ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಇಪಿ, ಜಿಎಸ್‌ಟಿ ರಿಪೀಫ್‌: ಬಜೆಟ್‌ನಿಂದ ಶಿಕ್ಷಣ ಕ್ಷೇತ್ರದ ನಿರೀಕ್ಷೆಗಳು ಏನು?

|
Google Oneindia Kannada News

ನವದೆಹಲಿ, ಜನವರಿ 25: ಹಲವಾರು ಕ್ಷೇತ್ರಗಳು ಬೆಂಬಲಕ್ಕಾಗಿ ಸರ್ಕಾರದ ಕಡೆಗೆ ನೋಡುತ್ತಿರುವ ಸಮಯದಲ್ಲಿ ಬಜೆಟ್ 2022 ಬಂದಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಹಾನಿಯಿಂದ ಯಾವುದೇ ಕ್ಷೇತ್ರವು ಹೊರತಾಗಿಲ್ಲ. ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲಾಗಿತ್ತು. ಈ ಎಲ್ಲದರ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಆರ್ಥಿಕ ನೆರವು ನೀಡುತ್ತದೆ ಎಂದು ಶಿಕ್ಷಣ ವಲಯ ನಿರೀಕ್ಷಿಸುತ್ತಿದೆ. ಈ ಮಧ್ಯೆ ಸರ್ಕಾರಿ ಶಾಲೆಯನ್ನು ಸರ್ಕಾರ ಬಲಪಡಿಸುವ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ.

ಭಾರತ ಸರ್ಕಾರವು 2020 ರಲ್ಲಿ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಪರಿಚಯ ಮಾಡಿದೆ. . ಈ ನೀತಿಯು ದೇಶದಲ್ಲಿ ಶಿಕ್ಷಣವನ್ನು ನೀಡುವ ರೀತಿಯಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡುವ ಗುರಿಯನ್ನು ಹೊಂದಿದೆ. ಆದರೆ ಕೋವಿಡ್‌ ಕಾರಣದಿಂದಾಗಿ ಇನ್ನೂ ಕೂಡಾ ಜಾರಿಗೆ ಬಂದಿಲ್ಲ. ಇನ್ನೊಂದೆಡೆ ಈ ನೀತಿಯು ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕುವ ಬದಲು ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡಲಿದೆ ಎಂದು ಹಲವಾರು ತಜ್ಞರು ಹೇಳಿದ್ದಾರೆ. ಈ ನಡುವೆ ಬಜೆಟ್‌ ಬಂದಿದೆ. ಈ ಬಗ್ಗೆ ಮಾತನಾಡಿದ ರುಬಿಕಾ ಇಂಡಿಯಾದ ಸಿಇಒ ಮನೋಜ್ ಸಿಂಗ್ ಅವರ ಪ್ರಕಾರ, ಶಿಕ್ಷಣಕ್ಕಾಗಿ ಬಜೆಟ್ ಹಂಚಿಕೆಗೆ ಗಮನ ನೀಡಬೇಕು ಎಂದು ಹೇಳಿದ್ದಾರೆ.

 ತೆರಿಗೆ ರಿಯಾಯಿತಿ, ನಿಧಿ ಹಂಚಿಕೆ: ಕೇಂದ್ರ ಬಜೆಟ್‌ನಿಂದ ಫಾರ್ಮಾ ವಲಯದ ನಿರೀಕ್ಷೆಗಳಿವು ತೆರಿಗೆ ರಿಯಾಯಿತಿ, ನಿಧಿ ಹಂಚಿಕೆ: ಕೇಂದ್ರ ಬಜೆಟ್‌ನಿಂದ ಫಾರ್ಮಾ ವಲಯದ ನಿರೀಕ್ಷೆಗಳಿವು

"ರಾಷ್ಟ್ರೀಯ ಶಿಕ್ಷಣ ನೀತಿ, 2020 (ಎನ್‌ಇಪಿ) ಶೈಕ್ಷಣಿಕ ಸುಧಾರಣೆಗಳಿಗೆ ಬದ್ಧತೆಯನ್ನು ಪ್ರದರ್ಶಿಸಿದೆ ಮತ್ತು 1968 ರಲ್ಲಿ ಎನ್‌ಇಪಿ ನಲ್ಲಿ ಮೊದಲು ಶಿಫಾರಸು ಮಾಡಿದಂತೆ ಶಿಕ್ಷಣದ ಮೇಲಿನ ಸಾರ್ವಜನಿಕ ಹೂಡಿಕೆಯನ್ನು ಜಿಡಿಪಿಯ ಶೇಡಕ 6ಕ್ಕೆ ಹೆಚ್ಚಿಸುವ ಶಿಫಾರಸನ್ನು ಪುನರುಚ್ಚರಿಸಿದೆ. ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಬಜೆಟ್ ಹಂಚಿಕೆಯಲ್ಲಿ ಶಿಕ್ಷಣ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ. ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ನಿಧಿಯ ಹಂಚಿಕೆ ಹೆಚ್ಚಾಗಬೇಕಾಗಿದೆ," ಎಂದು ರುಬಿಕಾ ಇಂಡಿಯಾದ ಸಿಇಒ ಮನೋಜ್ ಸಿಂಗ್ ಹೇಳಿದರು.

