ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

By-Election Result 2022: 3 ಲೋಕಸಭೆ ,7 ವಿಧಾನಸಭೆ ಉಪ ಚುನಾವಣೆ ವಿಜೇತರು

|
Google Oneindia Kannada News

ನವದೆಹಲಿ, ಜೂನ್ 26: ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರ, ಪಂಜಾಬ್‌ನ ಒಂದು ಲೋಕಸಭಾ ಕ್ಷೇತ್ರ ಸೇರಿದಂತೆ 3 ಲೋಕಸಭಾ ಕ್ಷೇತ್ರ, ಏಳು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶ ಜೂನ್ 26ರಂದು ಹೊರ ಬಂದಿದೆ.

ಉತ್ತರ ಪ್ರದೇಶದ ರಾಮ್‌ಪುರ ಮತ್ತು ಅಜಂಗಢ್ ಮತ್ತು ಪಂಜಾಬ್‌ನ ಸಂಗ್ರೂರ್. ದೆಹಲಿಯ ರಾಜಿಂದರ್ ನಗರ್ ಉಪ ಚುನಾವಣೆ ಕುತೂಹಲ ಕೆರಳಿಸಿತ್ತು. ಉತ್ತರ ಪ್ರದೇಶದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ಮುಖಂಡ ಅಜಂ ಖಾನ್ ಭದ್ರಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ರಾಂಪುರದ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಘನಶ್ಯಾಮ್ ಸಿಂಗ್ ಲೋಧಿ ಭಾನುವಾರ ಗೆಲುವು ಸಾಧಿಸಿದ್ದಾರೆ.

ಉಪ ಚುನಾವಣೆ: 7 ವಿಧಾನಸಭೆ 3 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿವರುಉಪ ಚುನಾವಣೆ: 7 ವಿಧಾನಸಭೆ 3 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿವರು

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಘನಶ್ಯಾಮ್ ಸಿಂಗ್ ಲೋಧಿ ಮೊದಲ ಯತ್ನದಲ್ಲೇ ಬಂಪರ್ ಗೆಲುವು ಸಾಧಿಸಿದ್ದಾರೆ. ಅಜಂ ಖಾನ್ ಆಯ್ಕೆಯ ಎಸ್‌ಪಿ ಅಭ್ಯರ್ಥಿ ಅಸೀಂ ರಾಜಾ ಸೋಲು ಕಂಡಿದ್ದರೆ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಂಪುರದಿಂದ ಸ್ಪರ್ಧಿಸಿರಲಿಲ್ಲ.

By-Election Result 2022: List Of Winners From 3 Lok Sabha, 7 State Assembly Seats

ಈ ನಡುವೆ ಅಜಂಗಢದಲ್ಲಿ ಭೋಜ್‌ಪುರಿ ನಟ-ಗಾಯಕ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲಾ ಯಾದವ್ ನಿರ್ಹುವಾ, ಮುನ್ನಡೆ ಸಾಧಿಸಿದ್ದಾರೆ. ಎಸ್ಪಿಯ ಧರ್ಮೇಂದ್ರ ಯಾದವ್ ಮತ್ತು ಬಿಎಸ್ಪಿಯ ಗುಡ್ಡು ಜಮಾಲಿ ಎಂದು ಕರೆಯಲ್ಪಡುವ ಶಾ ಆಲಂ ಅವರು ಅಜಂಗಢ ಕ್ಷೇತ್ರದಲ್ಲಿ ಇತರೆ ಸ್ಪರ್ಧಿಗಳಾಗಿದ್ದಾರೆ.

ಜೂನ್ 23 ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಿತು. ಉಪಚುನಾವಣೆ ಅಗತ್ಯವಿರುವ ಮೂರು ಲೋಕಸಭಾ ಸ್ಥಾನಗಳೆಂದರೆ ಉತ್ತರ ಪ್ರದೇಶದ ರಾಮ್‌ಪುರ ಮತ್ತು ಅಜಂಗಢ್ ಮತ್ತು ಪಂಜಾಬ್‌ನ ಸಂಗ್ರೂರ್.

ಏತನ್ಮಧ್ಯೆ, ದೆಹಲಿಯ ರಾಜಿಂದರ್ ನಗರ್, ಜಾರ್ಖಂಡ್‌ನ ಮಂದರ್, ಆಂಧ್ರಪ್ರದೇಶದ ಆತ್ಮಕೂರ್ ಮತ್ತು ಅಗರ್ತಲಾ, ಟೌನ್ ಬೋರ್ಡೋವಾಲಿ, ಸುರ್ಮಾ ಮತ್ತು ತ್ರಿಪುರಾದ ಜಬರಾಜನಗರ - ಏಳು ವಿಧಾನಸಭಾ ಸ್ಥಾನಗಳು ಹೀಗೆ ರಾಷ್ಟ್ರದಾದ್ಯಂತ ಹರಡಿಕೊಂಡಿವೆ.

ಯಾವುದೇ ಫಲಿತಾಂಶಗಳು ಆ ರಾಜ್ಯಗಳ ಆಡಳಿತಾರೂಢ ಸರ್ಕಾರದ ಅಸ್ತಿತ್ವವನ್ನು ಸಾಮರ್ಥ್ಯವನ್ನು ಹೊಂದಿಲ್ಲವಾದರೂ, ಪ್ರತಿಷ್ಠೆಯ ಕಣಗಳಾಗಿದ್ದವು.

