Budget 2025: ಬಜೆಟ್‌ಗೂ ಮುನ್ನವೇ ಎನ್‌ಡಿಎ ಮಿತ್ರ ಪಕ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಮೋದಿ
ನವದೆಹಲಿ, ಜನವರಿ 30: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1, ಶನಿವಾರದಂದು ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಬಜೆಟ್‌ಗೂ ಮುನ್ನವೇ ಎನ್‌ಡಿಎ ಮಿತ್ರ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.
ಈ ಕುರಿತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮಾಹಿತಿ ನೀಡಿದ್ದು, 2030ರ ವೇಳೆಗೆ ಭಾರತದಲ್ಲಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ, ದೃಢ ಸಂಕಲ್ಪ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರದ್ದಾಗಿದ್ದು, ಪ್ರಧಾನಿಗಳ ಆಶಯದಂತೆ ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (RINL) ಅಥವಾ ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ ₹11,400 ಕೋಟಿಗಳ ಬೃಹತ್ ಪ್ಯಾಕೇಜ್ ಘೋಷಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಕೈಗೊಂಡ ಐತಿಹಾಸಿಕ ನಿರ್ಧಾರವಾಗಿದೆ.

ಪ್ಯಾಕೇಜ್ ಘೋಷಣೆ ನಂತರ ಇಂದು ಬೆಳಗ್ಗೆ ಶ್ರೀ ಬಾಲಾಜಿಯ ದರ್ಶನ ಪಡೆದು ನನ್ನ ಸಹೋದ್ಯೋಗಿ ಹಾಗೂ ಬೃಹತ್ ಕೈಗಾರಿಕೆ & ಉಕ್ಕು ಖಾತೆ ಸಹಾಯಕ ಸಚಿವರಾದ ಭೂಪತಿರಾಜು ಶ್ರೀನಿವಾಸ ವರ್ಮಾ ಅವರೊಂದಿಗೆ ವಿಶಾಖಪಟ್ಟಣಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಬಹುತೇಕ ಖಾಸಗೀಕರಣದ ಹೊಸ್ತಿಲಲ್ಲಿದ್ದ ಇಲ್ಲಿನ ರಾಷ್ಟ್ರೀಯ ಉಕ್ಕು ಕಾರ್ಖಾನೆ (RINL) ಅಥವಾ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರ ಸರ್ಕಾರ ₹11,400 ಕೋಟಿ ಬೃಹತ್ ಪ್ಯಾಕೇಜ್ ಘೋಷಣೆ ಮಾಡಿದ ನಂತರ ಇಲ್ಲಿಗೆ ಆಗಮಿಸಿದ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಜನತೆ ಅದ್ದೂರಿಯಾಗಿ ಸ್ವಾಗತಿಸಿದರು.
ಗುರುವಾರ ಬೆಳಗ್ಗೆಯೇ ತಿರುಮಲದಲ್ಲಿ ಕುಟುಂಬ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿ ಅವರ ದರ್ಶನ ಪಡೆದ ನಂತರ ವಿಶಾಖಪಟ್ಟಣಕ್ಕೆ ಆಗಮಿಸಿದ ಕೇಂದ್ರ ಸಚಿವರನ್ನು ವಿಮಾನ ನಿಲ್ದಾಣದಲ್ಲಿಯೇ ಬಿಜೆಪಿ, ತೆಲುಗು ದೇಶಂ ಪಕ್ಷಗಳ ಸಂಸದರು, ಶಾಸಕರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಉಕ್ಕು ಖಾತೆ ಸಹಾಯಕ ಸಚಿವ ಹಾಗೂ ಆಂಧ್ರದ ನರಸಾಪುರ ಲೋಕಸಭೆ ಕ್ಷೇತ್ರದ ಸಂಸದ ಭೂಪತಿರಾಜು ಶ್ರೀನಿವಾಸ ವರ್ಮ ಅವರು ಜತೆಯಲ್ಲಿ ಇದ್ದರು. ಅಲ್ಲದೆ, ಉಕ್ಕು ಕಾರ್ಖಾನೆಯ ಸಾವಿರಾರು ಕಾರ್ಮಿಕರು ಸಚಿವರನ್ನು ಎದುರುಗೊಂಡು ಸ್ವಾಗತಿಸಿದರಲ್ಲದೆ, ಪುಷ್ಪವೃಷ್ಟಿಗರೆದು ಅಭಿನಂದನೆ ಸಲ್ಲಿಸಿದರು.
