ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಎಸ್‌ಇ 10ನೇ ಕ್ಲಾಸ್‌ ಫಲಿತಾಂಶ: ನಾಲ್ವರಿಗೆ 500ಕ್ಕೆ 499 ಅಂಕ

By Nayana
|
Google Oneindia Kannada News

ನವದೆಹಲಿ, ಮೇ 29: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು 10 ನೇ ತರಗತಿ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ.

ಕೇಂದ್ರೀಯ ಮಾಧ್ಯಮಿಕ ಪರೀಕ್ಷಾ ಮಂಡಳಿ ಏರ್ಪಡಿಸಿದ್ದ 10 ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 500 ಅಂಕಗಳ ಪೈಕಿ 499 ಅಂಕಗಳನ್ನು ನಾಲ್ವರು ಪಡೆದುಕೊಂಡಿರುವುದು ಈ ಬಾರಿಯ ವಿಶೇಷ.

ಗುರುಗ್ರಾಮದ ಪ್ರಖರ್ ಮಿತ್ತಲ್, ಬಿಜ್ನೋರ್‌ನ ರಿಮ್‌ಜಿಮ್‌ ಅಗರ್‌ವಾಲ್‌, ಶಮ್ಲಿಯ ನಂದಿನಿ, ಕೊಚ್ಚಿನ್‌ನ ಶ್ರೀಲಕ್ಷ್ಮೀ 500 ಅಂಕಗಳಿಗೆ 499 ಅಂಕಗಳನ್ನು ಪಡೆದು ದೇಶಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ಮಂಗಳವಾರ ಸಂಜೆ 4 ಗಂಟೆಗೆ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಮುಂಚಿತವಾಗಿಯೇ ಮಂಡಳಿ ಪ್ರಕಟಿಸಿದೆ. ಒಟ್ಟು ಶೇ.86.70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಶೇ.88.67, ಬಾಲಕರು 85.32 ರಷ್ಟು ಉತ್ತೀರ್ಣರಾಗಿದ್ದು, ಸಿಬಿಎಸ್‌ಇ 12 ಪರೀಕ್ಷೆಯಂತೇ 10ನೇ ತರಗತಿಯಲ್ಲೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

10ನೇ ತರಗತಿ ಪರೀಕ್ಷೆಯು ಮಾರ್ಚ್ 5ರಿಂದ ಎಪ್ರಿಲ್ 4ರವರೆಗೆ ನಡೆದಿತ್ತು. 16, 38,420 ವಿದ್ಯಾರ್ಥಿಗಳು 1೦ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದು 4453 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಮೇ 29ಕ್ಕೆ ಹೊರಬೀಳಲಿದೆ ಸಿಬಿಎಸ್‌ಇ 10ನೇ ಕ್ಲಾಸ್ ಫಲಿತಾಂಶ ಮೇ 29ಕ್ಕೆ ಹೊರಬೀಳಲಿದೆ ಸಿಬಿಎಸ್‌ಇ 10ನೇ ಕ್ಲಾಸ್ ಫಲಿತಾಂಶ

cbseresults.nic.in ಅಥವಾ cbse.nic.in ಅಥವಾ results.nic.in ಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು. ಸಿಬಿಎಸ್ಇ 10ನೇ ಫಲಿತಾಂಶ ವೀಕ್ಷಣೆಗೆ ಫಾಲೋ ಮಾಡಬೇಕಾದ ಸ್ಟೆಪ್ಸ್: ಸ್ಟೆಪ್ 1) ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ ಸ್ಟೆಪ್ 2) ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಸೆಕ್ಷನ್ ಮೇಲ್ ಕ್ಲಿಕ್ ಮಾಡಿ ಸ್ಟೆಪ್ 3) ಸಿಬಿಎಸ್ಇ 10ನೇ ತರಗತಿ ಬೋರ್ಡ್ ಎಕ್ಸಾಂ ರಿಸಲ್ಟ್ 2018 ಲಿಂಕ್ ಮೇಲೆ ಕ್ಲಿಕ್ ಮಾಡಿ ಸ್ಟೆಪ್ 4) ನಿಮ್ಮ ಪ್ರವೇಶ ಪತ್ರದ ಡೀಟೆಲ್ಸ್ ನಮೂದಿಸಿ ಸ್ಟೆಪ್ 5) ಡಿಟೇಲ್ಸ್ ನಮೂದಿಸಿದ ಕೂಡಲೇ ನಿಮ್ಮ ಫಲಿತಾಂಶ ಪರದೆ ಮೇಲೆ ಮೂಡುತ್ತದೆ ಸ್ಟೆಪ್ 6) ಕೊನೆಯದಾಗಿ ಫಲಿತಾಂಶದ ಪ್ರಿಂಟೌಟ್ ತೆಗೆದುಕೊಳ್ಳಬಹುದು.

CBSE Class 10th Result 2018 Declared

ಬಿಎಸ್‌ಎನ್‌:57766, ಏರ್‌ಸೆಲ್‌: 5800002, ಐಡಿಯಾ: 54321,51234, ಏರ್‌ಟೆಲ್‌: 54321202 ಕ್ಕೆ ಎಸ್‌ಎಂಎಸ್‌ ಮಾಡುವ ಮೂಲಕ ಫಲಿತಾಂಶ ಪಡೆಯಬಹುದು.ಪ್ರತಿ ಎಸ್‌ಎಂಎಸ್‌ಗೆ 50 ಪೈಸೆ ವೆಚ್ಚವಾಗುತ್ತದೆ.

English summary
The CBSE Result 2018, CBSE 10th Result 2018 was declared by the Central Board of Secondary Education on Tuesday. To check out the upcoming CBSE 10th Result 2018, CBSE Class 10 Result 2018, CBSE Result 2018 all the candidates are highly recommended to keep a sharp eye at the official website of department cbse.nic.in, cbseresults.nic.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X