'ಜಾಂಚ್ ಬಚಾಯೆ ಜಾನ್' ಬಾಲಿವುಡ್ ಸೆಲೆಬ್ರಿಟಿಗಳಿಂದ ಕೊರೊನಾ ಜಾಗೃತಿ ಅಭಿಯಾನ
ನವದೆಹಲಿ, ಮೇ 8: ಬಾಲಿವುಡ್ ತಾರೆಯರು 'ಜಾಂಚ್ ಬಚಾಯೆ ಜಾನ್' ಎನ್ನುವ ವಿಶೇಷ ಅಭಿಯಾನವನ್ನು ಆರಂಭಿಸಿದ್ದಾರೆ.
ಬಾಲಿವುಡ್ ನಟರಾದ ಹೃತಿಕ್ ರೋಷನ್, ಕುನಾಲ್ ಕಪೂರ್, ಸೈಫ್ ಅಲಿ ಖಾನ್ ಎಲ್ಲರೂ ಒಟ್ಟಾಗಿ ಎಸಿಟಿ ಗ್ರ್ಯಾಂಟ್ಸ್ ಎನ್ನುವ ಸ್ಟಾರ್ಟ್ ಅಪ್ ತೆರೆದಿದ್ದು ಅದರ ಮೂಲಕ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
ಕೊವಿಡ್ 19 ರೋಗವನ್ನು ತಡೆಗಟ್ಟಲು ತಪಾಸಣೆ ಬಹುಮುಖ್ಯವಾದದ್ದು 'ಪರೀಕ್ಷೆ ಜೀವವನ್ನು ಉಳಿಸಬಲ್ಲದು' ಎಂಬ ಶೀರ್ಷಿಕೆಯಡಿ ಆರಂಭಿಸಿದ್ದಾರೆ.

ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ತಕ್ಷಣವೇ ತಾವೇ ಖುದ್ದಾಗಿ ಹೋಗಿ ಪರೀಕ್ಷೆ ಮಾಡಿಸಬೇಕು.ಸರ್ಕಾರವು ಕೂಡ ರೋಗಿಗಳನ್ನು ಪತ್ತೆ ಹಚ್ಚಲು ಹರಸಾಹಸಪಡುತ್ತಿದೆ. ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳುವುದು ಜನರ ಕೈಯಲ್ಲಿಯೇ ಇದೆ.
ಎಸಿಟಿ ಗ್ರ್ಯಾಂಟ್ಸ್ ಸ್ಪೋಕ್ಸ್‌ಪರ್ಸನ್ ಸುದೀಪ್ತೋ ಸನ್ನಿಗ್ರಾಹಿ ಮಾತನಾಡಿ, ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಲ್ಲಿ ಆಸ್ಪತ್ರೆಗೆ ಹೋಗುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಮೊದಲು ಹೋಗಿ ಪರೀಕ್ಷೆ ಮಾಡಿಸಿ ವೈದ್ಯರಿಂದ ಅಭಿಪ್ರಾಯ ಸಂಗ್ರಹ ಮಾಡಬೇಕು.
ಹೃತಿಕ್ ರೋಷನ್ ಮಾತನಾಡಿ'ನೀವು ನಿಮ್ಮ ವಿರೋಧಿಗಳಿಂದ ಗೆಲುವುದು ಸಾಧಿಸಬೇಕು ಎಂದಿದ್ದರೆ ಮೊದಲು ಆ ವಿರೋಧಿ ಯಾರು ಎನ್ನುವುದನ್ನು ತಿಳಿದುಕೊಳ್ಳಿ. ಕೊರೊನಾ ವೈರಸ್ ವಿರುದ್ಧ ಹೋರಾಡಲು ತಪಾಸಣೆ ಮೊದಲ ಹಂತ ಬಳಿಕ ನೀವು ವೈರಸ್ ವಿರುದ್ಧ ಹೋರಾಡಬಹುದು' ಎಂದು ಭರವಸೆ ತುಂಬಿದ್ದಾರೆ.
ಪ್ರತಿಯೊಬ್ಬರು ಒಬ್ಬರಿಗೊಬ್ಬರು ಸಹಾಯ ಮಾಡಬೇಕು, ಒಗ್ಗಟ್ಟಾಗಿ ರೋಗದ ವಿರುದ್ಧ ಹೋರಾಡಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನವನ್ನು ನಡೆಸಬೇಕು ಎಂದು ಹೇಳಿದ್ದಾರೆ.












Click it and Unblock the Notifications