ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಲ್ ಡ್ರಾಪ್’ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದ ಟ್ರಾಯ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 27: ಮೊಬೈಲ್ ಫೋನ್ ಗ್ರಾಹಕರನ್ನು ಕಾಡುವ 'ಕಾಲ್ ಡ್ರಾಪ್' ಸಮಸ್ಯೆಗೆ ಪರಿಹಾರ ಹುಡುಕಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿರ್ಧರಿಸಿದೆ.

ಇದಕ್ಕಾಗಿ ಕಾಲ್ ಡ್ರಾಪ್ ಗೆ ಗರಿಷ್ಠ ಮಿತಿ ನಿಗದಿಪಡಿಸಲು ಮುಂದಾಗಿದೆ. ಈ ಮೂಲಕ ಕಾಲ್ ಡ್ರಾಫ್ ಸಮಸ್ಯೆಗೆ ನಿಯಂತ್ರಣ ಹೇರುವುದು ಟ್ರಾಯ್ ಉದ್ದೇಶವಾಗಿದೆ.

ನಿರ್ಧಿಷ್ಟ ಪ್ರದೇಶದಲ್ಲಿ ಕಾಲ್ ಡ್ರಾಪ್ ಪ್ರಮಾಣ, ದುರ್ಬಲ ಸಿಗ್ನಲ್ ನ ಅವಧಿಯನ್ನು ನಿರ್ಧರಿಸಿ 'ಕಾಲ್ ಡ್ರಾಪ್'ಗೆ ಗರಿಷ್ಠ ಮಿತಿ ನಿಗದಿಪಡಿಸಲು ಹೊರಟಿದೆ.

Call drop: TRAI working on setting new benchmarks

ಜಾಗತಿಕವಾಗಿ ಕೇವಲ ಶೇ. 2 ಕಾಲ್ ಡ್ರಾಪ್ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಆದರೆ ಭಾರತಕ್ಕೆ ಇದನ್ನು ಅನ್ವಯಿಸುವುದು ಕಷ್ಟ.ಯಾಕೆಂದರೆ ಭಾರತದ ದೂರ ಸಂಪರ್ಕ ವಲಯ ಬೇರೆ ದೇಶಗಳಿಗಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿದೆ.

ಹೀಗಾಗಿ ತಜ್ಞರು ಮತ್ತು ಮೊಬೈಲ್ ಕಂಪನಿಗಳ ಜತೆ ಸಮಾಲೋಚನೆ ಮಾಡಿ ಹೊಸ ಕಾಲ್ ಡ್ರಾಪ್ ಮಿತಿಯನ್ನು ನಿಗದಿಪಡಿಸಲು ಟ್ರಾಯ್ ಮುಂದಾಗಿದೆ.

ಇತ್ತೀಚೆಗೆ ಕರೆಯ ಗುಣಮಟ್ಟವನ್ನು ರೇಟ್ ಮಾಡಲು ಗ್ರಾಹಕರಿಗೆ 'ಮೈ ಕಾಲ್ ಆ್ಯಪ್'ನ್ನು ಟ್ರಾಯ್ ಬಿಡುಗಡೆ ಮಾಡಿತ್ತು. ಈ ಆ್ಯಪ್ ಮೂಲಕ ಗ್ರಾಹಕರು ರಿಯಲ್ ಟೈಮ್ ನಲ್ಲಿ 1 ಸ್ಟಾರ್ ನಿಂದ 5 ಸ್ಟಾರ್ ವರೆಗೆ ರೇಟ್ ನೀಡಬಹುದಾಗಿತ್ತು.

ಈಗಾಗಲೇ ಮೊಬೈಲ್ ಸೇವಾ ಸಂಸ್ಥೆಗಳು ಕಾಲ್ ಡ್ರಾಪ್ ಸಮಸ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳುತ್ತಿವೆ. ಆದರೆ, ಕೆಲವೇ ತಿಂಗಳ ಮೊದಲು ದೂರ ಸಂಪರ್ಕ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಭಾರೀ ಪ್ರಮಾಣದಲ್ಲಿ ಕಾಲ್ ಡ್ರಾಪ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ದೂರಸಂಪರ್ಕ ಸಚಿವಾಲಯದ ವರದಿಗಳ ಪ್ರಕಾರ ಡಿಸೆಂಬರ್ 23, 2016 ಮತ್ತು ಫೆಬ್ರವರಿ 28, 2017 ರ ಮಧ್ಯೆ ಸ್ವಯಂಚಾಲಿತ ಕರೆಗಳನ್ನು 2,20,935 ಗ್ರಾಹಕರಿಗೆ ಮಾಡಿದಾಗ ಇದರಲ್ಲಿ 1,38,072 (62.5%) ಕರೆಗಳಲ್ಲಿ ಕಾಲ್ ಡ್ರಾಪ್ ಸಮಸ್ಯೆ ಕಾಣಿಸಿಕೊಂಡಿತ್ತು.

English summary
The Telecom Regulatory Authority of India or TRAI is working on new benchmarks to address the problem of call drops. The benchmarks will take into account India-specific problems. Besides, they will address issues such as the extent of call drops in a particular area and the duration of bad quality of service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X