Budget 2025: ಬಜೆಟ್‌ನಲ್ಲಿ ಐದು ವಿಚಾರಗಳಿಗೆ ಹೆಚ್ಚು ಒತ್ತು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ 2025-26ರ ಹಣಕಾಸು ವರ್ಷದ ಸತತ ಎಂಟನೇ ಬಜೆಟ್ ಮಂಡಿಸಲು ಶುರು ಮಾಡಿದ್ದಾರೆ. ಇತ್ತ ವಿರೋಧ ಪಕ್ಷದವರು ಗದ್ದಲ ಸೃಷ್ಟಿಸಿದ್ದಾರೆ. ಕುಂಭ ಮೇಳದಲ್ಲಿ ಸಂಭವಿಸಿದ ಸಾವುಗಳ ಕುರಿತು ಚರ್ಚೆಯಾಗಬೇಕೆಂದು ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗುತ್ತಿವೆ. ಈ ಗದ್ದಲದ ನಡುವೆಯೇ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲು ಮಂದಾಗಿದ್ದಾರೆ. ಬಜೆಟ್‌ನಲ್ಲಿ ಐದು ವಿಚಾರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 8ನೇ ಬಾರಿಗೆ ಬಜೆಟ್ ಮಂಡನೆ ಶುರು ಮಾಡಿದ್ದಾರೆ. ಬಜೆಟ್‌ನಲ್ಲಿ ಬಡತನ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಧ್ಯಮವರ್ಗ ಹಾಗೂ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ರೈತರಿಗೆ ನೆರವು ನೀಡಲಾಗುವುದು. ರೈತರು, ಮೀನುಗಾರರಿಗೆ ಸರ್ಕಾರದ ವಿಶೇಷ ನಿಗಾ ವಹಿಸಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಐದು ವಿಚಾರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅವುಗಳೆಂದರೆ- 1.ಅಭಿವೃದ್ಧಿಗೆ ಹೆಚ್ಚಿನ ಒತ್ತು 2.ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ 3.ಖಾಸಕ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ 4. ಮಧ್ಯಮ ವರ್ಗದ ಅಭಿವೃದ್ಧಿಗೆ ಒತ್ತು 5. ಬಡವರು, ಮಹಿಳೆಯರು ಅಭಿವೃದ್ಧಿಗೆ ಆಧ್ಯತೆ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನಿರ್ಮಲಾ ಸೀತಾರಾಮನ್ ಅವರು ಸತತ ಏಳು ಬಾರಿ ಬಜೆಟ್ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದು ಅವರ ಎಂಟನೆ ಬಜೆಟ್ ಮಂಡನೆಯಾಗಿದೆ. ಅವರು ಇಲ್ಲಿಯವರೆಗೆ ಆರು ಪೂರ್ಣಾವಧಿ ಮತ್ತು ಎರಡು ಮಧ್ಯಂತರ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಸೀತಾರಾಮನ್ ಅವರಿಗಿಂತ ಮೊದಲು, ಗರಿಷ್ಠ ಬಾರಿ ಬಜೆಟ್ ಮಂಡಿಸಿದವರಲ್ಲಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಸೇರಿದ್ದಾರೆ.











Click it and Unblock the Notifications