ಬ್ಯಾಂಕ್ ಗೆ 389 ಕೋಟಿ ಪಂಗನಾಮ, ವಜ್ರದ ರಫ್ತುದಾರನ ಮೇಲೆ ಸಿಬಿಐ ಕೇಸ್
ನವದೆಹಲಿ, ಫೆಬ್ರವರಿ 24: ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಬ್ಯಾಂಕ್ ವಂಚನೆಗಳ ನಂತರ ಇದೀಗ ಅದೇ ಮಾದರಿಯ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 389.85 ಕೋಟಿ ರೂಪಾಯಿ ವಂಚಿಸಿದ ಮತ್ತೋರ್ವ ವಜ್ರದ ರಫ್ತುದಾರನ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ದ್ವಾರ್ಕಾ ದಾಸ್ ಸೇಠ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ನ ಮೇಲೆ ಕೇಸ್ ದಾಖಲಿಸಿಲಾಗಿದೆ. ಆರು ತಿಂಗಳ ಹಿಂದೆಯೇ ಬ್ಯಾಂಕ್ ಈ ಸಂಬಂಧ ಸಿಬಿಐಗೆ ದೂರು ನೀಡಿತ್ತು. ಆದರೆ ಪ್ರಕರಣ ದಾಖಲಿಸಿಕೊಳ್ಳದ ಸಿಬಿಐ ಈಗ ಕಂಪನಿ ಮತ್ತು ಕಂಪನಿ ನಿರ್ದೇಶಕರಾದ ಸಭ್ಯಾ ಸೇಠ್, ರೀತಾ ಸೇಠ್, ಕೃಷ್ಣ ಕುಮಾರ್ ಸಿಂಗ್, ರವಿ ಸಿಂಗ್ ಮತ್ತು ಮತ್ತೊಂದು ಕಂಪನಿ ದ್ವಾರ್ಕಾ ದಾಸ್ ಸೇಠ್ ಎಸ್ಇಝಡ್ ಕಾರ್ಪೊರೇಷನ್ ವಿರುದ್ಧವೂ ದೂರು ದಾಖಲಿಸಿದೆ.
ಬ್ಯಾಂಕಿನಿಂದ ಹಲವು ಕ್ರೆಡಿಟ್ ಸೌಲಭ್ಯಗಳನ್ನು ಕಂಪನಿ 2007-12ರ ಮಧ್ಯೆ ಪಡೆದುಕೊಂಡಿತ್ತು. ಆದರೆ ಕೊನೆಗೆ ಹಣ ಪಾವತಿ ಮಾಡದೆ ಕೈ ಎತ್ತಿತ್ತು. ಇದೀಗ ಸಂಸ್ಥೆ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿಕೊಂಡಿದೆ.












Click it and Unblock the Notifications