• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ವಜಾ ಹೈಡ್ರಾಮಾ ಸುತ್ತ...

|

ಸಿಬಿಐ ಸಂಸ್ಥೆಯೊಳಗೆ ನಡೆಯುತ್ತಿರುವ ಹೈ ಡ್ರಾಮಾಗೆ ಗುರುವಾರ ಭಾರೀ ತಿರುವು ಸಿಕ್ಕಿದೆ. ಸಿಬಿಐ ಮುಖ್ಯಸ್ಥರಾಗಿ ಅಲೋಕ್ ವರ್ಮಾರನ್ನು ಮರು ನಿಯೋಜನೆಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಲವತ್ತೆಂಟು ಗಂಟೆಯೊಳಗೆ ಕೇಂದ್ರ ವಿಚಕ್ಷಣಾ ಸಮಿತಿ (ಸೆಂಟ್ರಲ್ ವಿಜಿಲೆನ್ಸ್ ಕಮಿಟಿ ಅಥವಾ ಸಿವಿಸಿ) ನಿರ್ಧಾರದಂತೆ ವರ್ಮಾರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಅಲೋಕ್ ವರ್ಮಾರನ್ನು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಘೋಷಿಸಿದಂತಾಗಿದೆ.

ಸಿಬಿಐ ಸಂಸ್ಥೆಯೊಳಗೆ ಮೊದಲ ಎರಡು ಉನ್ನತ ಸ್ಥಾನಗಳಲ್ಲಿ ಇದ್ದ ಅಲೋಕ್ ವರ್ಮಾ ಹಾಗೂ ರಾಕೇಶ್ ಅಸ್ತಾನಾ ಪರಸ್ಪರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಆ ನಂತರ ಇಬ್ಬರನ್ನೂ ಕಡ್ಡಾಯ ರಜಾದ ಮೇಲೆ ಕಳುಹಿಸಲಾಗಿತ್ತು.

ಭ್ರಷ್ಟಾಚಾರ ಸಾಬೀತು: ಸಿಬಿಐ ಸ್ಥಾನದಿಂದ ಅಲೋಕ್ ವರ್ಮಾ ವಜಾ

ಅಲೋಕ್ ವರ್ಮಾರನ್ನು ಸಿಬಿಐ ಮುಖ್ಯಸ್ಥರಾಗಿ ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ನಿವಾಸದಲ್ಲಿ ಸಮಿತಿ ಸಭೆ ನಡೆಯಿತು. ಅಲ್ಲಿನ ಸಭೆಗೂ ಮುನ್ನವೇ ಮರುನಿಯೋಜನೆ ಆದ ತಕ್ಷಣ ಅಲೋಕ್ ವರ್ಮಾರು ಹತ್ತು ಅಧಿಕಾರಿಗಳನ್ನು ಪಕ್ಕಕ್ಕೆ ಸರಿಸಿ, ಐವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು.

ಕೇಂದ್ರ ವಿಚಕ್ಷಣಾ ಸಮಿತಿ ತೀರ್ಪು ಬರುವ ತನಕ ಅಲೋಕ್ ವರ್ಮಾರು ನೀತಿ-ನಿಯಮದ ವಿಚಾರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಅಂದ ಹಾಗೆ ಸಿವಿಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಅತಿ ದೊಡ್ಡ ವಿಪಕ್ಷದ ನಾಯಕರು ಇದ್ದರು. ಅಲೋಕ್ ವರ್ಮಾರ ಮೇಲೆ ಸ್ವತಂತ್ರ ತನಿಖೆ ನಡೆಯಲು ಮೋದಿ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.

ಈ ನಿರ್ಧಾರದ ಸುತ್ತ ನಡೆಯುತ್ತಿರುವ ಬೆಳವಣಿಗೆಯ ಮಾಹಿತಿ ಇಲ್ಲಿದೆ:

* ಜನವರಿ 31ನೇ ತಾರೀಕು ಅಲೋಕ್ ವರ್ಮಾ ಸೇವೆಯಿಂದ ನಿವೃತ್ತಿ ಆಗಬೇಕು.

ಅಲೋಕ್ ವರ್ಮಾ ವಿರುದ್ಧ 9 ಆರೋಪ, ಸಿವಿಸಿ ತನಿಖೆ ಹೇಗೆ?

* ಕೇಂದ್ರ ವಿಚಕ್ಷಣಾ ಸಮಿತಿಯಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಹಾಗೂ ನ್ಯಾ. ಎ.ಕೆ.ಸಿಕ್ರಿ ಇದ್ದರು. ಮೊದಲಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇದ್ದರಾದರೂ ಅಲೋಕ್ ವರ್ಮಾ ಮರು ನಿಯೋಜನೆ ಮಾಡಿದ ಪೀಠದಲ್ಲಿ ಅವರನ್ನು ಸಮಿತಿಯಿಂದ ಕೈ ಬಿಡಲಾಯಿತು.

* ಎರಡು ದಿನದ ಹಿಂದಷ್ಟೇ ಅಲೋಕ್ ವರ್ಮಾರನ್ನು ಸಿಬಿಐಗೆ ಮರು ನಿಯೋಜನೆ ಮಾಡಿತ್ತು ಸುಪ್ರೀಂ ಕೋರ್ಟ್.

* ಭ್ರಷ್ಟಾಚಾರ ಹಾಗೂ ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾದ ಆರೋಪದಲ್ಲಿ ಸಿಬಿಐ ಮುಖ್ಯಸ್ಥ ಹುದ್ದೆಯಿಂದ ವಜಾ

* ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ತನಿಖೆ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ. ಅಲೋಕ್ ವರ್ಮಾರ ವಾದವೇನು ಎಂದು ಕೇಳದೆಯೇ ಕ್ರಮ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದು ವಕೀಲ-ಹೋರಾಟಗಾರ ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ.

ಅಲೋಕ್ ವರ್ಮಾ ಪ್ರಕರಣ: ಆಯ್ಕೆ ಸಮಿತಿಯಲ್ಲಿ ಸಿಕ್ರಿ, ಮೋದಿ, ಖರ್ಗೆ

* ತನ್ನ ವಾದ ಮಂಡಿಸಲು ಅವಕಾಶ ನೀಡದೆ ಅಲೋಕ್ ವರ್ಮಾರನ್ನು ಕಿತ್ತೊಗೆದಿದ್ದಾರೆ. ಸ್ವತಂತ್ರ ಸಿಬಿಐ ನಿರ್ದೇಶಕರು ಅಥವಾ ಸಂಸತ್ ನ ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ಎದುರಿಸಲು ಅವರಿಗೆ ಬಹಳ ಹೆದರಿಕೆ ಎಂದು ಮೋದಿ ಮತ್ತೊಮ್ಮೆ ತೋರಿಸಿದ್ದಾರೆ. -ಕಾಂಗ್ರೆಸ್ ಆರೋಪ

* ವರ್ಮಾರನ್ನು ವಜಾ ಮಾಡಿದ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪ

* ಅಲೋಕ್ ವರ್ಮಾರಿಗೆ ಕೇಂದ್ರ ವಿಚಕ್ಷಣಾ ಸಮಿತಿ ಮುಂದೆ ತಮ್ಮ ವಾದವನ್ನು ಮಂಡಿಸಲು ಅವಕಾಶ ನೀಡಬೇಕಿತ್ತು. ಹೀಗೆ ಏಕಾಏಕಿ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

* ಕೇಂದ್ರ ವಿಚಕ್ಷಣಾ ಸಮಿತಿಯ ವರದಿ ಬರುವ ತನಕ ಅಲೋಕ್ ವರ್ಮಾ ನೀತಿ ನಿರೂಪಣೆ ತೀರ್ಮಾನಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Alok Verma - reinstated as the chief of the Central Bureau of Investigation by the Supreme Court barely 48 hours ago - has been shunted out by a committee led by Prime Minister Narendra Modi, triggering a political storm. Over the last 24 hours, Mr Verma cancelled the transfers of 10 officers and transferred five other
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more