ರಾತ್ರಿ 12.30; ರೀ, ಎದ್ದೇಳ್ರೀ ಸಿನಿಮಾಕ್ಕೆ ಹೋಗೋಣ!

Written By:
Subscribe to Oneindia Kannada

ನವದೆಹಲಿ, ಜೂನ್, 29: ನಿಮ್ಮ ಹೆಂಡತಿ ಮಧ್ಯರಾತ್ರಿ ನಿಮ್ಮನ್ನು ಎಬ್ಬಿಸಿ ಶಾಪಿಂಗ್ ಹೋಗೋಣ ಎಂದರೂ ಆಶ್ಚರ್ಯವಿಲ್ಲ. ನನ್ನ ಬಳಿ ಟೈಮಿಲ್ಲ ನಾಳೆ ಸಿನಿಮಾಕ್ಕೆ ಹೋಗೋಣ ಎಂದು ನೆಪ ಹೇಳುವಂತೆಯೂ ಇಲ್ಲ. ಕೇಂದ್ರ ಸರ್ಕಾರ ಬುಧವಾರ "ಮಾದರಿ ಮಳಿಗೆ ಮತ್ತು ಸಂಸ್ಥೆ" ಕಾಯಿದೆಗೆ ಅನುಮೋದನೆ ನೀಡುವ ಮೂಲಕ ಗಂಡಸರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ!

ಕೇಂದ್ರ ಸರ್ಕಾರ ಬುಧವಾರ "ಮಾದರಿ ಮಳಿಗೆ ಮತ್ತು ಸಂಸ್ಥೆ" ಕಾಯಿದೆಗೆ ಅನುಮೋದನೆ ನೀಡಿದ್ದು ಪರಿಣಾಮ ಇನ್ನು ಮುಂದೆ ಬ್ಯಾಂಕ್ ಗಳು, ಮಳಿಗೆಗಳು, ಸಿನಿಮಾ ಮಂದಿರ, ಚಿಲ್ಲರೆ ವ್ಯವಹಾರದ ಅಂಗಡಿಗಳು, ಮಾಲ್‌ಗ‌ಳು ವಾರದ ಏಳು ದಿನ ಅಲ್ಲದೇ ದಿನದ 24 ತಾಸುಗಳ ಕಾಲವೂ ತೆರೆದಿರಲಿವೆ.[ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ]

mall

ಈ ನೀತಿಯ ಅನ್ವಯ ಪಟ್ಟಿಯಲ್ಲಿರುವ ಎಲ್ಲ ವ್ಯಾಪಾರ ವಹಿವಾಟು ತಾಣಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಲಭ್ಯವಾಗಲಿದೆ. ಘಟಕಗಳು 10 ಹಾಗೂ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನಿಯೋಜಿಸಿಕೊಳ್ಳಲು ಅವಕಾಶ ಸಿಗಲಿದೆ. ತಮಗೆ ಇಷ್ಟ ಬಂದಾಗ ಬಂದ್ ಮಾಡಲು ಸಹ ಸ್ವಾತಂತ್ರ್ಯ ಲಭ್ಯವಾಗುತ್ತದೆ.

ಮಹಿಳೆಯರನ್ನು ನೇಮಕ ಮಾಡಿಕೊಳ್ಳು ಅವಕಾಶ ನೀಡಲಾಗಿದ್ದು ಕಟ್ಟು ನಿಟ್ಟಿನ ಕೆಲ ನಿಯಮಾವಳಿ ಬಗ್ಗೆ ಸೂಚನೆ ನೀಡಿದೆ. ಕುಡಿಯಲು ಉತ್ತಮ ನೀರು, ಕ್ಯಾಂಟೀನ್, ಪ್ರಥಮ ಚಿಕಿತ್ಸೆ ಸೇರಿದಂತೆ ಸರಿಯಾದ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದು ತಿಳಿಸಲಾಗಿದೆ.[ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಕೊಡುಗೆ]

ಹೊಸ ಪದ್ಧತಿಯನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡುತ್ತಿರಬೇಕು. ಯಾವುದಾರೂ ಬದಲಾವಣೆ ಅಗತ್ಯವಿದೆಯೇ? ವಾಸ್ತವ ಸ್ಥಿತಿ ಹೇಗಿದೆ ಎಂಬುದನ್ನು ಕಾರ್ಮಿಕ ಇಲಾಖೆ ಮೇಲ್ವಿಚಾರಣೆ ಮಾಡುತ್ತಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಾಮಾಜಿಕ ಸೇವೆ ಮತ್ತಿತರ ವಿಷಯದಲ್ಲಿ ಏಕರೂಪತೆಯನ್ನು ತರುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಮಾದರಿ ವಾಣಿಜ್ಯ ಮಳಿಗೆ ಮತ್ತು ಸಂಸ್ಥೆಗಳ ಕಾಯಿದೆಗೆ ಅನುಮೋದನೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A model law that allows shops, malls and cinema halls, among other establishments, to run 24x7 throughout the year received Cabinet assent on Wednesday. The law covers establishments employing 10 or more workers except manufacturing units and will provide freedom to operate 365 days with flexibility on timing to open and close.
Please Wait while comments are loading...