ಕೈ ತುಂಬಾ ಸಂಬಳ ಸಿಗೋ ವೇತನ ಸಿಕ್ಕರೆ ಸಾಕಾ? ಅಷ್ಟಕ್ಕೂ ಕ್ಯಾರೀರ್ ಗ್ರೌಥ್ ಅಂದ್ರೇನು?
Career Growth: ಓದು ಮುಗಿದ ತಕ್ಷಣ ಕೆಲಸಕ್ಕೆ ಸೇರಬೇಕು ಎನ್ನುವ ಆತುರ ಕಾತುರ ಎಲ್ಲರಿಗೂ ಇರುತ್ತದೆ. ಅದ್ರಲ್ಲೂ ಕಾರ್ಪೋರೇಟ್ ಕಂಪನೀಲಿ ಕೆಲಸ ಸಿಕ್ಕಿದ್ರೆ ಲೈಫ್ ಸೆಟಲ್ ಅನ್ನೋ ಯೋಚನೆ ಹಲವರದ್ದು. ಪ್ರತಿಯೊಬ್ರೂ ಒಳ್ಳೆ ಸಂಬಳ, ಹೈ-ಫೈ ಲೈಫ್ ಸ್ಟೈಲ್, ಏಳಿಗೆ ಇವನ್ನೆಲ್ಲಾ ತಲೆಯಲ್ಲಿ ಇಟ್ಟುಕೊಂಡು ಕಾರ್ಪೊರೇಟ್ ಜಗತ್ತಿಗೆ ಕಾಲಿಡುತ್ತಾರೆ. ಆದರೆ ಒಂದು ಕಾರ್ಪೋರೇಟ್ ಕಂಪನಿಯ ಕೆಲಸ ನೀವು ಕಂಡ ಕನಸನ್ನೆಲ್ಲಾ ಸಾಕಾರ ಮಾಡುತ್ತಾ ಅನ್ನೋದು ಪ್ರಶ್ನೆ. ಬರೀ ಒಳ್ಳೆ ಕಂಪನಿಯಲ್ಲಿ, ಕೈ ತುಂಬಾ ಸಂಬಳ ಬರೋ ಕೆಲಸ ಗಿಟ್ಟಿಸಿಕೊಂಡ್ರೆ ಸಾಲಲ್ಲ. ನೀವು ಆ ಕೆಲಸದಲ್ಲಿ ಮುಂದುವರಿಬೇಕು ಅಂದ್ರೆ, ನಿಮ್ಮಲ್ಲಿ ಅದಕ್ಕೆ ತಕ್ಕ ಸ್ಕಿಲ್ಸ್ ಇರಬೇಕು. ಹಣದ ನಿರ್ವಹಣೆ ಗೊತ್ತಿರಬೇಕು, ಜೊತೆಗೆ ವರ್ಕ್ ಲೈಫ್ ಬ್ಯಾಲೆನ್ಸ್ ಕಡೆ ಗಮನ ಹರಿಸಬೇಕು.

Career Growth: ಕೆಲಸಕ್ಕೆ ಸೇರುವಾಗ ಇವೆಲ್ಲ ಗೊತ್ತಿರಲಿ
ಉದಿತಾ ಪರಾಶರ್ ಅನ್ನೋರು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತಮ್ಮ ಅನುಭವವನ್ನು ಶೇರ್ ಮಡಿಕೊಂಡಿದ್ದು, ಹಲವು ಪ್ರತಿಕ್ರಿಯೆಗಳು ಬರುತ್ತಿವೆ. ಉದಿತಾ ಕೆಲಸ ಹುಡುಕುವಾಗ ಐದು ಮುಖ್ಯ ವಿಷಯಗಳ ಬಗ್ಗೆ ಗಮನ ಹರಿಸುವ ಅಗತ್ಯ ಇದೆ ಎಂದಿದ್ದಾರೆ. ಮೊದಲು ಕೆಲಸದ ಬಗ್ಗೆ ಯೋಚಿಸುವುದು, ಕಷ್ಟ ಪಟ್ಟರೆ ಎಲ್ಲವೂ ಸಿಗುತ್ತೆ ಎಂದು ಕೊಳ್ಳೋದು, ಸಂಬಳ ಮತ್ತು ವೃತ್ತಿ ಜೀವನ, ವೈಯಕ್ತಿಕ ಜೀವನದ ಬಗ್ಗೆ ಸ್ಪಷ್ಟವಾದ ಗೆರೆ, ಮೊದಲ ಸಂಬಂಳದಿಂದಲೇ ಅದನ್ನು ಮ್ಯಾನೇಜ್ ಮಾಡುವ ಅರಿವು ಇರಬೇಕು. ಒಳ್ಳೇ ಕಂಪನೀಲಿ ಕೆಲಸ ಸಿಕ್ತು ಅಂದ ಕೊಡಲೇ ಲೈಫ್ ಕಂಪ್ಲೀಟ್, ಕಷ್ಟ ಪಟ್ಟು ಕೆಲಸ ಮಾಡಿ, ಸರ್ವೈವ್ ಆಗುತ್ತೇನೆ ಎಂಬ ಭ್ರಾಂತಿಯಲ್ಲಿ ಇರಬೇಡಿ ಅಂತಾರ ಉದಿತಾ.
