8 ನಗರಗಳಲ್ಲಿ ಪ್ರಗತಿಯಲ್ಲಿರುವ ಮೆಟ್ರೋ ರೈಲು ಯೋಜನೆ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 17: ಮೆಟ್ರೋ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು ಎಂದಿರುವುದು ಗೊತ್ತಿರಬಹುದು. ಹೊಸ ಮೆಟ್ರೋ ರೈಲು ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಚಿವ ಸಂಪುಟವು ಅನುಮೋದನೆ ನೀಡಿದೆ . 8 ನಗರಗಳಲ್ಲಿ ಪ್ರಗತಿಯಲ್ಲಿರುವ ಯೋಜನೆಗಳ ಪಟ್ಟಿ ಇಲ್ಲಿದೆ

ದೊಡ್ಡ ಸಾಮರ್ಥ್ಯದ ಮೆಟ್ರೋ ಯೋಜನೆಗೆಳಿಗೆ ಬೃಹತ್ ಸಂಪನ್ಮೂಲ ಬೇಡಿಕೆ ಪೂರೈಸಲು ಖಾಸಗಿ ಹೂಡಿಕೆ ಮತ್ತು ಇತರೆ ಹೂಡಿಕೆ ಸಂಸ್ಥೆಗಳು ಭಾಗವಹಿಸುವುದು ಯೋಜನೆಯ ಭಾಗವಾಗಿದೆ.

Cabinet approves new policy to regulate metro rail services across India

ಜಾಗತಿಕವಾಗಿ, ಸಾಮಾಜಿಕ ಹಾಗೂ ಆರ್ಥಿಕವಾಗಿ ಯೋಜನೆಯನ್ನು ಉತ್ತಮಗೊಳಿಸಲು ಹೂಡಿಕೆ ದರವನ್ನು ಶೇ. 8ರಿಂದ 14ಕ್ಕೆ ಏರಿಸಲಾಗಿದೆ. ನಗರ ಯೋಜನೆಗಳು ಕೇವಲ ನಗರ ಯೋಜನೆಗಳಾಗುವುದು ಬೇಡ. ನಗರೀಕರಣದ ಯೋಜನೆಗೆ ಕೊಡುಗೆಯಂತಿರಲಿ. ಇದರ ಜತೆಗೆ ಟ್ರಾನ್ಸಿಟ್ ಓರಿಯೆಂಟೆಡ್ ಡೆವಲೆಪ್ ಮೆಂಟ್ (ಟಿಒಡಿ) ಸಂಸ್ಥೆಯು ಮೆಟ್ರೋ ಯೋಜನೆ ಮೂಲಕ ನಗರದ ವಾಹನ ದಟ್ಟಣೆಯನ್ನು ಕಡಮೆ ಮಾಡುವಲ್ಲಿ ನೆರವಾಗಲಿದೆ.

ಮೆಟ್ರೋ ರೈಲು ಪ್ರಯಾಣದ ದರವನ್ನು ಕಾಲಕಾಲಕ್ಕೆ ನಿಗದಿಗೊಳಿಸುವ ಮತ್ತು ಕಾನೂನು ಕಟ್ಟಲೆಗಳನ್ನು ಜಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಯೋಜನೆಯನ್ನು ಸರ್ಕಾರಗಳು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಮೂರು ರೀತಿಯ ಸಹಾಯವನ್ನು ಪಡೆಯಬಹುದಾಗಿದೆ.

ಪಿಪಿಪಿ, ಕೇಂದ್ರ ಹಣಕಾಸು ಸಚಿವಾಲಯದಿಂದ ಗ್ಯಾಪ್ ಫಂಡಿಂಗ್, ಶೇ. 50ರ ಅನುಪಾತದಲ್ಲಿ ಕೇಂದ್ರ ಸರ್ಕಾರದ ಸಹಾಯವನ್ನು ಪಡೆಯಬಹುದಾಗಿದೆ. ಈ ಎಲ್ಲ ಆಯ್ಕೆಗಳ ನಡುವೆ ಖಾಸಗಿ ವಲಯ ಭಾಗವಹಿಸುವುದು ಅಗತ್ಯವಾಗಿದೆ.

