ಪಾಕ್ ರಾಷ್ಟ್ರಗೀತೆ ಹಾಡಲಾಗಿದ್ದ ಮೈದಾನದ ಮೇಲೆ ಎಬಿವಿಪಿ ದಾಳಿ

ಶ್ರೀನಗರ, ಏಪ್ರಿಲ್ 8: ಇಲ್ಲಿನ ಜಮ್ಮು ವಿಶ್ವವಿದ್ಯಾಲಯದ ಮೈದಾನದಲ್ಲಿ ಶನಿವಾರ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿಯ ಮೇಲೆ ಶನಿವಾರ (ಏಪ್ರಿಲ್ 8) ದಾಳಿ ನಡೆಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಪಂದ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಡಿಸಿದಾಗ, ಜಮ್ಮು ವಿವಿ ತಂಡದ ಆಟಗಾರರು ರಾಷ್ಟ್ರಗೀತೆಗೆ ಗೌರವ ಸೂಚಿಸಿಲ್ಲ ಎಂದು ಎಬಿವಿಪಿ ಸದಸ್ಯರು ಗಲಾಟೆ ನಡೆಸಿದರು. ಜಮ್ಮು ವಿವಿ ವಿದ್ಯಾರ್ಥಿಗಳನ್ನು ಪುನಃ ಸಾಲಾಗಿ ನಿಲ್ಲಿಸಿದ ಅವರು, ಮತ್ತೊಮ್ಮೆ ರಾಷ್ಟ್ರಗೀತೆ ಹಾಡಿಸಿದರು. ಆನಂತರವಷ್ಟೇ ಅವರನ್ನು ಆಡಲು ಅನುವು ಮಾಡಿಕೊಟ್ಟರು.[ಕಾಶ್ಮೀರದಲ್ಲಿ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಪಾಕ್ ರಾಷ್ಟ್ರಗೀತೆ]

BVP stormed a playground in the Jammu for students not giving respect to National Anthem

ಜಮ್ಮು ಕಾಶ್ಮೀರದಲ್ಲಿ ಹೀಗೆ ರಾಷ್ಟ್ರಗೀತೆಗೆ ಅಪಮಾನವಾಗುವ ಘಟನೆಗಳು ಇದೇ ಮೊದಲೇನಲ್ಲ. ಕೇವಲ ಒಂದು ದಿನದ ಹಿಂದೆ ಕ್ರಿಕೆಟ್ ಪಂದ್ಯವೊಂದು ಆರಂಭವಾಗುವ ಮುನ್ನ ಒಂದು ತಂಡ ಆಟಗಾರರು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿಗಳನ್ನು ಹೋಲುವ ಜೆರ್ಸಿಗಳನ್ನು ಧರಿಸಿಕೊಂಡು ಪಾಕಿಸ್ತಾನ ರಾಷ್ಟ್ರಗೀತೆ ಹಾಡಿದ್ದರು. ಆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂಥ ಹಲವಾರು ಘಟನೆಗಳು ರಾಜ್ಯದಲ್ಲಿ ಆಗಾಗ ನಡೆಯುತ್ತಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+