• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಮಾದರಿ ಕುರಿತು ಸುಪ್ರೀಂಗೆ ಮಾಹಿತಿ

|
Google Oneindia Kannada News

ನವದೆಹಲಿ, ಜೂನ್ 17: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಮಾದರಿ ಕುರಿತು ಬೋರ್ಡ್ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

30:30:40 ರ ಅನುಪಾತದಲ್ಲಿ ಅಂಕ ನೀಡಿ 12 ನೇ ತರಗತಿಯ ಫಲಿತಾಂಶ ವಾಗಲಿದ್ದು, 10 ಮತ್ತು 11ನೇ ತರಗತಿಯಿಂದ ಪರಿಗಣಿಸಲ್ಪಡುವ ಶೇ.60ರಷ್ಟು ಅಂಕಗಳಲ್ಲಿ ಶೇ.30ರಷ್ಟು ಅಂಕ 11ನೇ ತರಗತಿಯ ಅಂತಿಮ ಪರೀಕ್ಷೆಯದ್ದಾಗಿರಲಿದ್ದು, ಬಾಕಿ ಶೇ.30ರಷ್ಟು ಅಂಕ 10ನೇ ತರಗತಿಗಳಲ್ಲಿ ನಡೆಸಲಾದ ಪರೀಕ್ಷೆಗಳಿಂದ ಬೆಸ್ಟ್ ಆಫ್​ ತ್ರಿ ಮಾದರಿಯಲ್ಲಿ ಪರಿಗಣಿಸಲಾಗುವುದು ಎಂದು ಬೋರ್ಡ್​ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಿಬಿಎಸ್ಇ ಪರೀಕ್ಷೆ ಭವಿಷ್ಯ ನಿರ್ಧಾರ, ರಾಜನಾಥ್ ನೇತೃತ್ವದಲ್ಲಿ ಸಭೆಸಿಬಿಎಸ್ಇ ಪರೀಕ್ಷೆ ಭವಿಷ್ಯ ನಿರ್ಧಾರ, ರಾಜನಾಥ್ ನೇತೃತ್ವದಲ್ಲಿ ಸಭೆ

ಸಿಬಿಎಸ್​ಇ 12ನೇ ತರಗತಿಯ ಫಲಿತಾಂಶ ಜುಲೈ 31ರ ಸಮಯದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅಂಕ ಪರಿಗಣನೆಯ ಮಾನದಂಡದ ಕುರಿತು ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡುತ್ತಿರುವ ಸಿಬಿಎಸ್​ಇ ಬೋರ್ಡ್​, 12ನೇ ತರಗತಿ ಮಕ್ಕಳ ಅಂಕವನ್ನು 11ನೇ ತರಗತಿ ಮತ್ತು 10ನೇ ತರಗತಿ ಪರೀಕ್ಷಾ ಫಲಿತಾಂಶದ ಸಹಾಯದೊಂದಿಗೆ ನಿರ್ಧರಿಸುವುದಾಗಿ ತಿಳಿಸಿದೆ.

ಅಲ್ಲದೇ, ಒಟ್ಟಾರೆ ಫಲಿತಾಂಶಕ್ಕೆ 12ನೇ ತರಗತಿ ಮಕ್ಕಳ ಈ ಹಿಂದಿನ ಪೂರ್ವ ಸಿದ್ಧತಾ ಪರೀಕ್ಷೆಗಳ ಅಂಕವೂ ಪರಿಗಣಿಸಲ್ಪಡುತ್ತದೆ ಎಂದು ಮಾಹಿತಿ ನೀಡಿದೆ.

ಸಿಬಿಎಸ್ಇ, ಐಸಿಎಸ್ಇ ಫಲಿತಾಂಶದ ಮಾನದಂಡದ ವಿವರ ನೀಡಿದ್ದಾರೆ. ಅದನ್ನು ಈಗ ಸಿಬಿಎಸ್ಇ ಪರ ವಕೀಲರು ವಿವರಿಸಲಿ ಎಂದು ಸುಪ್ರೀಂಕೋರ್ಟ್​ ಅಪೇಕ್ಷಿಸಿದ್ದು, ನ್ಯಾಯಮೂರ್ತಿ ಎ ಎಂ ಖಾನ್​ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

ಈ ಪೈಕಿ ಶೇ.40ರಷ್ಟು ಅಂಕವು 12ನೇ ತರಗತಿಯಲ್ಲಿ ನಡೆಸಲಾದ ಬೇರೆ ಪರೀಕ್ಷೆಗಳ ಆಧಾರದಿಂದ ಪರಿಗಣಿಸಲ್ಪಟ್ಟರೆ ಶೇ.60ರಷ್ಟು ಅಂಕವು 11 ಹಾಗೂ 10ನೇ ತರಗತಿಯ ಪರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಲಾಗಿದೆ.

ಇದೇ ಮಾನದಂಡದ ಆಧಾರದಲ್ಲಿ ಫಲಿತಾಂಶ ನೀಡುವ ಬಗ್ಗೆ 13 ಸದಸ್ಯರ ಸಮಿತಿ ಸಿಬಿಎಸ್​ಇಗೆ ಶಿಫಾರಸು ಮಾಡಿದ್ದು, ಇಂದು ಈ ಬಗ್ಗೆ ಸುಪ್ರೀಂಕೋರ್ಟ್​ಗೆ ಸಿಬಿಎಸ್ಇ ತನ್ನ ತೀರ್ಮಾನ ತಿಳಿಸುತ್ತಿದೆ.

English summary
Class 12 results will be announced by July 31 and will factor in students' performance over three years or from Class 10, the Central Board of Secondary Education (CBSE) told the Supreme Court today, announcing its assessment plan after exams were cancelled because of the Covid crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X