New Income tax bill: ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ- ಆತಂಕ, ಕುತೂಹಲ ಹೆಚ್ಚಿಸಿದ ನಿರ್ಮಲಾ ಮೇಡಂ ನಡೆ

ಬೆಂಗಳೂರು, ಫೆಬ್ರವರಿ 01: 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಕುರಿತು ಹೊಸ ಘೋಷಣೆ ಮಾಡಿದರು. ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಸಂಸತ್‌ನಲ್ಲಿ ಮಂಡನೆ ಮಾಡಲಾಗುತ್ತದೆ ಎಂದರು.

ಶನಿವಾರ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಿಳಿಸಿದ್ದಾರೆ. ಹೊಸ ಮಸೂದೆಯಡಿಯಲ್ಲಿ ಪರೋಕ್ಷ ತೆರಿಗೆಗಳ ಕುರಿತು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಹೊಸ ಆದಾಯ ತೆರಿಗೆ ಮಸೂದೆಯನ್ನು ನೇರ ತೆರಿಗೆ ಸಂಹಿತೆಯ ಮಾದರಿಯಲ್ಲಿ ರೂಪಿಸುವ ನಿರೀಕ್ಷೆಯಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

Budget 2025 Nirmala Sitharaman Announced New Income Tax Bill

ತೆರಿಗೆಗಳನ್ನು ಲೆಕ್ಕಹಾಕುವ ಮತ್ತು ರಿಟರ್ನ್‌ಗಳನ್ನು ಸಲ್ಲಿಸುವ ಮಾದರಿಗಳನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಹೊಸ ಮಸೂದೆಯು ಸಹಾಯ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ಜುಲೈನಲ್ಲಿ ನಿರ್ಮಲಾ ಸೀತಾರಾಮನ್ ಅವರು ಪೂರ್ಣ ಬಜೆಟ್ ಅನ್ನು ಮಂಡಿಸಿದಾಗ ಹೊಸ ನೇರ ತೆರಿಗೆ ಸಂಹಿತೆಯ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರಸ್ತುತ ಆದಾಯ ತೆರಿಗೆ ಕಾನೂನುಗಳನ್ನು ಅರ್ಥಮಾಡಿಕೊಳ್ಳುವ ವಿಧಾನಗಳನ್ನು ಸುಲಭವಾಗಿಸಲು ಹೊಸ ತೆರಿಗೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಅವರು ಹೇಳಿದ್ದರು.

ನಿರ್ಮಲಾ ಸೀತಾರಾಮನ್‌ ಬಜೆಟ್ ಭಾಷಣದಲ್ಲಿ ಹೊಸ ಆದಾಯ ತೆರಿಗೆ ಮಸೂದೆ ಪರಿಚಯಿಸಲಾಗುವುದು ಎಂದು ಹೇಳಿದ್ದಾರೆ. ಈ ಹೊಸ ಮಸೂದೆ ಸ್ಪಷ್ಟ ಮತ್ತು ನೇರವಾಗಿದ್ದು, ಪ್ರಸ್ತುತ ಇರುವ ಕಾನೂನಿನ ಅರ್ಧಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಿದ್ದಾರೆ. ಇದು ಅರ್ಥಮಾಡಿಕೊಳ್ಳಲು ಸುಲಭವಾಗಿದ್ದು, ತೆರಿಗೆ ಖಚಿತತೆ ಮತ್ತು ತಕರಾರು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಪ್ರಕಾರ ಹೊಸ ಮಸೂದೆ ತೆರಿಗೆಗಳನ್ನು ಲೆಕ್ಕಹಾಕುವುದು ಮತ್ತು ರಿಟರ್ನ್‌ಗಳನ್ನು ಸಲ್ಲಿಸುವುದು ಸುಲಭವಾಗುವಂತೆ ಮಾಡುತ್ತದೆ ಮತ್ತು ಹಣಕಾಸು ವರ್ಷ ಮತ್ತು ಲೆಕ್ಕಪತ್ರ ವರ್ಷ ಎಂಬ ಪರಿಕಲ್ಪನೆಯನ್ನು ತೆಗೆದು ಹಾಕುತ್ತದೆ.

ಈ ಹೊಸ ಮಸೂದೆ ಕುರಿತ ಚರ್ಚೆ 2024ರ ಜುಲೈನಲ್ಲಿ ನಿರ್ಮಲಾ ಸೀತಾರಾಮನ್ 2024-25ರ ಪೂರ್ಣ ಬಜೆಟ್ ಅನ್ನು ಮಂಡಿಸಿದಾಗ ಪ್ರಾರಂಭವಾಗಿತ್ತು. ಆಗ ಅವರು ಪ್ರಸ್ತುತ ಆದಾಯ ತೆರಿಗೆ ಕಾನೂನುಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಸರಳಗೊಳಿಸುವುದು ಮತ್ತು 1961ರ ಐಟಿ ಕಾಯ್ದೆಯ ಸಂಪುಟ ಸಂಖ್ಯೆಯನ್ನು 60 ಶೇಕಡಾ ಕಡಿಮೆ ಮಾಡುವ ಗುರಿ ಎಂದು ಹೇಳಿದ್ದರು.

1961ರ ಕಾಯ್ದೆ ನೇರ ತೆರಿಗೆಗಳ ಹೇರಿಕೆ ಅಂದರೆ ವೈಯಕ್ತಿಕ ಮತ್ತು ಸಂಸ್ಥೆಗಳ ತೆರಿಗೆ ಹಾಗೂ ಭದ್ರತಾ ವ್ಯವಹಾರಗಳು, ಉಡುಗೊರೆಗಳು ಮತ್ತು ಸಂಪತ್ತುಗಳ ಮೇಲೆ ಇರುವ ತೆರಿಗೆಗಳನ್ನು ಹೊಂದಿದೆ.

ಹೊಸ ನೀತಿಯಲ್ಲಿ ಅತಿದೊಡ್ಡ ಬದಲಾವಣೆ ಎಂದರೆ 1961 ಕಾನೂನಿನ ಅಡಿಯಲ್ಲಿ ತೆರಿಗೆ ಆಡಿಟ್‌ಗಳನ್ನು ಮಾತ್ರ ಚಾರ್ಟರ್ಡ್ ಅಕೌಂಟೆಂಟ್‌ಗಳು ಮಾಡಬಹುದಾಗಿತ್ತು, ಆದರೆ ಈಗ ಡಿಟಿಸಿ ಕಂಪನಿ ಕಾರ್ಯದರ್ಶಿಗಳು ಮತ್ತು ವೆಚ್ಚ ನಿರ್ವಹಣಾ ಅಕೌಂಟೆಂಟ್‌ಗಳಿಗೆ ಈ ಕೆಲಸವನ್ನು ನಿರ್ವಹಿಸಲು ಅವಕಾಶ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+