ಕಾರಿನ ಫೋಟೋ ತೆರಿಗೆಗೆ ಆಹ್ವಾನ, ಸಾಮಾಜಿಕ ಜಾಲತಾಣಗಳ ಮೇಲೆ ಐಟಿ ಕಣ್ಣು

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 11: ಸಾಮಾಜಿಕ ಜಾಲತಾಣಗಳ ಮೇಲೆ ನೀವೇನಾದರೂ ಹೊಸ ಕಾರಿನ ಫೋಟೋ ಹಾಕಿದರೆ ಐಟಿ ಅಧಿಕಾರಿಗಳು ನಿಮ್ಮ ಮನೆ ಬಾಗಿಲು ಬಡಿಯಲಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲು ಆದಾಯ ತೆರಿಗೆ ಅಧಿಕಾರಿಗಳು 'ಪ್ರಾಜೆಕ್ಟ್ ಇನ್ಸೈಟ್' ಎಂಬ ಯೋಜನೆ ಆರಂಭಿಸಲಿದ್ದಾರೆ.

ಫೇಸ್ ಬುಕ್ ನಲ್ಲಿ ಹಾಕೋ ಕಾರು, ಪಿಕ್ನಿಕ್ ಫೋಟೋ ಮೇಲೂ IT ಕಣ್ಣು!

ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳ ಮೇಲೆ 'ಪ್ರಾಜೆಕ್ಟ್ ಇನ್ಸೈಟ್' ಕಣ್ಣಿಡಲಿದ್ದು, ಮುಂದಿನ ತಿಂಗಳು ಇದು ಚಾಲನೆ ಪಡೆದುಕೊಳ್ಳಲಿದೆ.

Careful what you post on Facebook: The taxman is watching you

ನಿಮ್ಮ ಸಾಮಾಜಿಕ ಜಾಲತಾಣಗಳ ಚಿತ್ರ ಮತ್ತು ನಿಮ್ಮ ಆದಾಯ ಘೋಷಣೆ ಹೋಲಿಕೆಯಾಗುತ್ತಾ ಎಂಬುದನ್ನು ಅಧಕಾರಿಗಳು ನೋಡಲಿದ್ದಾರೆ. ಒಂದೊಮ್ಮೆ ಹೋಲಿಕೆ ಆಗದೇ ಇದ್ದಲ್ಲಿ ನಿಮಗೆ ತೆರಿಗೆ ಬೀಳುವುದು ಖಚಿತ.

ಈಗಾಗಲೇ ಪ್ಯಾನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಲು ಸೂಚಿಸಿರುವ ಐಟಿ ಇಲಾಖೆ ಇದೀಗ ಕಪ್ಪು ಹಣ ಪತ್ತೆ ಹಚ್ಚಲು 360 ಡಿಗ್ರಿ ಕೋನದಲ್ಲಿ ನಾಗರೀಕರ ಮೇಲೆ ಕಣ್ಣಿಡಲು ಹೊರಟಿದೆ.

ಇನ್ನು ಎಲ್ ಆ್ಯಂಡ್ ಟಿ ಇನ್ಫೋಟೆಕ್ ಕಂಪನಿಯ ಸಹಕಾರದೊಂದಿಗೆ ಈ 'ಪ್ರಾಜೆಕ್ಸ್ ಇನ್ಸೈಟ್ ಆರಂಭವಾಗಲಿದೆ. ಇದಕ್ಕಾಗಿ ಕಂಪನಿ ಜತೆ ಕಳೆದ ವರ್ಷವೇ ಒಪ್ಪಂದ ಮಾಡಿಕೊಳ್ಳಲಾಗಿದೆ.

ಸದ್ಯ ಈ ಯೋಜನೆ ಪ್ರಯೋಗ ಹಂತದಲ್ಲಿದ್ದು ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಚಾಲನೆ ಪಡೆದುಕೊಳ್ಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Showing off your new car or watch on the social media could land you in trouble. The Income Tax department has decided to keep a close watch on your social media accounts such as Facebook and Instagram under a new programme called "Project Insight."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