ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ವಿನಃ, ಕಾಂಗ್ರೆಸ್ ಬಳಿ ಭಿಕ್ಷೆ ಬೇಡಲ್ಲ: ಮಾಯಾವತಿ
ನವದೆಹಲಿ, ಅಕ್ಟೋಬರ್ 09: ಕಾಂಗ್ರೆಸ್ ವಿರುದ್ಧ ಮಾಯಾವತಿ ಅವರ ದಿಢೀರ್ ಮುನಿಸು ಇನ್ನಷ್ಟು ಹೆಚ್ಚಾಗುತ್ತಿದೆ. ಕಾಂಗ್ರೆಸ್ ಅನ್ನು ಕಟು ಶಬ್ದಗಳಲ್ಲಿ ಟೀಕಿಸಲು ಬಿಎಸ್‌ಪಿ ನಾಯಕಿ ಮಾಯಾವತಿ ಶುರು ಹಚ್ಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಕಾಂಗ್ರೆಸ್ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಮಾಯಾವತಿ ಅವರು ಇಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
'ಕೈ'ಕೊಟ್ಟ ಮಾಯಾವತಿ... ಕಾಂಗ್ರೆಸ್ ಗೆ ಅಳಿವು-ಉಳಿವಿನ ಸವಾಲು!
ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತೇವೆಯೇ ವಿನಃ ಸೀಟುಗಳಿಗಾಗಿ ಕಾಂಗ್ರೆಸ್ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿದ್ದಾರೆ ಬಿಎಸ್‌ಪಿ ನಾಯಕಿ ಮಾಯಾವತಿ.
ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಎಸ್‌ಪಿ-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿತ್ತು. ಆದರೆ ಎರಡೂ ಪಕ್ಷಗಳ ನಡುವೆ ಮೈತ್ರಿ ಮಾತುಕತೆ ಮುರಿದುಬಿದ್ದಿತ್ತು.
ಮಾಯಾವತಿ ನಡೆಗೆ ಅಸಲಿ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ
ಬಿಎಸ್‌ಪಿಯು ದಲಿತರ ಆತ್ಮಗೌರವದ ಪರ ಸದಾ ನಿಲ್ಲುತ್ತದೆ ಎಂದು ಹೇಳಿರುವ ಅವರು, ಜೊತೆ-ಜೊತೆಗೆ ಹಿಂದುಳಿದವರ, ಮುಸ್ಲಿಮರ ಮತ್ತು ಬಡವರ ಪರ ನಿಲ್ಲುವುದನ್ನು ಅದು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಹಾಗಾಗಿಯೇ ನಾವು ಉತ್ತಮ ಸಂಖ್ಯೆಯ ಸೀಟುಗಳಿಗಾಗಿ ಕಾಂಗ್ರೆಸ್ ಬಳಿ ಮನವಿ ಮಾಡಿದ್ದೆವು ಎಂದು ಮಾಯಾವತಿ ಹೇಳಿದ್ದರು.
ಬಿಎಸ್ಪಿಯ ಮಾಯಾವತಿ ಕಾಂಗ್ರೆಸ್ಗೆ 'ಕೈ' ಕೊಟ್ಟಿದ್ದೇಕೆ?
ನಮ್ಮ ಬೇಡಿಕೆಯಷ್ಟು ಸೀಟು ದೊರಕಲಿಲ್ಲವೆಂದರೆ ಮೈತ್ರಿ ಮಾತುಕತೆಯಲ್ಲಿ ಅರ್ಥವಿಲ್ಲ ಎಂದು ಖಡಾ-ಖಂಡಿತವಾಗಿ ಹೇಳಿರುವ ಮಾಯಾವತಿ ನಾವು ಏಕಾಂಗಿಯಾಗಿ ಬೇಕಾದರೂ ಸ್ಪರ್ಧಿಸುತ್ತೇವೆಯೇ ವಿನಃ ಸೀಟುಗಳಿಗಾಗಿ ಭಿಕ್ಷೆ ಬೇಡೆವು ಎಂದು ಹೇಳಿದ್ದಾರೆ.