ಕಾವೇರಿ ನ್ಯಾಯಾಧೀಕರಣ ವಿರುದ್ಧದ ಮೇಲ್ಮನವಿ ಸಮರ್ಥನೀಯ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಡಿಸೆಂಬರ್ 09 : ಕಾವೇರಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಸಮರ್ಥನೀಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಈ ಆದೇಶದಿಂದ ಕರ್ನಾಟಕ ನಿರಾಳವಾದಂತಾಗಿದೆ.

ಕಾವೇರಿ ನೀರು ನ್ಯಾಯಾಧೀಕರಣ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದೆ ಎಂದು ಕರ್ನಾಟಕ ಪ್ರತಿಪಾದಿಸುತ್ತಲೇ ಇತ್ತು. ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಸಮರ್ಥನೀಯವಲ್ಲ ಎಂದೇನಾದರೂ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದರೆ, ನ್ಯಾಯಾಧೀಕರಣ ನೀಡಿರುವ ತೀರ್ಪೇ ಅಂತಿಮವಾಗುತ್ತಿತ್ತು.

ಈ ಮೇಲ್ಮನವಿಗಳ ಮುಂದಿನ ವಿಚಾರಣೆಯನ್ನು ಡಿಸೆಂಬರ್ 15ಕ್ಕೆ ನಿಗದಿಪಡಿಸಲಾಗಿದೆ. [ಜೀವನದುದ್ದಕ್ಕೂ ಕರ್ನಾಟಕದ ಪಾಲಿಗೆ 'ವಿಲನ್' ಆದ ಜಯಲಲಿತಾ]

Cauvery: Tribunal award can be appealed against rules SC

ಕಾವೇರಿ ನೀರಿನಲ್ಲಿ ಬಳಸಲು ಲಭ್ಯವಿರುವ 740 ಟಿಎಂಸಿ ನೀರಿನಲ್ಲಿ ಕರ್ನಾಟಕ 270 ಟಿಎಂಸಿ, ತಮಿಳುನಾಡು 419, ಕೇರಳ 30 ಮತ್ತು ಪಾಂಡಿಚೇರಿ 7 ಟಿಎಂಸಿ ನೀರಿಗೆ ಅರ್ಹ ಎಂದು ನ್ಯಾಯಾಧೀಕರಣ ತೀರ್ಪಲ್ಲಿ ಹೇಳಿತ್ತು.

2007ರ ಫೆಬ್ರವರಿ 5ರಂದು ಕಾವೇರಿ ನೀರು ನ್ಯಾಯಾಧೀಕರಣ ನೀಡಿದ್ದ ತೀರ್ಪನ್ನು ಕರ್ನಾಟಕ ಮತ್ತು ತಮಿಳುನಾಡುಗಳೆರಡೂ ಪ್ರಶ್ನಿಸಿದ್ದವು. ಆದರೆ, ಈ ತೀರ್ಪು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಸಮಾನ ಎಂದು ಕೇಂದ್ರ ಸರಕಾರ ತಗಾದೆ ಎತ್ತಿತ್ತು.

ಕರ್ನಾಟಕದ ವಾದವನ್ನು ಪಾಂಡಿಚೇರಿ ಕೂಡ ಸಮರ್ಥಿಸಿಕೊಂಡಿತ್ತು. ಅಂತಾರಾಜ್ಯ ನೀರು ವ್ಯಾಜ್ಯ ಕಾಯ್ದೆಯ ಪ್ರಕಾರ, ಸರ್ವೋಚ್ಚ ನ್ಯಾಯಾಲಯವನ್ನು ಮೇಲ್ಮನವಿಯಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ತಮಿಳುನಾಡು ವಾದಿಸಿತ್ತು. [ಕೊಡಗಿನಲ್ಲಿ ಕುಡಿಯಲೂ ಅಯೋಗ್ಯವಾಗಿದೆ ಕಾವೇರಿ ನೀರು!]

ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿರುವ ಕರ್ನಾಟಕ, ಇಷ್ಟು ನೀರು ತಮಿಳುನಾಡಿಗೆ ಬಿಟ್ಟರೆ ಕಾವೇರಿ ನೀರು ಸರಬರಾಜಾಗುವ ಕರ್ನಾಟಕದ 6 ನಗರಗಳಿಗೆ ಪೂರೈಸಲು ಸಾಧ್ಯವೇ ಇಲ್ಲ ಎಂದಿದೆ. ತಮಿಳುನಾಡು ಕೂಡ, ಕಾವೇರಿ ನೀರಿನ ಅಗತ್ಯವಿರುವ ಜಮೀನನ್ನು 29.7 ಲಕ್ಷ ಎಕರೆಯಿಂದ 24.70 ಲಕ್ಷ ಎಕರೆಗೆ ಇಳಿಸಲಾಗಿದೆ ಎಂದು ಕ್ಯಾತೆ ತೆಗೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Supreme Court today ruled that the appeals filed by Karnataka and Tamil Nadu challenging the award of the Cauvery Waters Tribunal are maintainable. While holding that the appeals can be heard, the court set the next date of hearing to December 15.
Please Wait while comments are loading...