ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Term 2: ಏಪ್ರಿಲ್ 26ರಿಂದ ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ

|
Google Oneindia Kannada News

ನವದೆಹಲಿ, ಫೆಬ್ರವರಿ 10: ಸಿಬಿಎಸ್ಇ 10, 12 ನೇ ತರಗತಿಗಳ ಎರಡನೇ ಅವಧಿ ಬೋರ್ಡ್ ಪರೀಕ್ಷೆಗಳು ಏ.26 ರಿಂದ ಆಫ್ ಲೈನ್‌ನಲ್ಲಿ ಪ್ರಾರಂಭವಾಗಲಿವೆ.

ಥಿಯರಿ ಪರೀಕ್ಷೆಗಳು 2022 ರ ಏಪ್ರಿಲ್ 26 ರಿಂದ ಪ್ರಾರಂಭವಾಗಲಿದ್ದು, 10-12 ನೇ ತರಗತಿಗಳ ಡೇಟ್ ಶೀಟ್ ನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಸಂಬಂಧಪಟ್ಟ ಹಲವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಿಬಿಎಸ್ಇ ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಡು ಎರಡನೇ ಅವಧಿಯ ಬೋರ್ಡ್ ಪರೀಕ್ಷೆಯನ್ನು ಆಫ್ ಲೈನ್ ಮೋಡ್ ನಲ್ಲಿಯೇ ನಡೆಸಲು ತೀರ್ಮಾನಿಸಿದೆ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸನ್ಯಮ್ ಭಾರದ್ವಾಜ್ ತಿಳಿಸಿದ್ದಾರೆ.

CBSE

ಕೇಂದ್ರ ಪ್ರೌಢಶಿಕ್ಷಣ ಮಂಡಳಿ 10ನೇ ತರಗತಿ ಮತ್ತು 12ನೇ ತರಗತಿ ಟರ್ಮ್ 1ರ ಫಲಿತಾಂಶವನ್ನು ಅತೀ ಶೀಘ್ರದಲ್ಲಿ ಪ್ರಕಟ ಮಾಡಲಿದೆ ಎಂದು ತಿಳಿದುಬಂದಿದೆ.

ಆದರೆ 10, 12 ನೇ ತರಗತಿಯ ಫಲಿತಾಂಶದ ದಿನಾಂಕವನ್ನು ಮಂಡಳಿಯು ಇನ್ನೂ ಬಹಿರಂಗಪಡಿಸಿಲ್ಲ. 10, 12 ನೇ ತರಗತಿ ಪರೀಕ್ಷೆಗಳಿಗೆ ಹಾಜರಾಗಿರುವ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು CBSEಯ ಅಧಿಕೃತ ಸೈಟ್‌ ನಲ್ಲಿ https://www.cbse.gov.in/ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪರಿಶೀಲಿಸಬಹುದು.

CBSE 10ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಲಿಂಗ ಅಸಮಾನತೆ: ತೀವ್ರ ವಿರೋಧCBSE 10ನೇ ತರಗತಿ ಪ್ರಶ್ನೆ ಪತ್ರಿಕೆಯಲ್ಲಿ ಲಿಂಗ ಅಸಮಾನತೆ: ತೀವ್ರ ವಿರೋಧ

ಸದ್ಯ ವಿದ್ಯಾರ್ಥಿಗಳು ಟರ್ಮ್‌ 1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನಷ್ಟೇ ಬಿಡುಗಡೆ ಮಾಡಲಿದ್ದು, ವಿದ್ಯಾರ್ಥಿಗಳು ಪಾಸ್‌ ಅಥವಾ ಫೇಲ್‌ ಎಂಬುದನ್ನು ತಿಳಿಸುವುದಿಲ್ಲ. ಸಿಬಿಎಸ್‌ಇ ಟರ್ಮ್‌ 1 ಪರೀಕ್ಷೆ ಫಲಿತಾಂಶವನ್ನು ಚೆಕ್‌ ಮಾಡಲು ವಿದ್ಯಾರ್ಥಿಗಳು cbse.gov.in ಅಥವಾ cbseresults.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

ಫಲಿತಾಂಶವನ್ನು ಟರ್ಮ್‌ 1 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಹಾಗೂ ಟರ್ಮ್‌ 2 ಪರೀಕ್ಷೆ ಮತ್ತು ಇಂಟರ್‌ನಲ್‌ ಮಾರ್ಕ್ಸ್‌ ಆಧಾರದಲ್ಲಿ ಅಂದರೆ ಶೇಕಡ.50 ಅಂಕಗಳ ವ್ಹೇಟೇಜ್‌ ನೀಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.

ವಿದ್ಯಾರ್ಥಿಗಳು ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ ವೆಬ್‌ಸೈಟ್‌ cbse.gov.in ಅಥವಾ cbseresults.nic.in ಗೆ ಭೇಟಿ ನೀಡಿ. ಓಪನ್‌ ಅದ ಪೇಜ್‌ನಲ್ಲಿ ರಿಜಿಸ್ಟ್ರೇಷನ್‌ ನಂಬರ್ ನೀಡಿ ಲಾಗಿನ್‌ ಆಗಿ. ಫಲಿತಾಂಶ ಚೆಕ್ ಮಾಡಿ. ಅಗತ್ಯವಿದ್ದಲ್ಲಿ ದಾಖಲೆಯನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ.

ಡಿಜಿ ಲಾಕರ್ ಮೂಲಕವು ವೀಕ್ಷಿಸಬಹುದು: ಡಿಜಿಲಾಕರ್ ಆ್ಯಪ್‌ನಲ್ಲಿ ಅಭ್ಯರ್ಥಿಗಳು ತಮ್ಮ 10, 12ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸಬಹುದು. ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು ಅಥವಾ ವೆಬ್‌ಸೈಟ್ digilocker.gov.in ನಲ್ಲಿ ಪರಿಶೀಲಿಸಬಹುದು.

English summary
The Central Board of Secondary Education will conduct second-term board examination for classes 10 and 12 in offline mode from April 26, officials said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X