By Poll of Kerala: ಪುತ್ತುಪ್ಪಲ್ಲಿಯಲ್ಲಿ ದಿ.ಉಮ್ಮನ್ ಚಾಂಡಿ ಪ್ರಭಾವ ಕಾಂಗ್ರೆಸ್ ಕೈಹಿಡಯಲಿದೆ?

ಬೆಂಗಳೂರು, 27: ದೇಶದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಇತ್ತೀಚೆಗೆ ಮೃತಪಟ್ಟ ಕಾಂಗ್ರೆಸ್‌ ಹಿರಿಯ ನಾಯಕ ಉಮ್ಮನ್ ಚಾಂಡಿ ಅವರು ಕ್ಷೇತ್ರ 'ಪುತ್ತುಪ್ಪಲ್ಲಿ' ಉಪ ಚುನಾವಣೆ ಅಖಾಡ ರಂಗೇರುತ್ತಿದೆ. ಕಾಂಗ್ರೆಸ್‌ ಪಕ್ಷವು ದಿ.ಉಮ್ಮನ್ ಚಾಂಡಿ ಪುತ್ರ 37 ವರ್ಷ ಚಾಂಡಿ ಉಮ್ಮನ್ ಅವರನ್ನು ಉಪ ಚುನಾವಣೆ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಲ್ಲಿಸಿದೆ. ಈ ಮೂಲಕ ಗೆಲ್ಲುವ ತಂತ್ರಗಾರಿಕೆ ಹೆಣೆದಿದೆ.

ಸೆಪ್ಟೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. 2024ರ ಲೋಕಸಭಾ ಚುನಾವಣೆ ಎದುರಾಗಲಿದ್ದು, ಈ ಉಪಚುನಾವಣೆಯ ಗೆಲುವು ಸಹ ಎಲ್ಲ ರಾಜಕೀಯ ಪಕ್ಷಗಳಿಗೆ ಬಲ ತುಂಬಲಿದೆ.

By Poll Of Kerala: Late Oommen Chandys Influence In Puthuppally Is Likely To Benefit Congress

ನಡೆಯಲಿರುವ ಕೇರಳದ ಪುತ್ತುಪಲ್ಲಿ ವಿಧಾನಸಭಾ ಉಪಚುನಾವಣೆ ಇನ್ನೂ ಹೆಚ್ಚು ರಾಜಕೀಯ ಮಹತ್ವ ಹೊಂದಿದೆ. ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಪ್ರಾಬಲ್ಯವಿದ್ದು, ಕಾಂಗ್ರೆಸ್ ಭದ್ರಕೋಟೆಯಾಗಿದೆ. 53 ವರ್ಷಗಳ ಕಾಲ ದಿವಂಗತ ಉಮ್ಮನ್ ಚಾಂಡಿ ಪ್ರತಿನಿಧಿಸಿದ್ದರು. ಇವರು ಮತದಾರರಲ್ಲಿ ಆಳ ಪ್ರಭಾವ ಹೊಂದಿದ್ದು, ಮುಂದಿನ ಅದನ್ನು ಅವರ ಪುತ್ರ ಪ್ರತಿನಿಧಿಸುವ ಮುನ್ಸೂಚನೆ ಇದೆ. ಈ ಕಾರಣದಿಂದ ದಿವಂಗತರನ್ನು ಜನ 'ಕುಂಜುಂಜು' ಎಂದು ಕರೆಯುತ್ತಿದ್ದರು. 'ಕುಂಜುಂಜು' ಅಂದರೆ ಚಿಕ್ಕ ಸಹೋದರ, ಮನೆ ಮಗ ಎಂದರ್ಥ.

ಕಾಂಗ್ರೆಸ್‌ ಗೆಲುವಿನ ತಂತ್ರಗಾರಿಕೆ

ಕಾಂಗ್ರೆಸ್‌ಗೆ ಈ ಉಪಚುನಾವಣೆಯು ಲೋಕಸಭಾ ಚುನಾವಣೆ ಪೂರ್ವದಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸುವ ಒಂದು ಅವಕಾಶವಾಗಿದೆ. ದಿವಂಗತ ಉಮ್ಮನ್ ಚಾಂಡಿ ಪುತ್ರ ಚಾಂಡಿ ಉಮ್ಮನ್ ಚುನಾವಣೆಗೆ ಕಣಕ್ಕಿ ಇಳಿಸಿರುವ ಕಾಂಗ್ರೆಸ್ ಗೆಲವಿನ ತಂತ್ರ ರೂಪಿಸಿದೆ. ಕಾಋಣ ಈ ಹಿಂದೆ ಪಕ್ಷದ ಹಿರಿಯ ನಾಯಕ ಪಿ.ಟಿ. ಥಾಮಸ್ ಅವರ ಮರಣಾನಂತರ ಪತ್ನಿ ಉಮಾ ಥಾಮಸ್ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ಇದೀಗ ಅಂತದ್ಧೆ ತಂತ್ರಗಾರಿಕೆ ಕಾಂಗ್ರೆಸ್ ಹೆಣದಿದೆ.

