ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂದಲು ಕೊಡಿ ಮಿಠಾಯಿ ತಗೋಳಿ: ಹತ್ತಿ ಮಿಠಾಯಿಗೂ ಬಂತು ಬಿಸಿನೆಸ್ ಟ್ರಿಕ್!

|
Google Oneindia Kannada News

ಮನ ಪರಿವರ್ತನೆಯಿಂದ ಯಾವುದೇ ವ್ಯವಹಾರಕ್ಕೆ ನಿರೀಕ್ಷಿತ ಆದಾಯ ಬರಬಹುದು ಎಂಬುದನ್ನು ಹತ್ತಿ ಮಿಠಾಯಿ ವ್ಯಾಪಾರಿಯೊಬ್ಬರು ಸಾಬೀತು ಮಾಡಿದ್ದಾರೆ. ವೃತ್ತಿಜೀವನದಲ್ಲಿ ಮುಂಬರಲು ಒಬ್ಬ ವ್ಯಕ್ತಿ ಯಾವುದೇ ಮಾರ್ಗವನ್ನು ಅನುಸರಿಸಿದರೂ ತಮ್ಮದೇ ಆದ ಮಾರ್ಗವನ್ನು ಯಾರು ಸ್ಥಾಪಿಸಿದವವರು ಮಾತ್ರ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ. ಹೆಸರು ಹೇಳಲಿಚ್ಛಿಸದ ಈ ಹತ್ತಿ ಕ್ಯಾಂಡಿ ವ್ಯಾಪಾರಿ ಪ್ರತಾಪ್ ಸಿಂಹ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ಕೂದಲಿಗೆ ಹತ್ತಿ ಕ್ಯಾಂಡಿಯನ್ನು ನೀಡುವ ವಿಭಿನ್ನ ವಿಧಾನದ ವ್ಯವಹಾರದಿಂದಾಗಿ ಅವರು ಇಂದು ಅಂತರ್ಜಾಲದಲ್ಲಿ ಜನಪ್ರಿಯರಾಗಿದ್ದಾರೆ.

ಯೂಟ್ಯೂಬ್ ಬಳಕೆದಾರರಾದ ಫುಡ್ಡಿ ವಿಶಾಲ್ ಅವರು ಈ ಹತ್ತಿ ವಿಠಾಯಿ ವ್ಯಾಪಾರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದಾದ ಬಳಿಕ ಈ ವ್ಯಾಪಾರಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಯೂಟ್ಯೂಬರ್ ವಿಶಾಲ್ ಅನೇಕ ಸ್ಥಳಗಳಿಗೆ ಹೋಗಿ ಅಲ್ಲಿ ಮಾರಾಟವಾಗುವ ವಿವಿಧ ಆಹಾರಗಳ ಬಗ್ಗೆ ವಿಡಿಯೊವನ್ನು ಪ್ರಕಟಿಸುತ್ತಾರೆ. ಇತ್ತೀಚೆಗಷ್ಟೇ ಈ ಮುದುಕ ರಸ್ತೆಯಲ್ಲಿ ಹತ್ತಿ ಕ್ಯಾಂಡಿ ಮಾರುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಕೂದಲು ಕೊಡುವಷ್ಟು ಹತ್ತಿ ಮಿಠಾಯಿ

ಕೂದಲು ಕೊಡುವಷ್ಟು ಹತ್ತಿ ಮಿಠಾಯಿ

ಅದರಲ್ಲಿ ಪ್ರತಾಪ್ ಸಿಂಹ ಎಂಬ ಮುದುಕ ಸೈಕಲ್ ಹಿಂಬದಿಯಲ್ಲಿ ಚಿಕ್ಕ ಹತ್ತಿ ಮಿಠಾಯಿ ತಯಾರಿಸುವ ಯಂತ್ರವನ್ನು ಹಿಡಿದುಕೊಂಡು ಬೀದಿಯಲ್ಲಿ ಹತ್ತಿ ಕ್ಯಾಂಡಿ ಮಾರುತ್ತಾನೆ. ಆದರೆ ಈತ ಹತ್ತಿ ಮಿಠಾಯಿ ಕೊಳ್ಳುವ ಹುಡುಗರಿಂದ ಹಣವನ್ನು ಪಡೆಯುವುದಿಲ್ಲ. ಬದಲಿಗೆ ತಮ್ಮ ಮನೆಯಲ್ಲಿ ಕಸದ ಬುಟ್ಟಿಗೆ ಎಸೆಯುವ ಕೂದಲನ್ನು ಪಡೆಯುತ್ತಾನೆ.

ಈ ಮುದುಕ ಕೂದಲು ಕೊಡುವಷ್ಟು ಹತ್ತಿಯ ಮಿಠಾಯಿ ಕೊಡುತ್ತಾನೆ. ಹೀಗಾಗಿ ಆತನಿಂದ ಹತ್ತಿ ಮಿಠಾಯಿ ಕೊಳ್ಳಲು ಹುಡುಗ-ಹುಡುಗಿಯರು ಮನೆಯಲ್ಲಿ ಅಮ್ಮ, ಅಜ್ಜಿ, ಚಿಕ್ಕಮ್ಮ, ಚಿಕ್ಕಮ್ಮ ಹೀಗೆ ಹಲವರಿಂದ ಬಿದ್ದ ಕೂದಲನ್ನು ಸಂಗ್ರಹಿಸುತ್ತಾರೆ. ಮುದುಕ ತಮ್ಮ ಬೈಸಿಕಲ್‌ನಲ್ಲಿ ಕೆಲವು ಚೀಲಗಳನ್ನು ನೇತುಹಾಕಿಕೊಂಡು ಕೂದಲನ್ನು ಸಂಗ್ರಹಿಸಿ ಹತ್ತಿ ಮಿಠಾಯಿಯನ್ನು ನೀಡುತ್ತಾನೆ.

