Viral Video : ಮಾಲೀಕರಿದ್ದರೆ ಹೀಗಿರಬೇಕು! ಎಮ್ಮೆಗಳಿಗೂ ಸೊಳ್ಳೆ ಪರದೆ; ಪ್ರಾಣಿ ಪ್ರೇಮಕ್ಕೆ ಭೇಷ್ ಎಂದ ನೆಟ್ಟಿಗರು
Buffalo Viral Video : ಮನೆಯಲ್ಲಿ ನಾಯಿ ಬೆಕ್ಕು ಹಸು ಯಾವುದನ್ನೇ ಸಾಕಿದರೂ ಅದರೊಂದಿಗೆ ವಿಶೇಷ ಸಂಬಂಧ ಬೆಳೆದು ಬಿಡುತ್ತದೆ. ನಾಯಿ ಬೆಕ್ಕನ್ನು ಮನೆಯೊಳಗೆ ಸಾಕುವವರು ಇದ್ದಾರೆ. ಅದಕ್ಕಂತಾನೇ ಹಾಸಿಗೆ ಊಟದ ತಟ್ಟೆ ಎಲ್ಲವನ್ನೂ ಇಟ್ಟು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಸಮಯ ಸಮಯಕ್ಕೆ ಊಟ ತಿಂಡಿ ಕೊಡುವುದು, ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದು ಎಲ್ಲವನ್ನೂ ಮಾಡುತ್ತಾರೆ. ಇನ್ನು ಹಸು ಸಾಕುವವರು ಅದನ್ನು ಜಾನುವಾರು ಅನ್ನುವುದಕ್ಕಿಂತ ದೇವರ ರೀತಿ ನೋಡಿಕೊಳ್ಳುತ್ತಾರೆ. ಕರಾವಳಿ ಜಿಲ್ಲೆಯಲ್ಲಿ ನಡೆಯವ ಕಂಬಳದ ಕೋಣಗಳನ್ನು ಸಾಕುವ ರೀತಿಗೆ ಎಂತವರೂ ದಂಗಾಗಿ ಬಿಡಬೇಕು. ಅದಕ್ಕಾಗಿ ವಿಶೇಷ ಮಸಾಜ್ ಮಾಡುವುದು. ಅವುಗಳ ಈಜಾಟಕ್ಕೆ ಸ್ವಿಮಿಂಗ್ ಪೂಲ್, ಬಿಸಿಲ ಧಗೆ ಕಡಿಮೆಯಾಗಲಿ ಎನ್ನುವ ಕಾರಣಕ್ಕೆ ಕೊಟ್ಟಿಗೆ ತುಂಬಾ ಫ್ಯಾನ್ ಹಾಕಿರುತ್ತಾರೆ.

ವೈರಲ್ ಆಗುತ್ತಿದೆ Buffalo Viral Video
ಇದೀಗ ಎಮ್ಮೆಗಳ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ (social media)ಹರಿದಾಡ್ತಾ ಇದೆ. ಎಮ್ಮೆಗಳನ್ನ ಯಾವ ರೀತಿಯಲ್ಲಿ ನೊಡಿಕೊಳ್ಳಲಾಗುತ್ತಿದೆ ಎನ್ನುವುದು ಈ ವಿಡಿಯೋದಲ್ಲಿ ಸಾಬೀತಾಗುತ್ತದೆ. ಇಲ್ಲೊಂದು ಮನೆಯ ಮುಂದೆ ಸಾಲು ಸಾಲಾಗಿ ಎಮ್ಮೆಗಳು ಮಲಗಿವೆ. ವಿಶೇಷ ಇರುವುದು ಎಮ್ಮೆಗಳಲ್ಲಿ ಅಲ್ಲ. ಎಮ್ಮೆಗಳ ಬಗ್ಗೆ ತೋರಿರುವ ಕಾಳಜಿ ಬಗ್ಗೆ. ಮಳೆಗಾಲ, ಚಳಿಗಾಲದಲ್ಲಿ ಸೊಳ್ಳೆ ಕಾಟ ವಿಪರೀತವಾಗಿ ಇರುತ್ತದೆ. ಸಂಜೆ ಮೇಲೆ ಮನೆ ಹೊರಗೆ ಇರುವುದು ಸಾಧ್ಯವೇ ಇಲ್ಲ. ಅಪ್ಪಿ ತಪ್ಪಿ ಮನೆ ಹೊರಗೆ ಇದ್ದರಂತೂ ಸೊಳ್ಳೆ ಕಚ್ಚಲು ಶುರು ಮಾಡುತ್ತದೆ. ಸೊಳ್ಳೆ ಕಚ್ಚಿದರೆ ತುರಿಕೆ, ಉರಿ ಕಾಡುತ್ತದೆ. ಕೆಲವೊಮ್ಮೆ ಚರ್ಮ ಕೆಂಪಾಗಿ ಬಿಡುತ್ತದೆ. ಮನುಷ್ಯರು ಸೊಳ್ಳೆ ಬತ್ತಿ, ಕಾಯಿಲ್ ಹಾಕಿ ಇದರಿಂದ ಸ್ವಲ್ಪ ಪರಿಹಾರ ಕಂಡುಕೊಳ್ಳಬಹುದು. ಬಾಯಿ ಬಾರದ ಎಮ್ಮೆ ಏನು ಮಾಡಬೇಕು?
