Sameer Wankhede CBI: ಭ್ರಷ್ಟಾಚಾರದ ಆರೋಪ: ಸಮೀರ್ ವಾಂಖೆಡೆ ವಿರುದ್ಧ ಕ್ರಮಕ್ಕೆ ಮುಂದಾದ ಸಿಬಿಐಸಿ
Sameer Wankhede CBI: ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ನಿರ್ಧರಿಸಿದೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎನ್‌ಸಿಬಿ ಮುಂಬೈನ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಸಿಬಿಐ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ಸತ್ಯಮೇವ ಜಯತೆ" ಎಂದು ಹೇಳಿದ್ದಾರೆ.

ಹೈ-ಪ್ರೊಫೈಲ್ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಿಡುಗಡೆಗೆ ಬದಲಾಗಿ ನಟ ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಲು ಸಮೀರ್ ವಾಂಖೆಡೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಿಜಿಲೆನ್ಸ್ ವರದಿಯನ್ನು ಸಿಬಿಐಸಿಯೊಂದಿಗೆ ಹಂಚಿಕೊಳ್ಳಲಾಗಿದೆ. ಇದನ್ನು ಸಿಬಿಐಸಿ ಇಲಾಖೆ ಸಿಸಿಎಸ್ ನಿಯಮಗಳ ಪ್ರಕಾರ ಪರಿಗಣನೆಗೆ ತೆಗೆದುಕೊಂಡಿದೆ. ಜೊತೆಗೆ ಸಿಬಿಐಸಿ ವಾಂಖೆಡೆ ವಿರುದ್ಧ ಇಲಾಖಾ ಪ್ರಕ್ರಿಯೆ ಆರಂಭಿಸಲಿದೆ.
ಮುಂಬೈ ಕ್ರೂಸ್ ಪ್ರಕರಣದಲ್ಲಿ ವಿಜಿಲೆನ್ಸ್ ವಿಚಾರಣೆಯಿಂದಾಗಿ ಎನ್‌ಸಿಬಿಯಿಂದ ಸಮೀರ್ ವಾಂಖೆಡೆ ಅವರನ್ನು ಚೆನ್ನೈನಲ್ಲಿನ ಇಲಾಖೆಯ ತೆರಿಗೆ ಪಾವತಿದಾರರ ಸೇವಾ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಬಳಿಕ ಅವರ ಮೇಲಿರುವ ಆರೋಪಗಳ ಮೇಲಿನ ತನಿಖೆ ನಡೆಸಲಾಗುತ್ತಿದೆ.
Mumbai | "Satyameva Jayate," says former Zonal Director, NCB Mumbai, Sameer Wankhede as he leaves from his residence for CBI office, for questioning in connection with a case related to Aryan Khan drugs on cruise case. pic.twitter.com/BtWPUaY9vX
— ANI (@ANI) May 20, 2023
ಎನ್‌ಸಿಬಿಯ ವಿಜಿಲೆನ್ಸ್ ವರದಿಯನ್ನು ಹೊರತುಪಡಿಸಿ, ವಾಂಖೆಡೆಗೆ ಸಂಬಂಧಿಸಿದ ಇತರ ಕೆಲವು ಶಿಸ್ತಿನ ಸಮಸ್ಯೆಗಳು ಬೆಳಕಿಗೆ ಬಂದಿವೆ ಎಂದು ಸಿಬಿಐಸಿ ಉನ್ನತ ಮೂಲಗಳು ತಿಳಿಸಿವೆ. ಎನ್‌ಸಿಬಿಯ ವಿಜಿಲೆನ್ಸ್ ವರದಿಯು ವಾಂಖೆಡೆ ವಿರುದ್ಧ ಭ್ರಷ್ಟಾಚಾರ, ದುರ್ನಡತೆ, ಸುಲಿಗೆ, ಸಿಸಿಎಸ್ ನಿಯಮಗಳ ಉಲ್ಲಂಘನೆ ಮತ್ತು ಅಸಮಂಜಸ ಆಸ್ತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಿದೆ. ವಾಂಖೆಡೆ ವಿರುದ್ಧ ದಾಖಲಾಗಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸುಲಿಗೆಯ ಸೆಕ್ಷನ್‌ಗಳನ್ನು ಉಲ್ಲೇಖಿಸಲಾಗಿದೆ.
ಸಿಬಿಐಸಿ ಕ್ರಮವು ಇಲಾಖೆಯ ಶಿಸ್ತಿನ ಕಾರ್ಯವಿಧಾನವನ್ನು ಪೂರ್ಣಗೊಳಿಸಿದ ನಂತರ ಇಲಾಖೆಯಿಂದ ವಾಂಖೆಡೆಯ ಮೇಲೆ ಅಮಾನತು ಅಥವಾ ಮುಂದಿನ ಕ್ರಮ ತೆಗೆದುಕೊಳ್ಳಬಹುದು.

ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ವಿಜಿಲೆನ್ಸ್ ವರದಿಯ ಆಧಾರದ ಮೇಲೆ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ. 2021ರ ಅಕ್ಟೋಬರ್‌ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ವಾಂಖೆಡೆ ಬಂಧಿಸಿದ್ದರು.
ಸಿಬಿಐ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7, 7 ಎ ಮತ್ತು 12 ಹಾಗೂ ಐಪಿಸಿಯ ಸೆಕ್ಷನ್ 120 ಬಿ (ಅಪರಾಧದ ಪಿತೂರಿ) ಮತ್ತು 388 (ಬೆದರಿಕೆಯ ಮೂಲಕ ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ 25 ಕೋಟಿ ರೂ. ಸುಲಿಗೆಗೆ ಮುಂದಾಗಿದ್ದರು ಎಂಬುದು ಎಫ್‌ಐಆರ್‌ನ ವಿವರಗಳಿಂದ ತಿಳಿದುಬಂದಿದೆ. ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಸಮೀರ್ ವಾಂಖೆಡೆ ಮತ್ತು ಇತರ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ತನಿಖೆಯನ್ನು ಪ್ರಾರಂಭಿಸಿತು.

6 ದೇಶಗಳಿಗೆ ಪ್ರಯಾಣ
2017 ರಿಂದ 2021 ರವರೆಗೆ ಅಂದರೆ ಐದು ವರ್ಷಗಳಲ್ಲಿ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಆರು ವಿದೇಶಿ ಪ್ರವಾಸಗಳನ್ನು ಮಾಡಿದ್ದಾರೆ ಎನ್ನಲಾಗಿದ್ದು, ಯುಕೆ, ಐರ್ಲೆಂಡ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್ಗೆ ಪ್ರವಾಸ ಮಾಡಿದ್ದ ದಾಖಲೆಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಇಲ್ಲಿ ಅವರು 55 ದಿನಗಳನ್ನು ಕಳೆದು, 8.75 ಲಕ್ಷ ರೂ. ಇಷ್ಟು ಹಣವನ್ನು ವಿಮಾನ ಟಿಕೆಟ್‌ಗಳಿಗೆ ಮಾತ್ರವೇ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
22 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ಖರೀದಿ
ಸಮೀರ್ ವಾಂಖೆಡೆ ಅವರ ದುಬಾರಿ ವಾಚ್‌ಗಳು ಮತ್ತು ಇತರ ಆಸ್ತಿಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಇದು ಅವರ ಅಸಮಾನ ಆಸ್ತಿಯ ಭಾಗವಾಗಿದೆ. ವಾಂಖೆಡೆ ಅವರ ಬಳಿ ದುಬಾರಿ ರೋಲೆಕ್ಸ್ ವಾಚ್ ಕೂಡ ಇದ್ದು, ಎಂಆರ್‌ಪಿಗಿಂತ ಕಡಿಮೆ ಬೆಲೆಗೆ ಅವರಿಗೆ ಮಾರಾಟ ಮಾಡಲಾಗಿತ್ತು. ವಾಚ್‌ನ ಬೆಲೆ 22 ಲಕ್ಷ ರೂಪಾಯಿ ಆದರೆ ಅವರು ಅದನ್ನು 17 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದಾರೆ. ಅವರು ಮುಂಬೈನಲ್ಲಿ ನಾಲ್ಕು ಫ್ಲಾಟ್‌ಗಳು ಮತ್ತು ವಾಶಿಮ್‌ನಲ್ಲಿ 41.688 ಎಕರೆ ಭೂಮಿಯನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಾಂಖೆಡೆ ಬಳಿ 5 ಫ್ಲಾಟ್‌ಗಳು
ಮುಂಬೈ ಮಾತ್ರವಲ್ಲದೇ ಗೋರೆಗಾಂವ್‌ನಲ್ಲಿ 2.45 ಕೋಟಿ ವೆಚ್ಚದ ಐದನೇ ಫ್ಲಾಟ್‌ಗೆ 82.8 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಸಮೀರ್ ವಾಂಖೆಡೆ ಹೇಳಿಕೊಂಡಿದ್ದಾರೆ. ಮದುವೆಗೂ ಮುನ್ನ 1.25 ಕೋಟಿ ನೀಡಿ ಪತ್ನಿ ಖರೀದಿಸಿದ ಫ್ಲಾಟ್ ಬಗ್ಗೆಯೂ ಉಲ್ಲೇಖವಿದೆ. ಆದರೆ, ವಾಂಖೆಡೆ ಮತ್ತು ಅವರ ಪತ್ನಿಯ ಆದಾಯ ತೆರಿಗೆ ರಿಟರ್ನ್ಸ್ ಅವರ ವಾರ್ಷಿಕ ಆದಾಯ 45,61,460 ರೂ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ.
-
12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ












Click it and Unblock the Notifications