ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023; ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ: ಕೇಂದ್ರ ಬಜೆಟ್ ನಲ್ಲಿ ಮೀಸಲು

ಕೇಂದ್ರ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ ಗೆ 10 ಲಕ್ಷ ಕೋಟಿ ಹಾಗೂ ರೈಲ್ವೆಗೆ 2.40 ಲಕ್ಷ ಕೋಟಿ ರೂ. ಮೀಸಲಿಡುವುದಾಗಿ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿದೆ.

|
Google Oneindia Kannada News

ದೆಹಲಿ,ಫೆಬ್ರವರಿ1: ಕೇಂದ್ರ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ ಗೆ 10 ಲಕ್ಷ ಕೋಟಿ ಮೀಸಲಿಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ರೈಲ್ವೆಗೆ 2.40 ಲಕ್ಷ ಕೋಟಿ ರೂ. ಮೀಸಲಿಡುವುದಾಗಿದ್ದು, ಜಿಡಿಪಿಯ ಶೇ 3.3ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲು, ರೈಲ್ವೆಗೆ 2.40 ಲಕ್ಷ ಕೋಟಿ ರೂಪಾಯಿ ಮೀಸಲು.ಸರಕು ಸಾಗಣೆಗೆ ನೂರು ಹೊಸ ಸಾರಿಗೆ ಯೋಜನೆ ಜಾರಿ ಮಾಡುವುದು. ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ ಸಾಗಣೆ. ದೇಶದಲ್ಲಿ 50 ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ. ಬುಡಕಟ್ಟು ಸಮುದಾಯದ ಜನರ ಶಿಕ್ಷಣ, ರಸ್ತೆ ನಿರ್ಮಾಣಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದಾರೆ.

Budget 2023 Highlights for Job Sector in Kannada

ಇನ್ನೂ ಮ್ಯಾನ್ ಹೋಲ್ ನಿಂದ ಮಷಿನ್ ಹೋಲ್ ಗೆ ಬದಲಾವಣೆ, ದೇಶದ ಎಲ್ಲಾ ನಗರಗಳು ಮ್ಯಾನ್ ಹೋಲ್ ಮುಕ್ತ ಗುರಿ. ಕೃತಕ ಬುದ್ಧಿಮತ್ತೆ ಜಾರಿ. ಆರೋಗ್ಯ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ AI(ಕೃತಕ ಬುದ್ಧಿಮತ್ತೆ) ಸೆಂಟರ್ ಗಳ ಸ್ಥಾಪನೆ. ಲ್ಯಾಬ್ ನಲ್ಲಿ ಸಹಜ ಡೈಮಂಡ್ ಗಳ ಉತ್ಪಾದನೆ. ಈ ಮೂಲಕ ನೈಸರ್ಗಿಕ ವಜ್ರ ಉತ್ಪಾದನೆಗೆ ಕ್ರಮ ಕೈಗೊಳ್ಳುವುದಾಗ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಅಲ್ಲದೇ ಬಜೆಟ್​ನಲ್ಲಿ ಏಕಲವ್ಯ ಆಧುನಿಕ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.

English summary
Budget 2023 for Job: Know about Union Budget 2023 Highlights for Job Sector. Check New reforms & schemes announced for the job sector in Budget 2023
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X