'ನಾನು ದಂಡ ಕಟ್ಬೇಕಿದ್ರೆ ಮಲ್ಯ ಸಾಲ ಪಾವತಿಯಾಗ್ಬೇಕ್!'

Subscribe to Oneindia Kannada

ಮುಂಬೈ, ಮಾರ್ಚ್, 23: ಮಹಿಳೆಯೊಬ್ಬರು ಬೇಕಂತಲೇ ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಪರೀಕ್ಷಕರ ಕೈ ಗೆ ಸಿಕ್ಕಿ ಬಿದ್ದಾಗ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಆಕೆ ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ ಕಾರಣವನ್ನು ಕೇಳಿದರೆ ನೀವು ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ.

ಮೊದಲು ವಿಜಯ್ ಮಲ್ಯ ಅವರಿಗೆ ನೀಡಿದ್ದ ಸಾಲವನ್ನು ವಾಪಸ್ ಪಡೆದುಕೊಳ್ಳಿ. ಆಮೇಲೆ ದಂಡ ಕಟ್ಟುತ್ತೇನೆ ಎಂದು ರೈಲ್ವೆ ಅಧಿಕಾರಿಗಳಿಗೆ ರೋಪ್ ಹಾಕಿದ್ದಾಳೆ.[ಸಾಲ ಮಾಡಿ ತುಪ್ಪ ತಿಂದವರು ಮಲ್ಯ ಒಬ್ಬರೆ ಅಲ್ಲ ಸ್ವಾಮಿ!]

indian railways

ಮುಂಬೈನ ಮಹಾಲಕ್ಷ್ಮೀ ರೈಲ್ವೆ ಸ್ಟೇಷನ್‌ ಇಂಥ ಪ್ರಕರಣಕ್ಕೆ ಸಾಕ್ಷಿಯಾಗಿದೆ. ರೈಲ್ವೆ ಅಧಿಕಾರಿಗಳೊಂದಿಗೆ ಮಾತಿನ ಕಾಳಗಕ್ಕೆ ಇಳಿದ 44 ವರ್ಷದ ಪ್ರೇಮಲತಾ ಬನ್ಸಾಲಿ ಎನ್ನೋ ಕೊನೆಗೂ ದಂಡ ಕಟ್ಟಿಲ್ಲ.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಮೆಟ್ರೊ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ್ದ ಪ್ರೇಮಲತಾಗೆ ಟಿಕೆಟ್‌ 260 ರು. ದಂಡ ಪಾವತಿಸಲು ಅಧಿಕಾರಿಗಳು ಹೇಳಿದ್ದಾರೆ. ಇದನ್ನು ನಿರಾಕರಿಸಿದ ಮಹಿಳೆ ಬೇಕಾದರೆ ನನ್ನನ್ನು ಜೈಲಿಗೆ ಹಾಕಿ, ದಂಡ ಕಟ್ಟುವುದಿಲ್ಲ, ವಿಜಯ್ ಮಲ್ಯ ತೆಗೆದುಕೊಂಡಿರುವ 9 ಸಾವಿರ ಕೋಟಿ ಸಾಲ ಮೊದಲು ಪಾವತಿ ಮಾಡಿಕೊಳ್ಳಿ ಎಂದು ಮಾತಿಗೆ ನಿಂತಿದ್ದಾರೆ.

ಮಾಜಿಸ್ಟ್ರೇಟ್ ಎದುರು ಹಾಜರು ಪಡಿಸಿದಾಗಲೂ ಮಹಿಳೆ ಇದೇ ಮಾತನ್ನು ಹೇಳಿದ್ದು ನಾನು ದಂಡ ಪಾವತಿ ಮಾಡುವುದಿಲ್ಲ. ಸಾಲ ಪಡೆದುಕೊಂಡು ವಿದೇಶಕ್ಕೆ ಹಾರಿದವರನ್ನು ಮೊದಲು ಹಿಡಿದು ಕರೆತನ್ನಿ ಎಂದು ಆಗ್ರಹಿಸಿದ್ದಾಳೆ.

ವಿಮಾನ ಹರಾಜಿಗೆ ಸಿದ್ಧತೆ: ಮುಂಬೈನ ಮಲ್ಯರ ಮನೆಯನ್ನು ಹರಾಜಿನಲ್ಲಿ ಯಾರೂ ಕೊಳ್ಳಲಿಲ್ಲ ಆದರೆ ಸಾಲ ಮರುಪಾವತಿ ಪ್ರಯತ್ನವನ್ನು ಮುಂದುವರಿಸಿರುವ ಬ್ಯಾಂಕ್ ಗಳು ಮಲ್ಯರ ಐಷಾರಾಮಿ ವಿಮಾನವನ್ನು ಹರಾಜಯ ಮಾಡಲು ಮುಂದಾಗಿವೆ.

266 ಕೋಟಿ ರೂಪಾಯಿ ಮೌಲ್ಯದ ಎಸಿಜೆ 319 ಹೆಸರಿನ ವಿಮಾನದಲ್ಲಿ ಎಲ್ಲಾ ವಿಧದ ಐಷಾರಾಮಿ ಸೌಲಭ್ಯಗಳಿದ್ದು ಮೇ 12ರಂದು ವಿಮಾನವನ್ನು ಹರಾಜು ಹಾಕಲು ತೀರ್ಮಾನಿಸಲಾಗಿದೆ.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 44-year-old woman passenger recently stumped Railway ticket checker after she refused to pay fine when former was caught without ticket in the train. Reportedly in her defence, woman said that authorities should first arrest and recover the loan dues from liquor baron Vijay Mallya before asking her to pay for the offence. The incident occurred in a Mumbai train on Sunday when Premlata Bhansali, a mother of two was asked to show her ticket at Mahalaxmi station.
Please Wait while comments are loading...