ಉಪಚುನಾವಣೆ ಫಲಿತಾಂಶ: ಪ.ಬಂಗಾಳದಲ್ಲಿ ಟಿಎಂಸಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ
ಜೈಪುರ, ಫೆಬ್ರವರಿ 1: ರಾಜಸ್ಥಾನದ ಮತ್ತು ಪಶ್ಚಿಮ ಬಂಗಾಳದ ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಜ.29 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು(ಫೆ.1) ಹೊರಬೀಳಲಿದ್ದು, ಈಗಾಗಲೇ ಮತ ಎಣಿಗೆ ಆರಂಭವಾಗಿದೆ.
ಪಶ್ಚಿಮ ಬಂಗಾಳದಲ್ಲಿ ಉಲೆಬೆರಿಯಾ ಲೋಕಸಭಾ ಕ್ಷೇತ್ರ ಮತ್ತು ನೊವಾಪಾರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಆರಂಭವಾಘಿದ್ದು, ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಭ್ಯರ್ಥಿ ಮೇಲುಗೈ ಸಾಧಿಸಿದ್ದಾರೆ. ಒಟ್ಟು 13 ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರವಾಗಲಿದೆ.
ಈ ವರ್ಷ ವಿಧಾನಸಭೆ ಚುನಾವಣೆಯೂ ಇರುವುದರಿಂದ ರಾಜಸ್ಥಾನ ಉಪಚುನಾವಣೆ ಮಹತ್ವದ್ದೆನಿಸಿದೆ. ಈಗಾಗಲೇ ಇಲ್ಲಿನ ಅಜ್ಮೇರ್ ಕ್ಷೇತ್ರದಲ್ಲಿ 6000 ಕ್ಕೂ ಹೆಚ್ಚು ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಮುಂದಿದ್ದಾರೆ. ರಾಜಸ್ಥಾನದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುಂದಿದೆ.
ಸಂಸದರಾಗಿದ್ದ ಸನ್ವರ್ ಲಾಲ್ ಜತ್ ಅವರ ಮರಣದ ನಂತರ ತೆರವಾಗಿದ್ದ ರಾಜಸ್ಥಾನ ಅಜ್ಮೇರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸನ್ವರ್ ಅವರ ಮಗ ರಾಮ್ ಸ್ವರೂಪ್ ಲಂಬಾ ಸ್ಪರ್ಧಿಸಿದ್ದರು.. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ರಘು ಶರ್ಮಾ ಸ್ಪರ್ಧಿಸಿದ್ದರು.
ಅಲ್ವರ್ ಕ್ಷೇತ್ರದ 1987 ಮತಗಟ್ಟೆಗಳಲ್ಲಿ ಮತ್ತು ಅಜ್ಮೇರ್ ನ 1925 ಮತಗಟ್ಟೆಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಅಲ್ವರ್ ನಲ್ಲಿ 11 ಅಭ್ಯರ್ಥಿಗಳು, ಅಜ್ಮೇರ್ ನಲ್ಲಿ 23 ಅಭ್ಯರ್ಥಿಗಳು ಮತ್ತು ಮಂಡಲಗಢದಲ್ಲಿ 8 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅವರೆಲ್ಲರ ಹಣೆಬರಹ ಇಂದು ನಿರ್ಧಾರವಾಗಲಿದೆ.













Click it and Unblock the Notifications