ವಿಗ್ ತಯಾರಿಸಲು ಕೂದಲು ಮಾರಾಟ

ವಿಗ್ ತಯಾರಿಸಲು ಕೂದಲು ಮಾರಾಟ

ಹಣಕ್ಕಾಗಿ ಪ್ರತಿಯಾಗಿ ಈ ರೀತಿಯ ಕೂದಲನ್ನು ಸಂಗ್ರಹಿಸುವ ಮೂಲಕ ಅವನು ಆದಾಯವನ್ನು ಮಾಡುತ್ತಾನೆ. ಇಲ್ಲಿಯೇ ಈ ಮುದುಕನ ಕೌಶಲ್ಯವನ್ನು ಮೆಚ್ಚಲಾಗಿದೆ. ತಾನು ಮಾರುವ ಹತ್ತಿಯ ಮಿಠಾಯಿಗೆ ಹುಡುಗರಿಂದ ಹಣ ಕೊಂಡರೂ ಸಿಗದ ಆದಾಯವನ್ನು ಆ ಕೂದಲಿನ ಗೊಂಚಲುಗಳ ಮೂಲಕ ಗಳಿಸುತ್ತಾನೆ ಎಂದು ಹೇಳುತ್ತಾನೆ.

ಈ ಕೂದಲನ್ನು ಸಂಗ್ರಹಿಸಿ ಈತ ವಿಗ್ ತಯಾರಿಸಲು ಮಾರಾಟ ಮಾಡುತ್ತಾನೆ. ಇದರಿಂದ ಸುಮಾರು 3 ಸಾವಿರಕ್ಕೆ ಒಂದು ಚೀಲ ಕೂದಲನ್ನು ಮಾರಾಟ ಮಾಡುತ್ತಾನೆ. ಇದರಿಂದ ಈತನಿಗೆ ಏನಿಲ್ಲಾ ಅಂದರೂ ಎರಡು ಸಾವಿರ ರೂಪಾಯಿವರೆಗೂ ಲಾಭವಾಗುತ್ತದೆ. ಲಾಭದ ಕಾರಣಕ್ಕೆ ಇಂತಹ ವಿಭಿನ್ನ ಪ್ರಯತ್ನ ಮಾಡಿಡುತ್ತಿರುವುದಾಗಿ ಮದುಕ ಹೇಳಿಕೊಂಡಿದ್ದಾರೆ. ಇನ್ನೂ ಹತ್ತಿ ವಿಠಾಯಿಯನ್ನು ತೆಗೆದುಕೊಳ್ಳಲು ತಮ್ಮ ಮನೆಯಲ್ಲಿ ಇರುವ ಕೂದಲನ್ನು ಸಂಗ್ರಹಿಸಿ ವಿಠಾಯಿ ಪಡೆಯುತ್ತಾರೆ.

ದುಡಿಮೆಯ ಹೊಸ ಮಾರ್ಗ

ದುಡಿಮೆಯ ಹೊಸ ಮಾರ್ಗ

ಹೀಗೇ ಕಳೆದ ನಾಲ್ಕೈದು ವರ್ಷಗಳಿಂದ ಹತ್ತಿ ಮಿಠಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಹತ್ತಿ ಮಿಠಾಯಿ ಮಾರಾಟ ಮಾಡಿ ಲಾಭ ಗಳಿಸಬಹುದೇ ಎಂದುಕೊಂಡವರ ನಡುವೆ ಈ ಮುದುಕ ತನ್ನ ವಿಭಿನ್ನ ಚಿಂತನೆಯಿಂದ ಇಂದು ಹಲವು ಹೊಸ ವ್ಯಾಪಾರ ತಂತ್ರಗಳನ್ನು ಹೇಳಿಕೊಟ್ಟಿದ್ದಾನೆ. ಜೀವನದಲ್ಲಿ ದುಡಿಮೆಯ ಹೊಸ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಹೊಸ ಸ್ಪೂರ್ತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಈ ಮುದುಕನ ವಿಡಿಯೋ ನೋಡಿದವರು ಬೆರಗಾಗಿದ್ದಾರೆ. ಅವರ ವ್ಯವಹಾರ ಕೌಶಲ್ಯವನ್ನು ಹೊಗಳುತ್ತಿದ್ದಾರೆ. ಈ ವಿಠಾಯಿವಾಲಾ ಇಂದು ಒಂದೇ ಒಂದು ವಿಡಿಯೋ ಮೂಲಕ ಇಂಟರ್ನೆಟ್ ಲೋಕದಲ್ಲಿ ಫೇಮಸ್ ಆಗಿದ್ದಾರೆ. ನೀವು ನಿಮ್ಮ ಮನಸ್ಸನ್ನು ಬದಲಾಯಿಸಿದರೆ ನೀವು ಹೇಗೆ ಯಶಸ್ವಿಯಾಗುತ್ತೀರಿ ಎಂಬುದಕ್ಕೆ ಈ ವ್ಯಾಪಾರಿಯೇ ಅತ್ಯುತ್ತಮ ಉದಾಹರಣೆ.

English summary
A cotton confectioner has proven that any business can generate the expected revenue from a change of mind. Whatever path a person pursues in a career, only those who have established their own path have proven to be successful.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X