Breaking: ಉತ್ತರಾಖಂಡ, ನದಿಯಲ್ಲಿ ಕೊಚ್ಚಿಹೋದ ಕಾರು; 9 ಮಂದಿ ಸಾವು

ನವದೆಹಲಿ, ಜುಲೈ 8: ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ರಾಜ್ಯದ ನದಿಗಳು ಮಳೆಯ ನೀರಿನಿಂದ ತುಂಬಿ ಹರಿಯುತ್ತಿವೆ. ಇಂಥ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿದ್ದ 9 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರಾಖಂಡದ ರಾಮನಗರದಲ್ಲಿ ಇರುವ ಧೇಲಾ ನದಿಯಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ಈ ವೇಳೆ ಕಾರಿನಲ್ಲಿದ್ದ 9 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರವಾಸಕ್ಕೆ ತೆರಳಿದ್ದ ಅಷ್ಟೂ ಮಂದಿ ಪಟಿಯಾಲದ ನಿವಾಸಿಗಳು ಎಂದು ತಿಳಿದು ಬಂದಿದೆ. ಪಟಿಯಾಲದಿಂದ ಪಂಜಾಬ್‌ಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 5:45ರ ಸುಮಾರಿಗೆ ಈ ಕಾರು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಕಾರಿನಲ್ಲೇ ಸಿಲುಕಿರುವ ಐದು ಶವಗಳು: ಉತ್ತರಾಖಂಡ ಥೇಲಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಕಾರಿನಲ್ಲಿದ್ದ ನಾಲ್ಕು ಶವಗಳು ಸಿಕ್ಕಿವೆ. ಆದರೆ ಇನ್ನೂ ಐದು ಶವಗಳು ಕಾರಿನಲ್ಲೇ ಸಿಲುಕಿಕೊಂಡಿದ್ದು, ಅವುಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕುಮಾವೂನ್ ವ್ಯಾಪ್ತಿಯ ಡಿಐಜಿ ಆನಂದ್ ಭರನ್ ಮಾಹಿತಿ ನೀಡಿದ್ದಾರೆ.

Car Is Swept Away in Uttarakhand River; 9 Death, 1 Woman Rescued in Incident

ಅಪಘಾತದಲ್ಲಿ ಒಬ್ಬ ಮಹಿಳೆಯ ರಕ್ಷಣೆ: ಉತ್ತರಾಖಂಡದಲ್ಲಿ ಶುಕ್ರವಾರ ನಡೆದ ಕಾರು ಅಪಘಾತದಲ್ಲಿ 22 ವರ್ಷದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ. ಹೀಗೆ ರಕ್ಷಿಸಲಾಗಿರುವ ಮಹಿಳೆಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಮಹಿಳೆಯನ್ನು ರಾಮನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರವಾಸಕ್ಕೆ ತೆರಳಿದ್ದ 10 ಪ್ರವಾಸಿಗರು ಧೇಲಾದಲ್ಲಿನ ರೆಸಾರ್ಟ್‌ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+