ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಉದ್ಯಮಿ ಅಮಿತ್ ಅರೋರಾ ಬಂಧನ

|
Google Oneindia Kannada News

ನವದೆಹಲಿ, ನವೆಂಬರ್‌ 30: ಬುಧವಾರ ವಿವಾದಿತ ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಡ್ಡಿ ರಿಟೇಲ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಅಮಿತ್ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿಕಟವರ್ತಿ ಅಮಿತ್ ಅರೋರಾ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಅರೋರಾ ಗುರುಗ್ರಾಮ್ ಮೂಲದ ಬಡ್ಡಿ ರಿಟೇಲ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.

ಅಕ್ರಮ ಹಣ ವರ್ಗಾವಣೆ ತನಿಖೆ ವಿರುದ್ಧ ಡಿಕೆಶಿ ಸಲ್ಲಿಸಿರುವ ಮನವಿಗೆ ಇಡಿ ವಿರೋಧಅಕ್ರಮ ಹಣ ವರ್ಗಾವಣೆ ತನಿಖೆ ವಿರುದ್ಧ ಡಿಕೆಶಿ ಸಲ್ಲಿಸಿರುವ ಮನವಿಗೆ ಇಡಿ ವಿರೋಧ

ದೆಹಲಿ ಅಬಕಾರಿ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇದುವರೆಗೆ ಒಟ್ಟು ಐವರನ್ನು ಇಡಿ ಬಂಧಿಸಲಾಗಿದೆ. ಮದ್ಯದ ಉದ್ಯಮಿ ಸಮೀರ್ ಮಹಂದ್ರು ಅವರನ್ನು ಸೆಪ್ಟೆಂಬರ್ 27ರಂದು ಇಡಿ ವಿಚಾರಣೆಯ ನಂತರ ಬಂಧಿಸಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರ ಶಿಫಾರಸಿನ ಮೇರೆಗೆ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಹಣಕಾಸು ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ 169 ಶೋಧ ಕಾರ್ಯಾಚರಣೆಗಳನ್ನು ಕೈಗೊಂಡಿದೆ.

Businessman Amit Arora arrested in Delhi liquor policy case

ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆ ಅವರು ಸಿಸೋಡಿಯಾ ಅವರ ಆಪ್ತ ಸಹಚರರಾಗಿದ್ದಾರೆ. ಆರೋಪಿಗಳು ಮನೀಶ್‌ ಸಿಸೋಡಿಯಾಗೆ ಮದ್ಯ ಪರವಾನಗಿದಾರರಿಂದ ಸಂಗ್ರಹಿಸಿದ ಹಣದ ಲಾಭವನ್ನು ನಿರ್ವಹಿಸುವಲ್ಲಿ ಮತ್ತು ವಸೂಲಿ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಿಬಿಐ ಈ ಹಿಂದೆ ಆರೋಪಿಸಿತ್ತು.

ಏತನ್ಮಧ್ಯೆ, ಸಿಬಿಐ ಎಫ್‌ಐಆರ್‌ನಲ್ಲಿ ಸಚಿವ ಮನೀಶ್ ಸಿಸೋಡಿಯಾ ಅವರ ಹೆಸರು ಇದ್ದು, ತನಿಖೆಯನ್ನು ಕೈಗೆತ್ತಿಕೊಂಡ 60 ದಿನಗಳಲ್ಲಿ ಸಲ್ಲಿಸಲಾದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಇವರೆಲ್ಲರೂ ಮದ್ಯ ಪರವಾನಗಿದಾರರೊಂದಿಗೆ ಪಿತೂರಿ, ಹಣದ ವಹಿವಾಟು, ಕಾರ್ಟೆಲೈಸೇಶನ್ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಿವಾದಾತ್ಮಕ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ದೊಡ್ಡ ಕಾರ್ಯತಂತ್ರಕ್ಕೆ ಸಂಬಂಧಿಸಿದ ತನಿಖೆಯನ್ನು ಸಂಸ್ಥೆ ತೆರೆದಿಟ್ಟಿದೆ.

Businessman Amit Arora arrested in Delhi liquor policy case

ಎಎಪಿ ಸಚಿವ ಮನೀಶ್‌ ಸಿಸೋಡಿಯಾ ಮತ್ತು ಇತರ ಆರೋಪಿಗಳು ದೆಹಲಿ ಅಬಕಾರಿ ನೀತಿ 2021-22 ಕ್ಕೆ ಸಂಬಂಧಿಸಿದಂತೆ ಟೆಂಡರ್ ನಂತರ ಪರವಾನಗಿದಾರರಿಗೆ ಅನೇಖ ಅನುಕೂಲಗಳನ್ನು ಮಾಡುವ ಉದ್ದೇಶದಿಂದ ಪ್ರಾಧಿಕಾರದ ಅನುಮೋದನೆಯಿಲ್ಲದೆ ಶಿಫಾರಸು ಮಾಡಿದ್ದಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

English summary
On Wednesday, the Enforcement Directorate arrested Buddy Retail Pvt Ltd director Amit Arora in connection with the controversial Delhi Liquor Policy scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X