ಬಜೆಟ್ 2024: ಯಾವುದು ಅಗ್ಗ; ಯಾವುದು ದುಬಾರಿ
ಬಹುನಿರೀಕ್ಷಿತ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್‌ನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಈ ಬಜೆಟ್ ಹಲವು ವಿಭಾಗಗಳ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಇನ್ನು ಹಲವು ಕ್ಷೇತ್ರಗಳ ಚಿಂತೆಯನ್ನು ದುಪಟ್ಟು ಮಾಡಿದೆ.
ಚುನಾವಣೆ ಪೂರ್ವದಲ್ಲಿ ಬಿಜೆಪಿ ಮಂಡಿಸಿದ ಬಜೆಟ್‌ನ್ನೇ ಮತ್ತೆ ಘೋಷಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ವಿತ್ತ ಸಚಿವರು ವಿವಿಧ ಕ್ಷೇತ್ರಗಳಿಗೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಈ ಮೂಲಕ ಜನ ಸಾಮಾನ್ಯರ ಮುಖದಲ್ಲಿ ಮೂಡಿದ್ದ ಚಿಂತೆಯ ಗೆರೆಗಳನ್ನು ಅಳಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಕ್ಯಾನ್ಸರ್ ಔಷಧಿಗಳು ಅಗ್ಗವಾಗಲಿದೆ ವಿತ್ತ ಸಚಿವೆ ನಿರ್ಮಲಾ ಸೀತರಾಮಾನ್ ಹೇಳಿದ್ದಾರೆ. ಮೊಬೈಲ್‌ಗಳು ಮತ್ತು ಮೊಬೈಲ್ ಚಾರ್ಜರ್‌ಗಳು ಸೇರಿದಂತೆ ಇತರ ಸಾಧನಗಳ ಬೆಳಕೆ ಇಳಿಕೆ ಆಗಲಿದೆ. ಇನ್ನು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು 6% ಕ್ಕೆ ಇಳಿಸಿದೆ ಈ ಮೂಲಕ ಚಿನ್ನಾಭರಣಗಳ ಉದ್ಯಮಿಗಳ ಅಧ್ಯಕ್ಷರು ಮನವಿ ಮಾಡಿದ್ದರು.
ಯಾವುದು ಅಗ್ಗ
ಚಿನ್ನ ಮತ್ತು ಬೆಳ್ಳಿ ಅಗ್ಗ
ಆಮದು ಮಾಡಿದ ಆಭರಣಗಳು
ಪ್ಲಾಟಿನಂ ಮೇಲಿನ ಕಸ್ಟಮ್ ಸುಂಕ ಕಡಿತ
ಕ್ಯಾನ್ಸರ್ ಔಷಧಗಳು
ಮೊಬೈಲ್ ಚಾರ್ಜರ್
ಮೊಬೈಲ್ ಫೋನ್
ಮೀನು ಆಹಾರ
ಚರ್ಮದ ಸರಕುಗಳು
ರಾಸಾಯನಿಕಗಳು ಪೆಟ್ರೋಕೆಮಿಕಲ್ಸ್
PVC ಫ್ಲೆಕ್ಸ್ ಬ್ಯಾನರ್
ದುಬಾರಿ
ಪ್ಲಾಸ್ಟಿಕ್ ವಸ್ತುಗಳ ಮೇಲಿನ ಆಮದು ಸುಂಕ
ಪೆಟ್ರೋಕೆಮಿಕಲ್ - ಅಮೋನಿಯಂ ನೈಟ್ರೇಟ್ ಮೇಲೆ ಕಸ್ಟಮ್ ಸುಂಕ
ಆಮದುಗಳನ್ನು ಕಡಿಮೆ ಮಾಡಲು 10 ರಿಂದ 25 ರಷ್ಟು ಹೆಚ್ಚು.
ವಿಮಾನ ಪ್ರಯಾಣ ದುಬಾರಿ
ಸಿಗರೇಟ್ ದುಬಾರಿ
ವಿವಿಧ ರೀತಿಯ ಬಟ್ಟೆ, ವಸ್ತ್ರಗಳ ಬೆಲೆ ಏರಿಕೆ
ವಿದ್ಯುತ್ ಉಪಕರಣಗಳ ಬೆಲೆ ಏರಿಕೆ












Click it and Unblock the Notifications