ಸರ್ಕಾರಿ ಬ್ಯಾಂಕ್ ಮರು ಬಂಡವಾಳಕ್ಕೆ 20,000 ಕೋಟಿ ರೂಪಾಯಿ

ನವದೆಹಲಿ, ಫೆಬ್ರವರಿ.01: ಭಾರತದ ಸಾರ್ವಜನಿಕ ವಲಯಗಳಲ್ಲಿ ಇರುವ ಸರ್ಕಾರಿ ಬ್ಯಾಂಕ್ ಗಳಿಗೆ ಮರು ಬಂಡವಾಳೀಕರಣಕ್ಕಾಗಿ ಕೇಂದ್ರ ಬಜೆಟ್ ನಲ್ಲಿ 20000 ಕೋಟಿ ರೂಪಾಯಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಸಂಸತ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಈ ಬಗ್ಗೆ ಹೇಳಿದರು. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಬಂಡವಾಳೀಕರಣಕ್ಕೆ ಹಣವನ್ನು ನೀಡುವುದಾಗಿ ತಿಳಿಸಿದರು.

ರಾಜ್ಯ ಮಟ್ಟದಲ್ಲಿನ ಬ್ಯಾಂಕ್ ಗಳ ಆರ್ಥಿಕ ಸ್ಥಿತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ 20000 ಕೋಟಿ ರೂಪಾಯಿ ಹಣವನ್ನು ತುಂಬಿಸುವುದಕ್ಕೆ ನಿರ್ಧರಿಸಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದರು.

Budget 2021: Rs 20,000 Crore For Recapitalisation Of Govt Banks

ಸಾರ್ವಜನಿಕ ಬ್ಯಾಂಕ್ ಗಳಿಗೆ ಅನುದಾನ ಕಡಿತ:

ಕಳೆದ 2019-20ನೇ ಆರ್ಥಿಕ ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಆರ್ಥಿಕತೆಯನ್ನು ಬಲಪಡಿಸುವುದಕ್ಕಾಗಿ 70000 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಅದಾಗ್ಯೂ, ಜನರು ತಮ್ಮ ಅವಶ್ಯಕತೆಗೆ ತಕ್ಕಂತೆ ಮಾರುಕಟ್ಟೆಗಳಲ್ಲೇ ಸಾಲವನ್ನು ಪಡೆಯುತ್ತಾರೆ ಎಂಬುದರ ಬಗ್ಗೆ ತಿಳಿದಿದ್ದು, 2020-2021ನೇ ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಬಂಡವಾಳೀಕರವನ್ನು ತಡೆ ಹಿಡಿಯಲಾಗಿತ್ತು.

ಕಳೆದ ಸೆಪ್ಟೆಂಬರ್ 2020ರಲ್ಲಿ ಬೇಡಿಕೆಗೆ ಅನುಗುಣವಾಗಿ 2020-21ನೇ ಸಾಲಿನ ಅನುದಾನದ 20000 ಕೋಟಿ ರೂಪಾಯಿಯ ಮೊದಲ ಹಂತದ ಭಾಗವಾಗಿ ಹಣವನ್ನು ನೀಡಲಾಗಿತ್ತು. ನವೆಂಬರ್ ತಿಂಗಳಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಸಿಂಧ್ ಬ್ಯಾಂಕ್ ಗಳಿಗೆ 5500 ಕೋಟಿ ರೂಪಾಯಿ ಪೂರೈಸಲಾಗಿತ್ತು. ಅದಕ್ಕೂ ಮೊದಲು 2017-18ನೇ ಸಾಲಿನಲ್ಲಿ 90000 ಕೋಟಿ ಮತ್ತು 2018-19ನೇ ಸಾಲಿನಲ್ಲಿ 1.06 ಲಕ್ಷ ಕೋಟಿ ರೂಪಾಯಿ ಹಣವನ್ನು ಮರು ಬಂಡವಾಳೀಕರಣಕ್ಕಾಗಿ ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+