Cauvery Dispute: CWMA ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ನೀರು ಬಿಡಲು ಸೂಚನೆ
ಕಾವೇರಿ ನದಿ ನೀರು ವಿವಾದ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ಕಾವೇರಿ ನೀರು ಬಿಡದಿರಲು ರಾಜ್ಯದಲ್ಲಿ ರೈತರ ಪ್ರತಿಭಟನೆ ನಡುವೆಯೂ ತಮಿಳುನಾಡು ಮತ್ತೆ ನೀರಿಗಾಗಿ ಪಟ್ಟು ಹಿಡಿದಿದೆ. CWMA ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ನೀರು ಬಿಡಲು ಸೂಚನೆ ನೀಡಲಾಗಿದೆ.
ಕಾವೇರಿ ನದಿ ನೀರು ನಿರ್ವಹಣಾ ಸಭೆಯಲ್ಲಿ ಕರ್ನಾಟಕಕ್ಕೆ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸೂಚನೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ರೈತರು ಮಳೆಯಿಲ್ಲದೆ ಬೆಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಕಾವೇರಿ ನೀರು ಬಿಡಬಾರದು ಎಂದು ಒತ್ತಾಯಿಸಿ ರಾಜ್ಯದೆಲ್ಲೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟು ತಮಿಳುನಾಡಿಗೆ ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ತಮಿಳುನಾಡು ಮಾತ್ರ ನೀರಿಗಾಗಿ ಪಟ್ಟು ಹಿಡಿದಿದೆ. ಹದಿನೈದು ದಿನ ನಿತ್ಯ 12,500 ಕ್ಯೂಸೆಕ್ಸ್ ನೀರು ಬೇಕೆಂದು ತಮಿಳುನಾಡು ಹಠ ಹಿಡಿದಿದೆ. ಆದರೆ ಐದು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಪ್ರಾಧಿಕಾರ ಆದೇಶ ನೀಡಿದೆ.
ಸೆಪ್ಟಂಬರ್ ಹನ್ನೆರಡನೇ ತಾರೀಕಿನ ಆದೇಶದಂತೆ ಹದಿನೈದು ದಿನ ನೀರು ಬಿಡಲು ಸೂಚನೆ ನೀಡಲಾಗಿದೆ. ಪ್ರಾಧಿಕಾರ ದೆಹಲಿಯ CWMA ಕಚೇರಿಯಿಂದ ಆದೇಶ ಹೊರಡಿಸಿದೆ. ಕಾವೇರಿ ಪ್ರಾಧಿಕಾರದ ಕಚೇರಿಯಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯದ ಅಧಿಕಾರಿಗಳು ಖುದ್ದು ಭಾಗಿಯಾಗಿದ್ದರೆ ಕರ್ನಾಟಕ ಮತ್ತು ಪುದುಚೇರಿ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.
ಸುಪ್ರೀಂ ಕೋರ್ಟ್ ಮೊರೆ ಹೋಗಲಿರುವ ಸರ್ಕಾರ
ಕಾವೇರಿ ಪ್ರಾಧಿಕಾರದ ಮನವಿ ಒಪ್ಪದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದು ನೀರು ಬಿಡದಿರಲು ನಿರ್ಧರಿಸಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಬರದ ನಡುವೆ ತಮಿಳುನಾಡು ಮತ್ತೆ ಖಾತೆ ತೆಗೆದಿದೆ ಎಂದು ರಾಜ್ಯದಲ್ಲಿ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಎಂಟು ಟಿಎಂಸಿ ನೀರು ಕುಡಿಯಲು ಸಾಕಾಗುವುದಿಲ್ಲ. ಸಂಕಷ್ಟ ಸೂತ್ರ ಪಾಲಿಸದ ತಮಿಳುನಾಡು 12500 ಕ್ಯೂಸೆಕ್ ನೀರು ಬಿಡಲು ಮನವಿ ಮಾಡಿದೆ. ನೀರು ಬಿಡಲು ಅಸಾಧ್ಯ ಎಂದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications