ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ ಪರೀಕ್ಷಾ ಶುಲ್ಕ ಭಾರಿ ಹೆಚ್ಚಳ: ಸಾಮಾನ್ಯ ವರ್ಗದವರಿಗೆ ದುಪ್ಪಟ್ಟು!

|
Google Oneindia Kannada News

ನವದೆಹಲಿ, ಆಗಸ್ಟ್ 12: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷಾ ಶುಲ್ಕದಲ್ಲಿ ಪರಿಷ್ಕರಣೆ ಮಾಡಿದ್ದು, ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯವರ್ಗದ ಎಲ್ಲರೂ ಅಧಿಕ ಪರೀಕ್ಷಾ ಶುಲ್ಕ ಪಾವತಿಸುವಂತಾಗಿದೆ.

10ನೇ ತರಗತಿ ಮಂಡಳಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿದ್ದಾಗಲೇ ಪರೀಕ್ಷಾ ನೋಂದಣಿ ಮಾಡಿಸಿಕೊಂಡಿರುತ್ತಾರೆ. ಹಾಗೆಯೇ 11ನೆಯ ತರಗತಿಯಲ್ಲಿದ್ದಾಗ 12ನೇ ತರಗತಿಗೆ ನೋಂದಣಿ ಮಾಡಲಾಗುತ್ತದೆ. ಮಂಡಳಿ ಕಳೆದ ವಾರ ಹೊಸ ಪರಿಷ್ಕೃತ ಶುಲ್ಕ ದರವನ್ನು ಪ್ರಕಟಿಸಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಿರುವ ಶಾಲೆಗಳು ಬಾಕಿ ಉಳಿದಿರುವ ಮೊತ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವಂತೆ ಸೂಚಿಸಿದೆ.

ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳು ಐದು ವಿಷಯಗಳಿಗೆ 1,200 ರೂ. ಪಾವತಿಸಬೇಕಿದೆ. ಈ ಮೊದಲು ಇಷ್ಟೇ ವಿಷಯಗಳಿಗೆ 50 ರೂ ಪಾವತಿ ಮಾಡಿದ್ದರೆ ಸಾಕಿತ್ತು. ಈಗ 24 ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಹೆಚ್ಚಳವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಅನ್ವಯವಾಗಲಿದೆ. ಭಾರತದಲ್ಲಿ ಮಾತ್ರವಲ್ಲದೆ, ಸಿಬಿಎಸ್‌ಇ ಅಡಿಯಲ್ಲಿರುವ ವಿದೇಶಿ ಶಾಲೆಗಳಿಗೂ ಶುಲ್ಕ ಹೆಚ್ಚಳ ಅನ್ವಯಿಸುತ್ತದೆ.

ಸಿಬಿಎಸ್‌ಇ 10ನೇ ತರಗತಿ: ಶೇ.91.1ರಷ್ಟು ಫಲಿತಾಂಶ ಸಿಬಿಎಸ್‌ಇ 10ನೇ ತರಗತಿ: ಶೇ.91.1ರಷ್ಟು ಫಲಿತಾಂಶ

ಇತರೆ ಶಿಕ್ಷಣ ಮಂಡಳಿಗಳ ಪರೀಕ್ಷಾ ಶುಲ್ಕ ರಚನೆಗೆ ಅನುಗುಣವಾಗಿ ಏರಿಕೆ ಮಾಡಲಾಗಿದೆ. ಉದಾಹರಣೆಗೆ ನ್ಯಾಷನಲ್ ಸ್ಕೂಲ್ ಆಫ್ ಓಪನ್ ಲರ್ನಿಂಗ್ (ಎನ್‌ಐಓಎಸ್) ಪುರುಷ ಅಭ್ಯರ್ಥಿಗಳಿಗೆ 1,800 ರೂ. ಶುಲ್ಕ ವಿಧಿಸಿದರೆ, ಮಹಿಳಾ ಅಭ್ಯರ್ಥಿಗಳಿಗೆ 1,400 ರೂ. ವಿಧಿಸುತ್ತಿದೆ. ಎಸ್‌ಸಿ/ಎಸ್ಟಿ ವಿದ್ಯಾರ್ಥಿಗಳಿಗೆ 1,200 ರೂ. ವಿಧಿಸಲಾಗುತ್ತಿದೆ ಎಂದು ಸಿಬಿಎಸ್‌ಇ ಹೋಲಿಕೆ ಮಾಡಿದೆ.

ಸಾಮಾನ್ಯ ವರ್ಗದ ಶುಲ್ಕ ದುಪ್ಪಟ್ಟು

ಸಾಮಾನ್ಯ ವರ್ಗದ ಶುಲ್ಕ ದುಪ್ಪಟ್ಟು

ಕೇವಲ 50 ರೂಪಾಯಿ ಪರೀಕ್ಷಾ ಶುಲ್ಕ ನೀಡಬೇಕಿದ್ದ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳು ಇನ್ನು 1,200 ರೂಪಾಯಿ ಶುಲ್ಕ ಪಾವತಿಸಬೇಕಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ದುಪ್ಪಟ್ಟಾಗಿದ್ದು, 1,500 ರೂಪಾಯಿಗೆ (ಒಂದು ವಿಷಯಕ್ಕೆ 300 ರೂ) ಏರಿಸಲಾಗಿದೆ. ಇದುವರೆಗೂ ಈ ವರ್ಗದ ವಿದ್ಯಾರ್ಥಿಗಳಿಗೆ 750 ರೂ. (ಒಂದು ವಿಷಯಕ್ಕೆ ತಲಾ 150 ರೂ.) ಶುಲ್ಕ ವಿಧಿಸಲಾಗುತ್ತಿತ್ತು.

