Budget 2024; ಮೂರು ಪ್ರಮುಖ ರೈಲ್ವೆ ಕಾರಿಡಾರ್ ನಿರ್ಮಾಣ

ಬೆಂಗಳೂರು, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಸುಮಾರು ಒಂದು ಗಂಟೆಯ ಬಜೆಟ್ ಭಾಷಣ ಇದಾಗಿತ್ತು. ಲೋಕಸಭೆ ಚುನಾವಣೆ ಎದುರಾಗುವುದರಿಂದ ಮಧ್ಯಂತರ ಬಜೆಟ್‌ ಅನ್ನು ಮಂಡನೆ ಮಾಡಲಾಗಿದೆ. ಬಜೆಟ್‌ನಲ್ಲಿ ಸಾರಿಗೆ ಕ್ಷೇತ್ರದ ಕುರಿತು ಹಲವು ಪ್ರಸ್ತಾಪಗಳನ್ನು ಮಾಡಲಾಗಿದೆ.

ಗುರುವಾರ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ರೈಲ್ವೆ ಇಲಾಖೆಯ ಕೆಲವು ಯೋಜನೆಗಳ ಕುರಿತು ಸಹ ಪ್ರಸ್ತಾಪಿಸಿದ್ದಾರೆ. ಮೂರು ಪ್ರಮುಖ ರೈಲ್ವೆ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಪಿಎಂ ಗತಿಶಕ್ತಿ ಯೋಜನೆ ಅನ್ವಯ ಇವುಗಳನ್ನು ಗುರುತಿಸಲಾಗಿದೆ ಎಂದರು.

Budget 2024 Three Major Economic Railway Corridor

ಸರ್ಕಾರ ಮೂರು ಪ್ರಮುಖ ಕಾರಿಡಾರ್‌ಗಳನ್ನು

1. ಇಂಧನ, ಗಣಿ ಮತ್ತು ಸಿಮೆಂಟ್ ಕಾರಿಡಾರ್
2. ಬಂದರುಗಳನ್ನು ಸಂಪರ್ಕಿಸುವ ಕಾರಿಡಾರ್
3. ಹೆಚ್ಚು ಸಂಚಾರ ದಟ್ಟಣೆ ಇರುವ ಕಾರಿಡಾರ್‌ಗಳನ್ನು ಎಂದು ಗುರುತಿಸಿದೆ.

ಪಿಎಂ ಗತಿಶಕ್ತಿ ಯೋಜನೆಯಡಿ ವಿವಿಧ ಮಾದರಿ ಸಾರಿಗೆ ಸಂಚಾರಕ್ಕೆ ಅನುಕೂಲವಾಗುವಂತೆ ಈ ಕಾರಿಡಾರ್‌ಗಳ ನಿರ್ಮಾಣವಾಗಲಿದೆ. ಇದು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸಮಯ, ಹಣ ಉಳಿತಾಯಕ್ಕೆ ಸಹಾಯಕವಾಗಲಿದೆ.

ಸಂಚಾರ ದಟ್ಟಣೆ ಇರುವ ಕಾರಿಡಾರ್‌ಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದರಿಂದ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಅಲ್ಲದೇ ರೈಲ್ವೆ ಸಂಚಾರದ ಸುರಕ್ಷತೆಗೆ ಆದ್ಯತೆ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿ ವಿವಿಧ ಆರ್ಥಿಕ ವಲಯಗಳಿಗೆ ಬಹುಮಾದರಿ ಸಂಪರ್ಕ, ಮೂಲಸೌಕರ್ಯವನ್ನು ಒದಗಿಸಲು 13 ಅಕ್ಟೋಬರ್ 2021 ರಂದು ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಘೋಷಣೆ ಮಾಡಿದ್ದರು.

ವಾಣಿಜ್ಯ ಉದ್ದೇಶಗಳಿಂದ ವಿಶೇಷ ಆರ್ಥಿಕ ವಲಯಗಳಿಗೆ ಸದ್ಯ ಇರುವ ವಿವಿಧ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಮನ್ವಯತೆ ಸಾಧಿಸುವಂತೆ ಯೋಜನೆ ರೂಪಿಸಲಾಗುತ್ತಿದೆ.

ಈ ಯೋಜನೆಯಡಿ ಜವಳಿ ಕ್ಲಸ್ಟರ್‌, ಫಾರ್ಮಾಸಿಟಿಕಲ್ ಕ್ಲಸ್ಟರ್‌, ರಕ್ಷಣಾ ಕಾರಿಡಾರ್‌, ಎಲೆಕ್ಟ್ರಾನಿಕ್ ಪಾರ್ಕ್‌ಗಳು, ಕೈಗಾರಿಕಾ ಕಾರಿಡಾರ್‌ಗಳು, ಫಿಶಿಂಗ್ ಕ್ಲಸ್ಟರ್‌ಗಳು, ಅಗ್ರಿ ಝೋನ್‌ಗಳಂತಹ ಆರ್ಥಿಕ ವಲಯಗಳನ್ನು ಒಂದೇ ವೇದಿಕೆಯಡಿ ತಂದು ಪೋರ್ಟಲ್ ಮೂಲಕ ಅಪ್‌ಡೇಟ್ ಮಾಡಿ, ಸಮಗ್ರ ಮಾಹಿತಿ ಅಂಗೈ ತುದಿಯಲ್ಲಿಯೇ ಸಿಗುವಂತೆ ಮಾಡಲಾಗುತ್ತಿದೆ.

ಇದು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಸಂಪರ್ಕವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. ಇದು ರಫ್ತು ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವ ಮೂಲಕ ದೇಶದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+