ಬಜೆಟ್ 2021: ರಕ್ಷಣಾ ಕ್ಷೇತ್ರಕ್ಕೆ 4.78 ಲಕ್ಷ ಕೋಟಿ ರೂ. ಹಂಚಿಕೆ
ನವದೆಹಲಿ, ಫೆಬ್ರವರಿ 1: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಪ್ರಮುಖ ರಕ್ಷಣಾ ಸಚಿವಾಲಯಕ್ಕೆ 4.78 ಲಕ್ಷ ಕೋಟಿ ರುಪಾಯಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒದಗಿಸಿದ್ದಾರೆ.
ಆತ್ಮನಿರ್ಭರ ಭಾರತ ಯೋಜನೆಯಲ್ಲಿ ದೇಶೀಯವಾಗಿ ನಿರ್ಮಿತವಾಗುವ ಯುದ್ಧ ಸಲಕರಣೆಗಳನ್ನು ಕೊಳ್ಳುವುದಾಗಿದ್ದು, ರಕ್ಷಣಾ ಇಲಾಖೆಗೆ ಬರೋಬ್ಬರಿ 4,78,19,562 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಇದು ಪಿಂಚಣಿ ಹೊರತುಪಡಿಸಿದ ನಂತರ ಕಳೆದ ವರ್ಷದ 3.37 ಲಕ್ಷ ಕೋಟಿಗಳಿಗೆ ಹೋಲಿಕೆ ಮಾಡಿದರೆ, 3.62 ಲಕ್ಷ ಕೋಟಿ ರೂ. ಗೃಹ ಸಚಿವಾಲಯಕ್ಕೆ ಅಂದರೆ 1,66,546.94 ಕೋಟಿ ರೂ. ಹೆಚ್ಚಿನ ಮೊತ್ತವನ್ನು ನೀಡಲಾಗಿದೆ.

"1.35 ಲಕ್ಷ ಕೋಟಿ ರೂ.ಗಳ ಬಂಡವಾಳ ವೆಚ್ಚವನ್ನು ಒಳಗೊಂಡಿರುವ ಹಣಕಾಸು ವರ್ಷ 2021-22ರ ರಕ್ಷಣಾ ಬಜೆಟ್ ಅನ್ನು 4.78 ಲಕ್ಷ ಕೋಟಿಗಳಿಗೆ ಹೆಚ್ಚಿಸಿದ್ದಕ್ಕಾಗಿ ನಾನು ವಿಶೇಷವಾಗಿ ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು 15 ವರ್ಷಗಳಲ್ಲಿ ರಕ್ಷಣಾ ಬಂಡವಾಳ ವೆಚ್ಚದಲ್ಲಿ ಸುಮಾರು 19% ಹೆಚ್ಚಳವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
"ಜನರು ಈ ರೀತಿಯ ಬಜೆಟ್ ಅನ್ನು ನಿರೀಕ್ಷಿಸಿರಲಿಲ್ಲ, ಏಕೆಂದರೆ ಒಂದು ರೀತಿಯಲ್ಲಿ ಸರ್ಕಾರವು ಈ ಮೊದಲು ಐದು ಮಿನಿ ಬಜೆಟ್ ಗಳನ್ನು ಮಂಡಿಸಿತ್ತು. ಹಲವಾರು ಪ್ಯಾಕೇಜುಗಳನ್ನು ಘೋಷಿಸಲಾಯಿತು, ಅದರಲ್ಲಿ ಆತ್ಮನಿರ್ಭರ್ ಭಾರತ್ ಕೂಡ ಒಂದು ಭಾಗವಾಗಿದೆ. ಇದು ಅತ್ಯುತ್ತಮ ಬಜೆಟ್. ಹೆಚ್ಚು ಹೊಗಳಿದರೂ ಅದು ಕಡಿಮೆ ಎಂದು ಅವರು ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಸರ್ಕಾರದ ಬಜೆಟ್ 2021-22 ಅನ್ನು ಶ್ಲಾಘಿಸಿದ್ದು, ಮತ್ತು ಇದು ಉತ್ತಮ ಆಡಳಿತದ ಆರು ಸ್ತಂಭಗಳನ್ನು ಆಧರಿಸಿದೆ ಎಂದು ಹೇಳಿದರು.
"ಆರ್ಥಿಕ ಸುಧಾರಣೆಗಳು, ಉದ್ಯೋಗ ಸೃಷ್ಟಿ, ಬಂಡವಾಳ ರಚನೆ ಮತ್ತು ಭಾರತದಲ್ಲಿ ಮೂಲಸೌಕರ್ಯಗಳನ್ನು ರಚಿಸುವ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಉತ್ತಮ ಆಡಳಿತದ 6 ಸ್ತಂಭಗಳ ಆಧಾರದ ಮೇಲೆ ಈ ಬಜೆಟ್ ಭಾರತವನ್ನು ಸಮಗ್ರ ಬೆಳವಣಿಗೆ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ಕರೆದೊಯ್ಯುತ್ತದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.












Click it and Unblock the Notifications