ಪರೀಕ್ಷೆ ಬರೆಯಲು ಅವಕಾಶವಿಲ್ಲ

ಪರೀಕ್ಷೆ ಬರೆಯಲು ಅವಕಾಶವಿಲ್ಲ

ವಲಸೆ ಶುಲ್ಕವು ಈ ಮೊದಲು 150 ರೂ. ಇತ್ತು. ಪರಿಷ್ಕರಣೆಯ ಬಳಿಕ ಅದನ್ನು 300 ರೂ.ಗೆ ಹೆಚ್ಚಿಸಲಾಗಿದೆ. ಶೇ 100ರಷ್ಟು ಅಂಧತೆಯುಳ್ಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಈ ಪರೀಕ್ಷಾ ಶುಲ್ಕವು 10 ಮತ್ತು 12ನೇ ತರಗತಿ ಎರಡಕ್ಕೂ ಅನ್ವಯವಾಗಲಿದೆ. ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿ ಮಾಡಿ ಹೆಸರು ನೋಂದಾಯಿಸದೆಯೇ ಇರುವ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗುವುದಿಲ್ಲ.

ವಿಜ್ಞಾನಿಯಾಗಲು ಬಯಸಿದ್ದ ವಿದ್ಯಾರ್ಥಿ ಶ್ರೀಧರ್ ದುರಂತ ಅಂತ್ಯವಿಜ್ಞಾನಿಯಾಗಲು ಬಯಸಿದ್ದ ವಿದ್ಯಾರ್ಥಿ ಶ್ರೀಧರ್ ದುರಂತ ಅಂತ್ಯ

ವಿದೇಶಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೂ ಅನ್ವಯ

ವಿದೇಶಿ ಸಿಬಿಎಸ್‌ಇ ವಿದ್ಯಾರ್ಥಿಗಳಿಗೂ ಅನ್ವಯ

ವಿದೇಶಗಳಲ್ಲಿನ ಸಿಬಿಎಸ್ಇ ಶಾಲೆಗಳಲ್ಲಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು 10 ಮತ್ತು 12 ತರಗತಿಗಳ ಪರೀಕ್ಷೆಗಳ ಐದು ವಿಷಯಗಳಿಗೆ ಈ ಮೊದಲು 5,000 ರೂ. ಪಾವತಿಸಬೇಕಿತ್ತು. ಅವರು ಇನ್ನು ಮುಂದೆ 10,000 ರೂಪಾಯಿ ಪಾವತಿಸಬೇಕು. ಪ್ರತಿ ಹೆಚ್ಚುವರಿ ವಿಷಯಕ್ಕೆ 1,000 ರೂ. ಶುಲ್ಕ ಪಾವತಿ ಮಾಡಬೇಕಿದ್ದ ವಿದ್ಯಾರ್ಥಿಗಳು, ಇನ್ನು 2,000 ರೂ. ಪಾವತಿ ಮಾಡಬೇಕಾಗುತ್ತದೆ.

ಸಿಬಿಎಸ್ಇ ಕ್ಲಾಸ್ 10 ಫಲಿತಾಂಶ: ಅಗ್ರಸ್ಥಾನ ಹಂಚಿಕೊಂಡ 13 ಮಂದಿ ಸಿಬಿಎಸ್ಇ ಕ್ಲಾಸ್ 10 ಫಲಿತಾಂಶ: ಅಗ್ರಸ್ಥಾನ ಹಂಚಿಕೊಂಡ 13 ಮಂದಿ

ಐದು ವರ್ಷದ ಬಳಿಕ ಹೆಚ್ಚಳ

ಐದು ವರ್ಷದ ಬಳಿಕ ಹೆಚ್ಚಳ

ಈ ಶುಲ್ಕ ಏರಿಕೆಯು ರಾಜಧಾನಿ ದೆಹಲಿಗೆ ಮಾತ್ರ ಅನ್ವಯವಾಗುತ್ತದೆ ಎಂಬ ಸುದ್ದಿ ಹರಡಿತ್ತು. ಆದರೆ, ಬಳಿಕ ಸ್ಪಷ್ಟೀಕರಣ ನೀಡಿರುವ ಮಂಡಳಿಯು, ಇಡೀ ದೇಶಕ್ಕೆ ಹೊಸ ಶುಲ್ಕ ನೀತಿ ಅನ್ವಯವಾಗಲಿದೆ ಎಂದು ತಿಳಿಸಿದೆ. ಈ ಶುಲ್ಕ ಏರಿಕೆಯು ಐದು ವರ್ಷಗಳ ಬಳಿಕ ಮಾಡಲಾಗಿದೆ. ಕಳೆದ ಐದು ವರ್ಷಗಳಿಂದ ಮಂಡಳಿಯು ಪರೀಕ್ಷೆ ಶುಲ್ಕ ಹೆಚ್ಚಳ ಮಾಡಿರಲಿಲ್ಲ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

English summary
CBSE has increased the fees of class 10 and 12 board examiniations. sc st students have to pay Rs 1,200 for five subjects and general category students to pay Rs 1,500.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X