ಹೆಚ್ಚಿನ ನಿರೀಕ್ಷೆ ಬೇಡ :
ಉದಿತಾ ಪ್ರಕಾರ, ಮೊದಲ ಕೆಲಸದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಾರದು. ಮೊದಲ ಕಂಪನಿ ಅಥವಾ ಮೊದಲ ಕೆಲಸ ನಿಮ್ಮ ಡ್ರೀಮ್ ಜಾಬ್ ಆಗಿರಲೇ ಬೇಕು ಎಂದೇನಿಲ್ಲ. ಮೊದಲ ಕೆಲಸವನ್ನು ನಿಮ್ಮ ಸ್ಕಿಲ್ ಹೆಚ್ಚಿಸಿಕೊಳ್ಳಲು, ಅನುಭವಕ್ಕಾಗಿ ಹಾಗೂ ಆರ್ಥಿಕವಾಗಿ ಸ್ವತಂತ್ರವಾಗಲು ಬಳಸಿಕೊಳ್ಳಬೇಕು. ಹೀಗೆ ಮಾಡಿದರೆ ಮುಂದಿನ ಹಾದಿ ಸುಗವಾಗಿರುತ್ತದೆ, ಎನ್ನೋದು ಉದಿತಾ ಅಭಿಪ್ರಾಯ.
ಹಾರ್ಡ್ ವರ್ಕ್ ಒಂದೇ ಮಾನದಂಡವಲ್ಲ:
ಕಾರ್ಪೊರೇಟ್ ಜಗತ್ತು ಅಂದ ಮೇಲೆ ಕಷ್ಟ ಪಟ್ಟು ಕೆಲಸ ಮಾಡ್ಲೇ ಬೇಕು. ಆದ್ರೆ ಅದೊಂದೇ ನಿಮ್ಮ ಪ್ರಗತಿಗೆ ಹೆಲ್ಪ್ ಆಗೋಲ್ಲ. ಅತ್ಯುತ್ತಮ ಸಂಹವನ ಕೌಶಲ್ಯ, ನೆಟ್ವರ್ಕಿಂಗ್, ಸಂಬಳ ಹೆಚ್ಚಿಸಿಕೊಳ್ಳುವ ಅಥವಾ ಹೊಸ ಹೊಸ ಅವಕಾಶ ಪಡೆದುಕೊಳ್ಳುವ ವಿಷಯ ಬಂದಾಗ ನಿಮ್ಮನ್ನು ನೀವು ಸಮರ್ಥವಾಗಿ ಡಿಫೆಂಡ್ ಮಾಡಿಕೊಳ್ಳುವಂತಿರಬೇಕು. ನಾವು ಮಾತನಾಡೋದಲ್ಲ. ನಮ್ಮ ಕೆಲಸ ಮಾತನಾಡಬೇಕು ಅಂತ ಬಾಯಿಗೆ ಬೀಗ ಹಾಕ್ಕೊಂಡು ಕೂತ್ರೆ ನೀವು ಎಲ್ಲಿರುತ್ತೀರೋ ಅಲ್ಲಿಯೇ ಇರಬೇಕಾಗುತ್ತದೆ. ಯಾರು ತಮ್ಮನ್ನು ತಾವು ಚೆನ್ನಾಗಿ ಮಾರ್ಕೆಟಿಂಗ್ ಮಾಡುತ್ತಾರೋ ಅವರು ಮಾತ್ರ ಈಗ ಮೇಲೆ ಬರುತ್ತಾರೆ. ಹೆಚ್ಚು ಹೆಚ್ಚು ಸಂಬಳ ಪಡೆಯುತ್ತಾರೆ. ನಿಮಗೆ ಈ ಸ್ಕಿಲ್ ಇಲ್ಲವೆಂದರೆ ಇದ್ದಲ್ಲೇ ಇರಬೇಕಾಗುತ್ತದೆ.