ಹಾಲಿ ಒಟ್ಟು 370 ಕಿಮೀ ಮೆಟ್ರೋ ಯೋಜನೆಯ ಕೆಲಸಗಳು ಒಟ್ಟು 8 ನಗರಗಳಲ್ಲಿ ಪ್ರಗತಿಯಲ್ಲಿವೆ.
ದೆಹಲಿ (217), ಬೆಂಗಳೂರು(42.30), ಕೊಲ್ಕತ್ತ (27.39), ಚೆನ್ನೈ (27.36), ಕೊಚ್ಚಿ (13.30), ಮುಂಬೈ (ಮೆಟ್ರೋ ಲೈನ್ 1-140 ಕೀಮಿ), ಮೊನೊ ರೈಲು ಫೇಸ್ 1-9.0ಕಿಮೀ) ಜೈಪುರ (9.00 ಕಿಮೀ), ಮತ್ತು ಗುರ್‍ಗಾವ್ (ರ್ಯಾಪಿಡ್ ಮೆಟ್ರೋ 1.60 ಕಿಮೀ) ಒಟ್ಟಾರೆ ಈ ಮೇಲ್ಕಂಡ 8 ನಗರಗಳು ಸೇರಿದಂತೆ 13 ನಗರಗಳಲ್ಲಿ ಮೆಟ್ರೋ ಯೋಜನೆಯು 537 ಕಿಮೀ ಕೆಲಸ ಪ್ರಗತಿಯಲ್ಲಿದೆ.

ಈ ಯೋಜನೆಯು ಒಳಪಟ್ಟಿರುವ ಹೊಸ ನಗರಗಳು ಅಂದರೆ ಹೈದರಾಬಾದ್ (71ಕಿಮೀ), ನಾಗಪುರ (38ಕಿಮೀ), ಅಹಮದಾಬಾದ್ (36), ಪುಣೆ (31.25 ಕಿಮೀ), ಪುಣೆ (31.25 ಕಿಮೀ), ಮತ್ತು ಲಖನೌ (23 ಕಿಮೀ). ಮೆಟ್ರೋ ಯೋಜನೆಯು ಒಟ್ಟು 595 ಕಿಮೀ ಉದ್ದವಿದ್ದು, ಒಟ್ಟು 13 ನಗರಗಳನ್ನು ಒಳಗೊಂಡಿದೆ. ಅದರಲ್ಲಿ 10 ಹೊಸ ನಗರಗಳೂ ಸೇರಿವೆ. ಆದರೆ ಅವುಗಳು ಇನ್ನು ಯೋಜನೆಯ ಪ್ರಗತಿಯಲ್ಲಿವೆ.

ಅವುಗಳೆಂದರೆ ದೆಹಲಿ ಮೆಟ್ರೋ ಫೇಸ್ 4- 103-93 ಕಿಮೀ, ದೆಹಲಿ ಮತ್ತು ಎನ್‍ಸಿಆರ್ 21.10 ಕಿಮೀ, ವಿಜಯವಾಡ 26.03 ಕಿಮೀ, ವಿಶಾಖಪಟ್ಟಣ 12055 ಕಿಮೀ, ಭೋಪಾಲ್ 27.87 ಕಿಮೀ, ಇಂದೋರ್ 31.55 ಕಿಮೀ, ಕೊಚ್ಚಿ ಮೆಟ್ರೋ ಫೇಸ್ 11-11.20 ಕಿಮೀ,ಗ್ರೇಟರ್ ಚಂಡಿಗಢ ಮೆಟ್ರೋ ಪ್ರಾಜೆಕ್ಟ್ 37.56 ಕಿಮೀ, ಪಟನಾ27.88 ಕಿಮೀ, ಗುವಾಹತಿ 61 ಕಿಮೀ, ವಾರಾಣಸಿ 29.24 ಕಿಮೀ, ತಿರುವನಂತಪುರಂ ಮತ್ತು ಕಾಚಿಗೂಡ (ಲೈಟ್ ರೈಲು ಟ್ರಾನ್ಸ್‍ಪೋರ್ಟ್) 35012 ಮತ್ತು ಚೆನ್ನೈ ಫೇಸ್ 2 107.50 ಕಿಮೀ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The new policy was approved by the Union Cabinet chaired by Prime Minister Narendra Modi is expected to promote 'Make in India' initiative in metro rail projects.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