ತ್ರಿಪುರಾ ರಾಜ್ಯದ ಅಗರ್ತಲಾ, ಜುಬರಾಜನಗರ, ಸುರ್ಮಾ ಮತ್ತು ಟೌನ್ ಬರ್ಡೋವಾಲಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಿತು. ಟೌನ್ ಬರ್ಡೋವಾಲಿಯಿಂದ ಸ್ಪರ್ಧಿಸಿರುವ ರಾಜ್ಯಸಭಾ ಸಂಸದ ಮಾಣಿಕಾ ಸಹಾ ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ತ್ರಿಪುರಾದಲ್ಲಿ ನಾಲ್ಕರಲ್ಲಿ ಮೂರು ಸ್ಥಾನ ಬಿಜೆಪಿ ಪಾಲಾಗಿದೆ.

ಫೆಬ್ರವರಿಯಲ್ಲಿ ಕೈಗಾರಿಕಾ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನರಾದ ನಂತರ ತೆರವಾದ ಸ್ಥಾನಕ್ಕೆ ಆಂಧ್ರಪ್ರದೇಶದಲ್ಲಿ ಉಪಚುನಾವಣೆ ನಡೆಸಲಾಯಿತು. ಮೇಕಪತಿ ಗೌತಮ್ ರೆಡ್ಡಿ ಕಿರಿಯ ಸಹೋದರ ವಿಕ್ರಮ್ ರೆಡ್ಡಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಅಭ್ಯರ್ಥಿ ಜಿ ಭರತ್ ಕುಮಾರ್ ಯಾದವ್ ಸ್ಪರ್ಧಿಸಿದ್ದಾರೆ.

ಲೋಕಸಭೆ, ವಿಧಾನಸಭೆ ಉಪ ಚುನಾವಣೆ 2022 ವಿಜೇತ ಅಭ್ಯರ್ಥಿಗಳು

By-Election Result 2022: List Of Winners From 3 Lok Sabha, 7 State Assembly Seats
ಉಪ ಚುನಾವಣೆ 2022 ವಿಜೇತ ಅಭ್ಯರ್ಥಿಗಳು
ರಾಜ್ಯ ಕ್ಷೇತ್ರದ ಹೆಸರು ವಿಜೇತ/ಮುನ್ನಡೆ ಪಕ್ಷ
ಜಾರ್ಖಂಡ್ ವಿಧಾನಸಭೆ ಮಂದಾರ್ ಶಿಲ್ಪಿ ನೆಹಾ ಟಿರ್ಕೆ(ಮುನ್ನಡೆ) ಕಾಂಗ್ರೆಸ್
ಉತ್ತರಪ್ರದೇಶ ಲೋಕಸಭೆ ರಾಮ್ ಪುರ್ ಘನಶ್ಯಾಮ್ ಸಿಂಗ್ ಲೋಧಿ ಬಿಜೆಪಿ
ಆಂಧ್ರಪ್ರದೇಶ ವಿಧಾನಸಭೆ ಆತ್ಮಕೂರ್ ಮೆಕಾಪಟಿ ವಿಕ್ರಮ್ ರೆಡ್ಡಿ ವೈಎಸ್ಸಾರ್ ಪಿ
ದೆಹಲಿ ವಿಧಾನಸಭೆ ರಾಜೀಂದರ್ ನಗರ್ ದುರ್ಗೇಶ್ ಪಾಠಕ್ ಎಎಪಿ
ಪಂಜಾಬ್ ಲೋಕಸಭೆ ಸಂಗ್ರೂರ್ ಸಿಮ್ರಾನ್ ಜೀತ್ ಸಿಂಗ್ ಮಾನ್ ಶಿರೋಮಣಿ ಅಕಾಲಿದಳ
ತ್ರಿಪುರ ವಿಧಾನಸಭೆ ಅಗರ್ತಲಾ ಸುದೀಪ್ ರಾಯ್ ಬರ್ಮನ್ ಕಾಂಗ್ರೆಸ್
ತ್ರಿಪುರ ವಿಧಾನಸಭೆ ಜಬರಾಜನಗರ್ ಮೈನಾ ದೆಬ್ ನಾಥ್ ಬಿಜೆಪಿ
ತ್ರಿಪುರ ವಿಧಾನಸಭೆ ಸುರ್ಮಾ ಸ್ವಪ್ನಾ ದಾಸ್ ಬಿಜೆಪಿ
ತ್ರಿಪುರ ವಿಧಾನಸಭೆ ಟೌನ್ ಬೋರ್ಡೊವಾಲಿ ಮಾಣಿಕ್ ಸಹಾ ಬಿಜೆಪಿ
English summary
The three Lok Sabha seats that where by-polls were necessitated were Uttar Pradesh’s Rampur and Azamgarh, and Punjab’s Sangrur. Meanwhile, the seven assembly seats were spread across the nation — Rajinder Nagar in Delhi, Mandar in Jharkhand, Atmakur in Andhra Pradesh and Agartala, Town Bordowali, Surma and Jabarajnagar in Tripura
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X