ದೊಡ್ಡ ಸಂಬಳ ಸಿಕ್ಕಿದರೆ ಸಾಕಾಗುವುದಿಲ್ಲ :
ಉತ್ತಮ ಸಂಬಳದ ಕೆಲಸ ಅಂದ ಕೂಡಲೇ ಎಲ್ಲಾ ಸೆಟಲ್ ಎಂದರ್ಥವಲ್ಲ. ಒಳ್ಳೆ ಸಂಬಳ ಸಿಕ್ಕಿದರೆ ಸಂತೋಷ. ಆದರೆ ಕರಿಯರ್ ಗ್ರೋಥ್ ಬೇಕಿದ್ದರೆ ಸಂಬಳವೊಂದೇ ಮಾನದಂಡವಾಗೋಲ್ಲ. ಸಂಬಳದ ಜೊತೆ ನಿಮ್ಮ ಸ್ಕಿಲ್ ಡೆವಲಪ್ ಮಾಡಿಕೊಳ್ಳಲು ಅವಕಾಶವಿದೆಯೇ ಎನ್ನುವುದನ್ನು ಕನ್ಫರ್ಮ್ ಮಾಡಿಕೊಳ್ಳಿ. ಬರೀ ಹೊಟ್ಟೆಪಾಡು ಅಂತ ಅದೇ ಕಂಪನಿಯಲ್ಲಿದ್ದರೆ ಜೀವನದಲ್ಲಿ ದುಡ್ಡು ಮಾಡೋದು ಆಗೋದು ಯಾವಾಗ, ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದು ಯಾವಾಗ? ಎನ್ನೋದು ಈ ಯಂಗ್ ಉದ್ಯೋಗಿಯ ಮಾತು.
ಮೊದಲ ಸಂಬಳದಿಂದಲೇ ಹಣದ ಲೆಕ್ಕಾಚಾರ ಇರಲಿ :
ದುಡ್ಡಿನ ಲೆಕ್ಕಾಚಾರ ಜೀವನದಲ್ಲಿ ಬಹಳ ಮುಖ್ಯ. ಮೊದಲ ಸಂಬಳದಿಂದಲೇ ಉಳಿತಾಯದ ( savings account) ಬಗ್ಗೆ ಯೋಚಿಸಿ. ಸೇವಿಂಗ್ಸ್ ಮಾಡಲು ದೊಡ್ಡ ಸಂಬಳವೇ ಬೇಕು ಎಂದೇನಿಲ್ಲ, ಸಿಕ್ಕಿರುವ ಸಂಬಳದಲ್ಲಿಯೇ ಸ್ವಲ್ಪ ಮಟ್ಟಿಗೆ ಉಳಿಸೋದನ್ನು ಕಲಿತರೆ ನಿಮ್ಮ ಭವಿಷ್ಯಕ್ಕೆ ಸಹಕಾರಿ. ಮೊದಲ ಸಂಬಳ ಕೈಗೆ ಬರ್ತಾ ಇದ್ದ ಹಾಗೆ ಆದಾಯ ಮತ್ತು ಖರ್ಚಿನ ಬಗ್ಗೆ ಲೆಕ್ಕ ಇಟ್ಟುಕೊಳ್ಳಿ. ಬರೀ ಮಜಾ ಮಾಡೋದೊಂದೇ ನಿಮ್ಮ ಕಾಯಕವಾಗಬಾರದು.
ಕೆಲಸವೇ ನಿಮ್ಮ ಜಗತ್ತಾಗಬಾರದು :
ಎಲ್ಲಕ್ಕಿಂತ ಮುಖ್ಯ ವಿಷಯ ಅಂದರೆ ಕೆಲಸ ನಿಮ್ಮ ಜೀವನದ (life) ಭಾಗವೇ ಹೊರತು ಅದೇ ಜೀವನವಲ್ಲ. ಕೆಲಸವೇ ನಿಮ್ಮ ಸರ್ವಸ್ವ ಎನ್ನುವಂತೆ ಬದುಕಬಾರದು ಎಂದು, ವೈಯಕ್ತಿಕ ಜೀವನದ ಬಗ್ಗೆ ಗಮನ ಕೊಡದವರಿಗೆ ಉದಿತಾ ಕಿವಿ ಮಾತು ಹೇಳಿದ್ದಾರೆ. ಉದಿತಾ ಅವರ ಸೋಶಿಯಲ್ ಮಿಡಿಯಾದಲ್ಲಿ ಮಾಡಿರುವ ಈ ಪೋಸ್ಟ್ಗೆ ಸಿಕ್ಕಾಪಟ್ಟೆ ಲೈಕ್ಸ್ ಕಮೆಂಟ್ಸ್ ಬಂದಿವೆ. ನೀವೂ ಕೆರಿಯ್ ಗ್ರೌಥ್ ಎನ್ನುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳುತ್ತೀರಿ ಅಲ್ವಾ?


Click it and Unblock the Notifications