ಎಮ್ಮೆಗಳಿಗೂ ಸೊಳ್ಳೆ ಪರದೆ ಸೇಫ್ಟಿ :
ಹಾಗಾಗಿ ಇಲ್ಲಿ ಈ ಎಮ್ಮೆಗಳನ್ನು ಸಾಕುವವರು ಎಮ್ಮೆಗಳ ಆರೋಗ್ಯದ ( health) ಬಗ್ಗೆಯೂ ವಿಪರೀತ ಕಾಳಜಿ ವಹಿಸುವುದನ್ನು ನೋಡಬಹುದು. ಇವರು ತಮ್ಮ ಎಮ್ಮೆಗಳಿಗೆ ಸೊಳ್ಳೆ ಕಡಿಯದಂತೆ ಎಲ್ಲಾ ಎಮ್ಮೆಗಳಿಗೆ ಸೊಳ್ಳೆ ಪರದೆಗಳನ್ನು ಹಾಕಿದ್ದಾರೆ. ಅಂಗಳದಲ್ಲಿ ಸೊಳ್ಳೆ ಪರದೆ ಕಟ್ಟಿದ್ದು, ಅದರೊಳಗೆ ಎಮ್ಮೆಗಳನ್ನು ಇರಿಸಲಾಗಿದೆ. ಇನ್ನು ಎಮ್ಮೆಗಳು ಎದ್ದು ನಿಂತರೂ ಅವುಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಬಿದಿರು, ಕಂಬಗಳ ಸಹಾಯದಿಂದ ಸೊಳ್ಳೆ ಪರದೆಯನ್ನು ಮೇಲಕ್ಕೆ ಕಟ್ಟಿದ್ದಾರೆ. ಇದರಿಂದಾಗಿ ಎಮ್ಮೆಗಳು ಪರದೆ ಒಳಗೆ ಆರಾಮವಾಗಿ ನಿಲ್ಲಬಹುದು, ಮಲಗಲೂಬಹುದು. ಈ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾತ್ರಿ ವೇಳೆ ರೆಕಾರ್ಡ್ ಆದ ವಿಡಿಯೋ :
ಈ ವಿಡಿಯೋವನ್ನು ರಾತ್ರಿ ವೇಳೆ ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ, ಎಮ್ಮೆಗಳು ಎರಡು-ಮೂರು ಸ್ಥಳಗಳಲ್ಲಿ ಸೊಳ್ಳೆ ಪರದೆಯೊಳಗೆ ಆರಾಮಾಗಿ ಕುಳಿತಿರುವುದನ್ನು ನೋಡಬಹುದು. ಸೊಳ್ಳೆಗಳಿಂದ ಜಾನುವಾರುಗಳನ್ನು ರಕ್ಷಿಸಲು ದುಬಾರಿ ಉಪಕರಣಗಳೇ ಬೇಕು ಎಂದೇನಿಲ್ಲ. ಸರಿಯಾದ ರೀತಿಯಲ್ಲಿ ಯೋಚಿಸಿದರೆ ಒಂದು ಸಣ್ಣ ವ್ಯವಸ್ಥೆಯೂ ಸಹಾಯವಾಗಬಹುದು.
ಹರಿದು ಬರುತ್ತಿದೆ ಕಾಮೆಂಟ್ :
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂ ಎಕ್ಸ್ ನಲ್ಲಿ @ChapraZila ಎಂಬ ಅಕೌಂಟಿನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗ್ತಾ ಇದ್ದ ಹಾಗೆ ಜನರು ಬೇರೆ ಬೇರೆ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ವ್ಯಕ್ತಿಯ ಆಲೋಚನೆಯನ್ನು ಜನ ಹೊಗಳುತ್ತಿದ್ದಾರೆ. ತುಂಬಾ ಜನ ಇದನ್ನು ಕಡಿಮೆ ವೆಚ್ಚದಲ್ಲಿ ಮಾಡುವ ಉತ್ತಮ ದೇಸಿ ಜುಗಾಡ್ ಎಂದು ಕರೆಯುತ್ತಿದ್ದಾರೆ.
भैंस को मच्छरों से प्रकोप से बचाने के लिए यह व्यवस्था बहुत बढ़िया है। https://t.co/M4huWRR6kC
— छपरा जिला 🇮🇳 (@ChapraZila) October 18, 2026


Click it and Unblock the Notifications
