ಮತ್ತು ಬೆಳಕಿನ ಮೂಲಗಳು, ಶೌಚಾಲಯಗಳ ಪ್ರಕಾರ, ಮತ್ತು ಪ್ರವೇಶ, ತ್ಯಾಜ್ಯ ನೀರಿನ ವಿಲೇವಾರಿ, ಸ್ನಾನ ಮತ್ತು ಅಡುಗೆ ಸೌಲಭ್ಯಗಳು, ಅಡುಗೆಗೆ ಬಳಸುವ ಇಂಧನ ಮತ್ತು ಸಂಪರ್ಕದ ಬಗ್ಗೆಯೂ ಕೇಳಲಾಗುತ್ತದೆ.
ಹೆಚ್ಚುವರಿ ಪ್ರಶ್ನೆಗಳಲ್ಲಿ ಮನೆಯ ನೆಲ, ಗೋಡೆಗಳು ಮತ್ತು ಛಾವಣಿಗೆ ಬಳಸುವ ವಸ್ತುಗಳು, ಅದರ ಸ್ಥಿತಿ, ನಿವಾಸಿಗಳ ಸಂಖ್ಯೆ, ಕೊಠಡಿಗಳ ಸಂಖ್ಯೆ, ವಿವಾಹಿತ ದಂಪತಿಗಳ ಉಪಸ್ಥಿತಿ ಮತ್ತು ಮನೆಯ ಮುಖ್ಯಸ್ಥರು ಮಹಿಳೆಯೇ ಅಥವಾ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರೇ ಎಂಬ ಪ್ರಶ್ನೆಗಳು ಸೇರಿವೆ. ಇನ್ನು ಕೇಂದ್ರ ಗೃಹ ಸಚಿವಾಲಯವು 2027ರಲ್ಲಿ ದೇಶದ ಜನಗಣತಿ ನಡೆಸಲು ನಿರ್ಧರಿಸದೆ. ಇದು ಭಾರತದಲ್ಲಿ ನಡೆಯಲಿರುವ 16ನೇ ಜನಗಣತಿಯಾಗಿದೆ. ಮೊದಲು ದೇಶದ ಹಿಮಚ್ಛಾದಿತ ಪ್ರದೇಶಗಳಲ್ಲಿ 2026ರ ಅಕ್ಟೋಬರ್ 1ರಿಂದಲೇ ಜನಗಣತಿ ಆರಂಭ ಆಗಲಿದೆ. ಉಳಿದ ಭಾಗಗಳಲ್ಲಿ 2027ರ ಮಾರ್ಚ್ 1ರಿಂದ ನಡೆಯಲಿದೆ ಎಂದು ತಿಳಿದುಬಂದಿದೆ.
-
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications