ಮೈಲಾರ್ಡ್ ನನ್ನನ್ನು ಮುಜುಗರಕ್ಕೀಡು ಮಾಡಬೇಡಿ : ನಾರಿಮನ್

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 05: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರು ಮಂಡಿಸಿದ ವಾದಕ್ಕೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ಕೂಡಾ ತಲೆದೂಗಿದೆ. ಮೈಲಾರ್ಡ್ ನನ್ನನ್ನು ಮುಜುಗರಕ್ಕೀಡು ಮಾಡಬೇಡಿ ಎಂದು ಬೇಸರದಿಂದ ವಕೀಲ ನಾರಿಮನ್ ಅವರು ಕೇಳಿಕೊಂಡಿದ್ದಾರೆ.

ವಕೀಲ ಫಾಲಿ ನಾರಿಮನ್ ಅವರು ಕರ್ನಾಟಕದ ಪರ ವಾದ ಮಂಡನೆ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಆದರೆ, ನಾರಿಮನ್ ಅವರ ಮನ ಓಲೈಕೆ ಮಾಡಲಾಯಿತು. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧ, ನ್ಯಾಯಾಂಗ ನಿಂದನೆ, ಕರ್ನಾಟಕದ ವಿರುದ್ಧವಾದ ಆದೇಶಗಳ ಬಗ್ಗೆ ನಾರಿಮನ್ ಸಮರ್ಥವಾಗಿ ವಾದಿಸಿದರು.[ಟೈಮ್ ಲೈನ್ : ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

'ನಾನು ಈ ಕೋರ್ಟಿನಲ್ಲಿ ಹಿರಿಯ ವಕೀಲ, ಯಾವುದೇ ಕಾರಣಕ್ಕೂ ತಾತ್ಕಾಲಿಕ ನೆಲೆಯಲ್ಲಿ ಮಧ್ಯಂತರ ಆದೇಶವನ್ನು ಪ್ರಕಟಿಸಬೇಡಿ ಎಂದು ನಾನು ಸಲಹೆ ನೀಡುತ್ತಿದ್ದೇನೆ. ತಾತ್ಕಾಲಿಕ ನೆಲೆಯಲ್ಲಿ ಮಧ್ಯಂತರ ಆದೇಶ ನೀಡುವುದರಿಂದ ನನ್ನ ಕಕ್ಷಿದಾರರಿಂದ ನಾನು ಸಾಕಷ್ಟು ನಿಂದನೆಗೆ ಒಳಗಾಗಿದ್ದೇನೆ. ನನ್ನನ್ನು ನೀವು ಮುಜುಗರಕ್ಕೀಡು ಮಾಡಬೇಡಿ ಎಂದು ಗಟ್ಟಿಯಾಗಿ ವಾದಿಸಿದರು. [ಓದಿ: ಅಕ್ಟೋಬರ್ 04ರಂದು ಸುಪ್ರೀಂ ನೀಡಿದ ಆದೇಶ]

Cauvery Dispute- When Nariman told the SC,

ನ್ಯಾಯಪೀಠ ಈ ಹಿಂದೆ 3 ಸಾವಿರ, 6, 12, 15 ಸಾವಿರ ಕ್ಯೂಸೆಕ್ ನೀರು ಬಿಡಿ ಹೇಳಿದ್ದೀರಿ. ಸೆಪ್ಟೆಂಬರ್ 30ರಂದು ನೀಡಿದ ಆದೇಶವನ್ನು ಕರ್ನಾಟಕ ಪಾಲಿಸಿದೆ. ಆದರೆ, ಇಂತಿಷ್ಟೆ ನೀರು ಬಿಡಿ ಎಂದು ಆದೇಶ ನೀಡಲು ಯಾವ ಆಧಾರ ಇದೆ ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಂಕಗಣಿತದ ಆಧಾರದ ಮೇಲೆ ಆದೇಶಿಸಿಲಾಗಿದೆ ಎಂದರು.[ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

ಅಂಕಗಣಿತದ ಲೆಕ್ಕ ಮಾತ್ರ ಸಾಲದು, ವಾಸ್ತವದ ಲೆಕ್ಕಚಾರವೂ ಗೊತ್ತಿರಬೇಕು ಎಂದು ಪ್ರತ್ಯುತ್ತರ ನೀಡಿದರು.[ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ, ಏನಾಗುತ್ತೆ?]

