ಬಾಲ ರಕ್ಕಸರು ರೇಪ್‌ ಮಾಡಿದ್ರೂ ಗಲ್ಲು ಶಿಕ್ಷೆ ಇಲ್ಲ!

ನವದೆಹಲಿ,ಆ.7: ಅತ್ಯಾಚಾರದಂತಹ ಹೇಯ ಕೃತ್ಯಗಳನ್ನು ಎಸಗಿದ 16 ವರ್ಷ ಮೇಲ್ಪಟ್ಟ ಬಾಲಾಪರಾಧಿಗಳನ್ನು ಸಾಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಲು ಅವಕಾಶ ನೀಡುವ ಬಾಲನ್ಯಾಯ ಕಾಯ್ದೆಯ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ರಾತ್ರಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಇಲ್ಲಿಯವರೆಗೆ 18 ವಯಸ್ಸಿನ ಕೆಳಗಿನ ಅಪರಾಧಿಗಳು ಗಂಭೀರ ಕೃತ್ಯ ಎಸಗಿದ್ದರೂ ಅವರನ್ನು ಬಾಲಾಪರಾಧಿ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆಗೆ ಗುರಿಪಡಿಸಲಾಗುತಿತ್ತು. ಆದರೆ ಈಗ ಬಾಲನ್ಯಾಯ ಕಾಯ್ದೆ ತಿದ್ದುಪಡಿಯಾದ ಬಳಿಕ ಅಪ್ರಾಪ್ತ ವಯಸ್ಕ ಆರೋಪಿಗಳ ವಯೋಮಿತಿಯನ್ನು 18ರಿಂದ 16 ವರ್ಷಕ್ಕೆ ಇಳಿಸಲಾಗಿದೆ. ಜೊತೆಗೆ ಈ

narendra modi

ಶಿಕ್ಷೆಯ ಪ್ರಮಾಣ ಎಷ್ಟು? ಈ ಹಿಂದೆ ಬಾಲಾಪರಾಧಿಗಳು ಗಂಭೀರ ಕೃತ್ಯಗಳನ್ನು ಎಸಗಿ ದೋಷಿ ಎಂದು ಕಂಡುಬಂದರೆ ಅವರಿಗೆ ಗರಿಷ್ಠ 3 ವರ್ಷ‌ ಜೈಲು ಶಿಕ್ಷೆಯಾಗುತಿತ್ತು. ಆದರೆ ಇನ್ನು ಮುಂದೆ ಬಾಲಾಪರಾಧಿಗಳಿಗೆ 3 ವರ್ಷ‌ಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಶಿಕ್ಷೆಯ ಅವಧಿ ಹೆಚ್ಚಾದರೂ ಜೀವಾವಧಿ ಅಥವಾ ಗಲ್ಲುಶಿಕ್ಷೆ ವಿಧಿಸುವಂತಿಲ್ಲ.[ತೀರ್ಪು ನೀಡದೆ ಅಪರಾಧಿಯನ್ನು ಬಿಟ್ಟಿದ್ದರೆ ಚೆನ್ನಾಗಿತ್ತು']

ಯಾಕೆ ತಿದ್ದುಪಡಿ: 2012 ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಮುಂಬೈಯ ಶಕ್ತಿಮಿಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಭಾಗಿಯಾಗಿದ್ದ ಬಾಲ ರಕ್ಕಸರಿಗೆ ಮೂರು ವರ್ಷ ಶಿಕ್ಷೆಯಾಗಿತ್ತು. ಶಿಕ್ಷೆಯ ಪ್ರಮಾಣ ಕಡಿಮೆಯಾಗಿದ್ದಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ಸೇರಿದಂತೆ ದೇಶದೆಲ್ಲೆಡೆ ಹೆಚ್ಚಾಗುತ್ತಿರುವ ಬಾಲ ರಕ್ಕಸರನ್ನು ಸಾಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ನಡೆಸಬೇಕು, ಅವರಿಗೂ ಹೆಚ್ಚಿನ ಪ್ರಮಾಣದ ಶಿಕ್ಷೆ ವಿಧಿಸಬೇಕು ಎನ್ನುವ ಕೂಗು ಎಲ್ಲೆಡೆಯಿಂದ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ಸಂಪುಟ ಇದೀಗ 'ಬಾಲ ನ್ಯಾಯ ಕಾಯ್ದೆ' ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ.

ಹೆಚ್ಚಾಗುತ್ತಿದೆ ರೇಪ್‌: ಬಾಲ ರಕ್ಕಸರು ಅತ್ಯಾಚಾರ ಎಸಗುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಕೇಂದ್ರ (National Crime Records Bureau) ಮಾಹಿತಿ ಪ್ರಕಾರ 2010ರಲ್ಲಿ 858, 2011ರಲ್ಲಿ 1149, 2012ರಲ್ಲಿ 1331, 2013ರಲ್ಲಿ 1,388 ಬಾಲ ರಕ್ಕಸರು ಅತ್ಯಾಚಾರ ಎಸಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+