• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನಡಾದ ಹಿಂದೂ ದೇವಾಲಯ ಧ್ವಂಸ: ತನಿಖೆಗೆ ಮೇಯರ್‌ ಆದೇಶ

|
Google Oneindia Kannada News

ಟೊರೊಂಟೊ, ಅಕ್ಟೋಬರ್‌ 2: ಕೆನಡಾದ ಟೊರೊಂಟೋದಲ್ಲಿ ಧ್ವಂಸಗೊಳಿಸಲಾಗಿದ್ದ ಉದ್ಯಾನವನದ ಸ್ವಾಮಿನಾರಾಯಣ ದೇವಸ್ಥಾನ ಪ್ರಕರಣವನ್ನು ಅಧಿಕಾರಿಗಳು ಅದರ ಬಗ್ಗೆ ತನಿಖೆಗೆ ಆದೇಶಿಸಿಸಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಮೇಯರ್ ಪ್ಯಾಟ್ರಿಕ್ ಬ್ರೌನ್ ಹೇಳಿದ್ದಾರೆ.

ಇತ್ತೀಚೆಗೆ ಅನಾವರಣಗೊಂಡ ಶ್ರೀ ಭಗವದ್ಗೀತಾ ಪಾರ್ಕ್ ಫಲಕವನ್ನು ಧ್ವಂಸಗೊಳಿಸಲಾಗಿತ್ತು. ಕೆನಡಾದ ಸ್ವಾಮಿನಾರಾಯಣ ದೇವಾಲಯವನ್ನು ಭಾರತ ವಿರೋಧಿ ಗೋಡೆಬರಹದ ಮೂಲಕ ಹಾನಿಗೊಳಿಸಿದ ಕೆಲವೇ ದಿನಗಳಲ್ಲಿ ಈ ಘಟನೆಯು ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಭಾರತದ ರಾಯಭಾರ ಕಚೇರಿ ಸೂಚನೆ ನೀಡಿತ್ತು.

ಕೆನಡಾ ಬ್ರಾಂಪ್ಟಾನ್ ನಗರದ ಪ್ರಮುಖ ಉದ್ಯಾನವನಕ್ಕೆ ಭಗವದ್ಗೀತೆ ಹೆಸರುಕೆನಡಾ ಬ್ರಾಂಪ್ಟಾನ್ ನಗರದ ಪ್ರಮುಖ ಉದ್ಯಾನವನಕ್ಕೆ ಭಗವದ್ಗೀತೆ ಹೆಸರು

ಮೇಯರ್ ಪ್ಯಾಟ್ರಿಕ್ ಬ್ರೌನ್ ಘಟನೆಯನ್ನು ಖಂಡಿಸಿದರು. ಇಂತಹ ಘಟನೆಗಳನ್ನು ನಾವು ಸಹಿಸುವುದಿಲ್ಲ. ಪ್ರಕರಣ ಬಗ್ಗೆ ಹೆಚ್ಚಿನ ತನಿಖೆಗಾಗಿ ಈ ವಿಷಯವನ್ನು ಈಗ ಪೀಲ್ ಪ್ರಾದೇಶಿಕ ಪೊಲೀಸರಿಗೆ ವಹಿಸಲಾಗಿದೆ. ನಮ್ಮ ಇಲಾಖೆಯು ಪ್ರಕರಣವನ್ನು ತನಿಖೆ ಮಾಡಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಘಟನೆಯನ್ನು ಖಂಡಿಸಿದ ಟ್ವಿಟರ್ ಬಳಕೆದಾರರಿಗೆ ಪ್ರತ್ಯುತ್ತರವಾಗಿರುವ ಮತ್ತೊಂದು ಟ್ವೀಟ್‌ನಲ್ಲಿ ಬ್ರೌನ್, "ಪೀಲ್ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ನಿಶಾನ್ ದುರೈಯಪ್ಪ ಅವರು ಇಂತಹ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಈ ರೀತಿಯ ದ್ವೇಷ ಮತ್ತು ವಿಧ್ವಂಸಕ ಕೃತ್ಯಗಳಿಗೆ ಸಹಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವಾರವಷ್ಟೇ ಬ್ರಾಂಪ್ಟನ್ ಸಿಟಿ ಮುನ್ಸಿಪಲ್ ಕಾರ್ಪೊರೇಷನ್ ನಗರದ ವಾರ್ಡ್ 6ರಲ್ಲಿನ ಉದ್ಯಾನವನಕ್ಕೆ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಹೆಸರಿಸಿತ್ತು. ಹಿಂದೂ ಸಮುದಾಯ ಮತ್ತು ನಗರಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲು ಈ ಉದ್ಯಾನವನವನ್ನು ಬ್ರಾಂಪ್ಟನ್‌ನ ಟ್ರಾಯರ್ಸ್ ಪಾರ್ಕ್‌ನಿಂದ ಶ್ರೀ ಭಗವದ್ಗೀತಾ ಪಾರ್ಕ್ ಎಂದು ಮರುನಾಮಕರಣ ಮಾಡಲಾಯಿತು.

ಕಳೆದ ತಿಂಗಳು ಕೆನಡಾದ ಟೊರೊಂಟೊದಲ್ಲಿರುವ ಬಾಪ್ಸ್‌ ಸ್ವಾಮಿನಾರಾಯಣ ಮಂದಿರವನ್ನು ಅದರ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಚಿತ್ರಿಸಿ ಗದ್ದಲವನ್ನು ಹೆಚ್ಚಿಸಲಾಯಿತು. ಭಾರತದ ಹೈಕಮಿಷನ್ ಈ ಘಟನೆಯನ್ನು ಖಂಡಿಸಿದ್ದು, ಕೆನಡಾದ ಅಧಿಕಾರಿಗಳು ತನಿಖೆ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Canadas Toronto temple collapse: Mayor orders probe

ಘಟನೆಯ ನಂತರ ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳು ದೇವಸ್ಥಾನ ವಿರೂಪಗೊಳಿಸುವಿಕೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು. ಇದು ಒಂದೇ ಒಂದು ಘಟನೆಯಲ್ಲ. ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳಿಂದ ಟೊರೊಂಟೊ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಧ್ವಂಸಗೊಳಿಸಿರುವುದನ್ನು ಎಲ್ಲರೂ ಖಂಡಿಸಬೇಕು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

English summary
Mayor Patrick Brown said on Twitter that authorities have ordered an investigation into the vandalized Swaminarayan temple in a park in Toronto, Canada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X