ಸಂಸದ ಶ್ರಿಭರತ್, ವಿಶಾಖಪಟ್ಟಣ ಭಾಗದ ಸುಮಾರು ಹತ್ತು ಶಾಸಕರು ಸಚಿವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಬಳಿಕ ವಿಮಾನ ನಿಲ್ದಾಣದಿಂದ ಕಾರ್ಖನೆವರೆಗೂ ಹದಿನಾಲ್ಕು ಕಿ.ಮೀ. ದೂರ ರಸ್ತೆಯುದ್ದಕ್ಕೂ ಜನರು ಕೇಂದ್ರ ಸಚಿವರಿಗೆ ಸ್ವಾಗತ ಕೋರಿದರು. ಇಡೀ ರಸ್ತೆಯ ಇಕ್ಕೆಲಗಳಲ್ಲಿ ಸಚಿವರ ಕಟೌಟ್ ಗಳು, ಫ್ಲೆಕ್ಸ್ ಗಳು ರಾಜಿಸುತ್ತಿದ್ದರು.
ವಿಶೇಷವಾಗಿ ಗಾಜುವಾಕ ಸರ್ಕಲ್ ನಲ್ಲಿ ಕುಮಾರಸ್ವಾಮಿ ಅವರ ಬೃಹತ್ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ ಸಂಭ್ರಮಿಸಿದ ಕಾರ್ಖಾನೆ ಕಾರ್ಮಿಕರು, ವಿಶಾಖ ಉಕ್ಕು ಆಂಧ್ರುಲ ಹಕ್ಕು (ವಿಶಾಖ ಉಕ್ಕು ಆಂಧ್ರರ ಹಕ್ಕು) ನಿನಾದವನ್ನು ನಿಜ ಮಾಡಿದ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು ಎನ್ನುವ ಬೃಹತ್ ಬರಹಗಳು ರಾರಾಜಿಸುತ್ತಿದ್ದವು. ಗಾಜುವಾಕ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕಾರ್ಮಿಕ ಸಂಘಟನೆಗಳ ಸದಸ್ಯರು ಸಚಿವ ಕುಮಾರಸ್ವಾಮಿ ಅವರಿಗೆ ಬೃಹತ್ ಹಾರ ಹಾಕುವ ತಮ್ಮ ಕೃತಜ್ಞತೆ ಸಲ್ಲಿಸಿದರಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಅವರ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು, 2030ರ ವೇಳೆಗೆ ಭಾರತದಲ್ಲಿ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ, ದೃಢ ಸಂಕಲ್ಪ ಪ್ರಧಾನಿಗಳಾದ ನರೇಂದ್ರ ಮೋದಿ ಅವರದ್ದಾಗಿದ್ದು, ಪ್ರಧಾನಿಗಳ ಆಶಯದಂತೆ ಆಂಧ್ರ ಪ್ರದೇಶದ ವೈಜಾಗ್ ಸ್ಟೀಲ್ ಪುನಶ್ಚೇತನಕ್ಕೆ ₹11,400 ಕೋಟಿಗಳ ಬೃಹತ್ ಪ್ಯಾಕೇಜ್ ಘೋಷಿಸಲಾಗಿದೆ. ಇದು ಮೋದಿ ಅವರ ಸರಕಾರ ಕೈಗೊಂಡ ಐತಿಹಾಸಿಕ ನಿರ್ಧಾರವಾಗಿದೆ ಎಂದರು.
ಪ್ಯಾಕೇಜ್ ಘೋಷಣೆ ನಂತರ ಬೆಳಗ್ಗೆ ನಾನು ಕುಟುಂಬ ಸಮೇತ ತಿರುಪತಿಗೆ ತೆರಳಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ಇಲ್ಲಿಗೆ ಬಂದಿದ್ದೇನೆ. ದೇವರ ಅನುಗ್ರಹ ಹಾಗೂ ಮೋದಿ ಅವರ ಧೃಢ ನಿರ್ಧಾರದಿಂದ ಕಾರ್ಖಾನೆಗೆ ಮರು ಜೀವ ಸಿಗುತ್ತಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.












Click it and Unblock the Notifications