ಕ್ಷೇತ್ರದಲ್ಲಿ ಭ್ರಷ್ಟ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಭಾರಿ ಜನಾದೇಶ ಪಡೆಯುವಲ್ಲಿ ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ. ಈ ಚುನಾವಣೆಯು ಲೋಕಸಭೆ ಚುನಾವಣೆಗೆ ಸೆಮಿಫೈನಲ್ ಇದ್ದಂತೆ. ಹೀಗಾಗಿ ವಿವಿಧ ಪಕ್ಷಗಳ ಚುನಾವಣಾ ಪ್ರಚಾರವು ಮತದಾರರನ್ನು ದೊಡ್ಡ ರೀತಿಯಲ್ಲಿ ಆಕರ್ಷಿಸಲು ಯೋಜನೆ ರೂಪಿಸಿಕೊಂಡಿವೆ.

By Poll Of Kerala: Late Oommen Chandys Influence In Puthuppally Is Likely To Benefit Congress

ತಂದೆ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭ

ಆಗಸ್ಟ್ 10 ರಂದು ಅಭ್ಯರ್ಥಿ ಚಾಂಡಿ ಉಮ್ಮನ್ ಪುತ್ತುಪ್ಪಲ್ಲಿ ಕ್ಷೇತ್ರದಲ್ಲಿನ ಸೇಂಟ್ ಜಾರ್ಜ್ ಚರ್ಚ್‌ನಲ್ಲಿರುವ ತಮ್ಮ ತಂದೆಯ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮುಖೇನ ಪ್ರಚಾರ ಆರಂಭಿಸಿದರು. ತಂದೆಯಂತೆ ಕ್ಷೇತ್ರದಲ್ಲಿ ನಡೆಯುದಾಗಿ ಅವರು ಪ್ರತಿಜ್ಞೆ ಮಾಡಿದರು.

ಸಿಪಿಐ (ಎಂ) ರಾಜ್ಯ ಸಮಿತಿ ಸದಸ್ಯ ಕೆ.ಅನಿಲ್‌ಕುಮಾರ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಉಮ್ಮನ್ ಚಾಂಡಿಗೆ ಚಿಕಿತ್ಸೆ ಒದಗಿಸಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮಧ್ಯಪ್ರವೇಶ, ಕಾರ್ಯ ಕುರಿತು ಪೊಸ್ಟ್ ಮಾಡಿದ್ದಾರೆ.ಚಿಕಿತ್ಸೆ ನಂತರದ ಪಡೆದ ಪ್ರಚಾರ ಅಸಹತ್ಯಕೆ ಎಂದು ಅವರು ಆರೋಪಿಸಿದ್ದಾರೆ.

ಆನಾರೋಗ್ಯಕ್ಕೆ ಒಳಗಾಗಿದ್ದ ಉಮ್ಮನ್ ಚಾಂಡಿ ಅವರ ಮಗಳು ಅಚ್ಚು ಉಮ್ಮನ್ ಮತ್ತಿತರ ಸಂಬಂಧಿಕರ ಮನವಿ ಮೇರೆಗೆ ಸರ್ಕಾರ ಎಲ್‌ಡಿಎಫ್ ವೈದ್ಯಕೀಯ ಮಂಡಳಿ ರಚಿಸಿತ್ತು. ಕೊನೆ ಗಳಿಗೆಯಲ್ಲಿ ಉಮ್ಮನ್ ಚಾಂಡಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರೆಂದು ಹೇಳಿದರು.

ಅಭಿವೃದ್ಧಿ ಹೆಸರಿನಡಿ ಪ್ರಚಾರ

ಸಿಪಿಐ(ಎಂ) ಪಕ್ಷವು ಉಮ್ಮನ್ ಚಾಂಡಿಯ ಚಿಕಿತ್ಸೆ ವಿಚಾರವನ್ನು ರಾಜಕೀಯಗೊಳಿಸದಿರಲು ನಿರ್ಧರಿಸಿತು. ನಾವು ಅಭಿವೃದ್ಧಿ ವಿಷಯಗಳ ಮೇಲೆ ಪುತ್ತುಪ್ಪಳ್ಳಿ ಉಪಚುನಾವಣೆಯಲ್ಲಿ ಹೋರಾಡುತ್ತೇವೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ತರ್ ತಿಳಿಸಿದರು. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಉಮ್ಮನ್ ಚಾಂಡಿ ಅವರ ಕ್ಷೇತ್ರದ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದರು.

ಉಚಚುನಾವಣಾ ಪ್ರಚಾರವು ಕಾವು ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು CPI (M)ಎರಡೂ ಪುತ್ತುಪ್ಪಳ್ಳಿಯ ಅಭಿವೃದ್ಧಿಯ ಬಗ್ಗೆ ತಮ್ಮದೇ ಆದ ನಿರೂಪಣೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ. ಕ್ಷೇತ್ರದಲ್ಲಿ ಉಮ್ಮನ್ ಚಾಂಡಿ ಪ್ರಭಾವವು ಕಾಂಗ್ರೆಸ್‌ಗೆ ವರದಾನವಾಗಲಿದೆ. ಸಿಪಿಐ (ಎಂ) ಸಹಾನುಭೂತಿ ವಿರುದ್ಧ ಕಾಂಗ್ರೆಸ್‌ ಪ್ರಭಾವ ಸಾಧಿಸಬೇಕಿದೆ. ಇನ್ನು ಸಿಎಂ ಪಿಣರಾಯಿ ವಿಜಯನ್ ಅವರು ಆಗಸ್ಟ್ 24 ರಿಂದಲೇ ಪ್ರಚಾರ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+