ಸಿಬಿಐ ತನಿಖೆಗೆ ಶಿಫಾರಸು; ಕೇಂದ್ರದ ವಿರುದ್ಧ ಕೇಜ್ರಿವಾಲ್‌ ಕಿಡಿ

ನವದೆಹಲಿ, ಜುಲೈ, 22: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಮನೀಷ್ ಸಿಸೋಡಿಯಾ ವಿರುದ್ಧ ಭ್ರಷ್ಟಾಚಾರ ಮತ್ತು ಮದ್ಯದ ಮಾಫಿಯಾಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಪಗಳು ಸಂಪೂರ್ಣ ಸುಳ್ಳು ಎಂದು ಹೇಳಿದರು.

ಮನೀಷ್ ಸಿಸೋಡಿಯಾ ಅವರು ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ತುಂಬಾ ಶ್ರಮಿಸುತ್ತಿದ್ದಾರೆ. ಅವರನ್ನು ಜನಮನ್ನಣೆ ಪಡೆದಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಅವರನ್ನು ಕಟ್ಟಿಹಾಕಲು ಪ್ರಯತ್ನಿಸುತ್ತಿದೆ ಎಂದರು.

ದೆಹಲಿ ಸರ್ಕಾರದ ವಿವಾದಾತ್ಮಕ ಹೊಸ ಅಬಕಾರಿ ನೀತಿಯ ಕುರಿತು ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ. ಮುಖ್ಯ ಕಾರ್ಯದರ್ಶಿಯವರ ವರದಿಯನ್ನು ಉಲ್ಲೇಖಿಸಿದ ಅವರು, ಅಬಕಾರಿ ಇಲಾಖೆಯ ಉಸ್ತುವಾರಿ ಸಚಿವ ಮನೀಷ್ ಸಿಸೋಡಿಯಾ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮದ್ಯದ ದಂಧೆಯ ಪರವಾಗಿ ಕೆಲಸ ಮಾಡಿದ್ದು, ಭಾರೀ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

CBI Probe On Liquor Policy Not afraid of any threats says Arvind Kejriwal

ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ನಾಯಕರು ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲಾಗದೆ ಸಂಚು ರೂಪಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ಸೇಡಿಗಾಗಿ ಬಳಸಿಕೊಳ್ಳುತ್ತಿದೆ ಎಂದು ಹಲವು ವಿರೋಧ ಪಕ್ಷಗಳು ಆರೋಪಿಸಿವೆ. ಬಿಜೆಪಿ ನಾಯಕರನ್ನು ಸಾವರ್ಕರ್ ಅವರ ಮಕ್ಕಳು ಎಂದು ಕರೆದ ಅವರು, ನಮ್ಮ ಪಕ್ಷದ ನಾಯಕರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಮಕ್ಕಳು ಎಂದು ಹೇಳಿದರು. ಅವರು ಬ್ರಿಟಿಷರ ಮುಂದೆ ತಲೆಬಾಗಲು ನಿರಾಕರಿಸಿದರು. ಮತ್ತು ಅವರನ್ನು ಗಲ್ಲಿಗೇರಿಸಲು ನಿರ್ಧರಿಸಿದರು. ಜೈಲಿಗೆ ಹೋಗುವ ಭಯ ನಮಗೆ ಇಲ್ಲ ಎಂದರು. ಈ ರೀತಿಯಾಗಿ ದೇಶದ ಹೋರಾಟಗಾರರನ್ನು 2 ಪಕ್ಷಗಳಿಗೆ ಹೋಲಿಸಿಕೊಂಡು ಮಾತನಾಡಿದ್ದಾರೆ.

ನಮ್ಮ ಪಕ್ಷ ಜನಪ್ರಿಯತೆಗೆ ಹೆಸರುವಾಸಿಯಾಗಿದೆ ಎಂದು ಅರವಿಂದ್‌ ಕೇಜ್ರಿವಾಲ್ ಹೇಳಿದ್ದಾರೆ. ಇದರಿಂದಾಗಿ ನಮ್ಮ ಪಕ್ಷದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಬಿಜೆಪಿಯವರು ದೆಹಲಿಯಲ್ಲಿ ನಡೆಯುತ್ತಿರುವ ಉತ್ತಮ ಸಮಾಜಕಾರ್ಯ ಕೆಲಸಗಳನ್ನು, ಹಾಗೂ ನಮ್ಮ ಪಕ್ಷದ ಕಾರ್ಯಕರ್ತರಿಗೂ ತಡೆ ಹಾಕಲು ಬಯಸುತ್ತಿದ್ದಾರೆ.

CBI Probe On Liquor Policy Not afraid of any threats says Arvind Kejriwal

ವಾರದ ಆರಂಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಂಗಾಪುರಕ್ಕೆ ಪ್ರವಾಸ ಕೈಗೊಂಡಿದ್ದರು. ಈ ನಮ್ಮ ಪ್ರವಾಸವನ್ನು ಲೆಫ್ಟಿನೆಂಟ್ ಗವರ್ನರ್ ತಡೆದಿದ್ದರು. ನಂತರ ಪಕ್ಷವು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಅವರ ಈ ನಡೆಯನ್ನು ಸಿಸೋಡಿಯಾ ಖಂಡಿಸಿ ಆಕ್ರೋಶ ಹೊರಹಾಕಿದ್ದರು.

ಜೂನ್‌ನಲ್ಲಿ ನಡೆದ ವಿಶ್ವ ನಗರಗಳ ಶೃಂಗಸಭೆಗಾಗಿ ಕೇಜ್ರಿವಾಲ್ ಅವರನ್ನು ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು ಆಹ್ವಾನಿಸಿದ್ದರು. ಪ್ರವಾಸಕ್ಕೆ ಅಡೆತಡೆಗಳಾದ ಕಾರಣ ಇಲ್ಲೇ ಉಳಿಯಬೇಕಾಯಿತು. ಹಾಗೂ ಯಾವುದೇ ಬೆದರಿಕೆಗಳಿಗೂ ನಾವು ಹೆದರುವುದಿಲ್ಲ ಎಂದು ವಿನಯ್ ಕುಮಾರ್ ಸಕ್ಸೇನಾ ವಿರುದ್ಧ ಹರಿಹಾಯ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+