Budget 2022: What Education Sector Expects

ರಾಷ್ಟ್ರೀಯ ಶಿಕ್ಷಣ ಬ್ಯಾಂಕ್ ಸ್ಥಾಪನೆಗೆ ಸಲಹೆ

ರಾಷ್ಟ್ರೀಯ ವಸತಿ ಬ್ಯಾಂಕ್‌ನ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ಬ್ಯಾಂಕ್
ರಾಷ್ಟ್ರೀಯ ವಸತಿ ಬ್ಯಾಂಕ್‌ನಂತೆ ರಾಷ್ಟ್ರೀಯ ಶಿಕ್ಷಣ ಬ್ಯಾಂಕ್ ಸ್ಥಾಪಿಸುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಸಿಂಗ್ ಸಲಹೆ ನೀಡಿದರು. "ಸಾಧ್ಯವಾದ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲಗಳನ್ನು ನೀಡಲು 'ರಾಷ್ಟ್ರೀಯ ವಸತಿ ಬ್ಯಾಂಕ್' ನಂತಹ 'ರಾಷ್ಟ್ರೀಯ ಶಿಕ್ಷಣ ಬ್ಯಾಂಕ್' ಅನ್ನು ಸ್ಥಾಪಿಸುವ ಬಗ್ಗೆಯೂ ಬಜೆಟ್ ಪರಿಗಣಿಸಬೇಕು," ಎಂದರು.

ಏನಿದು ರಾಷ್ಟ್ರೀಯ ವಸತಿ ಬ್ಯಾಂಕ್‌?

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಾಷ್ಟ್ರೀಯ ವಸತಿ ಬ್ಯಾಂಕ್‌ನ ಮಾತೃ ಸಂಸ್ಥೆಯಾಗಿದೆ. ಇದು ದೇಶದ ವಸತಿ ಹಣಕಾಸು ಕಂಪನಿಗಳನ್ನು ನಿಯಂತ್ರಿಸುತ್ತದೆ. ಇದನ್ನು 1988 ರಲ್ಲಿ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಆಕ್ಟ್, 1987 ರ ಅಡಿಯಲ್ಲಿ ಸ್ಥಾಪಿಸಲಾಯಿತು. ಬ್ಯಾಂಕ್ ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ.

"ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಬೇಕು," ಎಂದು ರುಬಿಕಾ ಇಂಡಿಯಾದ ಸಿಇಒ ಮನೋಜ್ ಸಿಂಗ್ ಸಲಹೆ ನೀಡಿದರು. ಸಿಂಗ್ ಪ್ರಕಾರ, "ಇದು ಈ ಸಂಸ್ಥೆಗಳಿಗೆ ಹೊಸ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಕೋರ್ಸ್‌ಗಳನ್ನು ಒದಗಿಸಲು ಪ್ರೋತ್ಸಾಹಿಸುತ್ತದೆ."

ಬೇರೇನು ನಿರೀಕ್ಷೆ?

"ಬಜೆಟ್‌ನಿಂದ ಮತ್ತೊಂದು ನಿರೀಕ್ಷೆ ಎಂದರೆ ಶಿಕ್ಷಣಕ್ಕಾಗಿ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 5ಕ್ಕೆ ಇಳಿಕೆ ಮಾಡುವುದು. ಇದರಿಂದಾಗಿ ಹೆಚ್ಚಿನ ಜನರು ಶಿಕ್ಷಣದಲ್ಲಿ ಹೂಡಿಕೆ ಮಾಡಬಹುದು ಮತ್ತು ಉಜ್ವಲ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಬಹುದು," ಎಂದು ರುಬಿಕಾ ಇಂಡಿಯಾದ ಸಿಇಒ ಮನೋಜ್ ಸಿಂಗ್ ತಿಳಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
National Education Bank, GST Relief: Here Is What Education Sector Expects From Budget 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X