ಅದಕ್ಕೆ ಪ್ರತಿಕ್ರಿಯೆ ಕೊಟ್ಟ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಂಕಗಣಿತದ ಆಧಾರದ ಮೇಲೆ ಆದೇಶಿಸಿಲಾಗಿದೆ ಎಂದರು. ಕೂಡಲೇ ವಕೀಲ ನಾರಿಮನ್, ಅಂಕಗಣಿತದ ಲೆಕ್ಕ ಮಾತ್ರ ಸಾಲದು, ವಾಸ್ತವದ ಲೆಕ್ಕಚಾರವೂ ಗೊತ್ತಿರಬೇಕು ಎಂದು ಪ್ರತ್ಯುತ್ತರ ನೀಡಿದರು.[ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಗೊಂದಲ ಇರುತ್ತಿರಲಿಲ್ಲ : ನಮಗೆ ಸರಿಯಾಗಿ ವಾದ ಮಂಡಿಸಲು ಅವಕಾಶ ನೀಡಿ. ನಮ್ಮ ವಾದವನ್ನು ಆಲಿಸಿದ್ದರೆ ಇಷ್ಟೆಲ್ಲ ಸಮಸ್ಯೆಗಳೇ ಉದ್ಭವಿಸುತ್ತಿರಲಿಲ್ಲ. ನಿರ್ವಹಣಾ ಮಂಡಳಿ ರಚನೆ ಬಗ್ಗೆ ಪ್ರಸ್ತಾವನೆ ಬರುತ್ತಿರಲಿಲ್ಲ ಎಂದರು.[ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?]

ಇದಕ್ಕೂ ಮೊದಲು ನೀವು ಎಲ್ಲಾ ಆದೇಶದಲ್ಲೂ ನೀರು ಬಿಡಿ ಎಂದು ಆದೇಶ ನೀಡುತ್ತಿದ್ದರೆ ಪಾಲಿಸಲು ಸಾಧ್ಯವಿಲ್ಲ. ಈ ಬಾರಿ ನೀರು ಬಿಡಲು ಹೇಳಿ ಮತ್ತೊಮ್ಮೆ ನನ್ನನ್ನು ಮುಜುಗರಕ್ಕೀಡು ಮಾಡಬೇಡಿ. ನಮಗೆ ಸರಿಯಾಗಿ ವಾದ ಮಂಡಿಸಲು ಅವಕಾಶ ನೀಡಿ. ನಮ್ಮ ವಾದವನ್ನು ಆಲಿಸಿದ್ದರೆ ಇಷ್ಟೆಲ್ಲ ಸಮಸ್ಯೆಗಳೇ ಉದ್ಭವಿಸುತ್ತಿರಲಿಲ್ಲ ಎಂದು ಖಡಕ್ ಆಗಿಯೇ ಹೇಳಿದರು.

ನ್ಯಾಯಾಧಿಕರಣದ ಅಂತಿಮ ಆದೇಶ ಪ್ರಶ್ನಾರ್ಹವೇ ಎಂದು ನ್ಯಾ.ದೀಪಕ್ ಮಿಶ್ರಾ ಪ್ರಶ್ನಿಸಿದ್ದಕ್ಕೆ ನ್ಯಾಯಾಧಿಕರಣದ ಆದೇಶವನ್ನು ಪ್ರಶ್ನಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ. ನ್ಯಾಯಾಧಿಕರಣದ ಆದೇಶ ಸುಪ್ರೀಂಕೋರ್ಟ್‍ನಷ್ಟೇ ಮಹತ್ವದ್ದು. ಈ ಪ್ರಕರಣ ಇನ್ನೂ ತ್ರಿಸದಸ್ಯ ಪೀಠದ ಮುಂದೆ ಬಾಕಿ ಇದೆ ನಾರಿಮನ್ ಉತ್ತರಿಸಿದರು.
ನ್ಯಾಯಾಂಗ ಆದೇಶ ಉಲ್ಲಂಘನೆ ಮಾಡುವ ಉದ್ದೇಶ ಕರ್ನಾಟಕಕ್ಕಿಲ್ಲ. ಪರಿಸ್ಥಿತಿ ಕಷ್ಟಕರವಾಗಿದೆ. ಮೇಲುಸ್ತುವಾರಿ ಸಮಿತಿ ಆದೇಶ ಕೂಡಾ ಕರ್ನಾಟಕಕ್ಕೆ ಮಾರಕವಾಗಿತ್ತು ಎಂದು ನಾರಿಮನ್ ಅವರಿಂದ ಮನವಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nariman on Tuesday was agitated and questioned the logic of the Supreme Court which was deciding on the quantum of Cauvery water to be released to Tamil Nadu. " I have been facing flak for not restraining the Supreme Court from ordering the release of water which the state does not have to spare," he said.
Please Wait while comments are loading...