ನೀಟ್ ಪರೀಕ್ಷೆ ಫಲಿತಾಂಶ ಮಂಗಳವಾರ ಘೋಷಣೆ

Posted By:
Subscribe to Oneindia Kannada

ನವದೆಹಲಿ, ಜೂನ್ 20: ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರನ್ಸ್ ಟೆಸ್ಟ್ (NEET) 2017ರ ಫಲಿತಾಂಶವನ್ನು ಮಂಗಳವಾರ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಕ್ಸಾಮಿನೇಷನ್ (ಸಿಬಿಎಸ್ ಇ)ನಿಂದ ಘೋಷಣೆ ಮಾಡಲಾಗುವುದು.

ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ cbseresults.nic.in ಮತ್ತು cbseneet.nic.inನಲ್ಲಿ ನೋಡಬಹುದು. ರಾಷ್ಟ್ರೀಯ ಮಟ್ಟದ ಈ ಪರೀಕ್ಷೆಯನ್ನು ಎಂಬಿಬಿಎಸ್ ಅಥವಾ ಬಿಡಿಎಸ್ ನ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

CBSE to declare NEET 2017 results today

ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್ NEET 2017ರ ಪದವಿ ಪೂರ್ವ ವೈದ್ಯಕೀಯ ಕೋರ್ಸ್ ಗಳ ಫಲಿತಾಂಶವನ್ನು ಪ್ರಕಟಿಸುವುದಕ್ಕೆ ಸಿಬಿಎಸ್ ಇಗೆ ಅನುಮತಿ ನೀಡಿತ್ತು. ಫಲಿತಾಂಶ ಪ್ರಕಟಿಸುವುದರ ವಿರುದ್ಧದ ಯಾವುದೇ ಅರ್ಜಿಯನ್ನು ಹೈಕೋರ್ಟ್ ಗಳು ಪುರಸ್ಕರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದರಿಂದ ದೇಶದಲ್ಲಿ ಎಂಬಿಬಿಎಸ್ ಹಾಗೂ ಬಿಡಿಎಸ್ ಪ್ರವೇಶಕ್ಕೆ ಐವತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನೀಟ್ ಪರೀಕ್ಷೆ ಮೇ ಏಳರಂದು ನಡೆದಿತ್ತು. ದೇಶದಾದ್ಯಂತ ಹನ್ನೊಂದು ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ, ಬೆಂಗಾಲಿ, ಅಸ್ಸಾಮಿ, ಗುಜರಾತಿ ಮತ್ತು ಒಡಿಯಾ ಸೇರಿ ಹತ್ತು ಪ್ರಾದೇಶ್ಸಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು.

ನೀಟ್ ಪರೀಕ್ಷೆ ರದ್ದು ಮಾಡಬೇಕು. ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳ ಪ್ರಶ್ನೆಗಳಲ್ಲಿ ವ್ಯತ್ಯಾಸವಿದೆ ಎಂದು ಮದ್ರಾಸ್ ಹಾಗೂ ಗುಜರಾತ್ ಹೈ ಕೋರ್ಟ್ ನಲ್ಲಿ ಅರ್ಜಿ ಹಾಕಿಕೊಳ್ಳಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The results for the National Eligibility cum Entrance Test (NEET) 2017 will be declared by the Central Board of Secondary Examination (CBSE) on Tuesday.
Please Wait while comments are loading...