ರಾಹುಲ್ ರಾಜನೀತಿಯಲ್ಲಿ ಎಂದೂ ಯಶಸ್ವಿಯಾಗಲ್ಲ : ಬಿಎಸ್ಪಿ ನಾಯಕ

ನವದೆಹಲಿ, ಜುಲೈ 17 : ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೂ ಮೊದಲೇ ಇತರ ಪಕ್ಷಗಳೊಂದಿಗೆ ಮೈತ್ರಿಗಾಗಿ ಹುಡುಕಾಟ ನಡೆಸಿರುವ ಬಹುಜನ ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ.

ಇದೇ ಡಿಸೆಂಬರ್ ನಲ್ಲಿ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ ರಾಜ್ಯಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎಲ್ಲ ರಾಜ್ಯಗಳಲ್ಲಿಯೂ ಮೈತ್ರಿ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಮೈತ್ರಿಯೇ ಬೇಡ ಎಂದು ಕಾಂಗ್ರೆಸ್ಸಿಗೆ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ತಾಕೀತು ಮಾಡಿದ್ದಾರೆ.

ಈ ಮೈತ್ರಿ ಬಗ್ಗೆ ಮಾತುಕತೆಗಳನ್ನು ಇನ್ನೂ ನಡೆಯುತ್ತಿರಬೇಕಾದರೆ, ಬಹಿರಂಗ ಹೇಳಿಕೆ ನೀಡಿದ್ದು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಜೈ ಪ್ರಕಾಶ್ ಸಿಂಗ್ ವಿರುದ್ಧ ಮಾಯಾವತಿ ಕೆಂಡಾಮಂಡಲರಾಗಿದ್ದಾರೆ.

"ರಾಹುಲ್ ಗಾಂಧಿ ಅವರು ರಾಜೀವ್ ಗಾಂಧಿ ಅವರ ಹಿಂದೆ ಹೋಗಿದ್ದರೆ ರಾಜನೀತಿಯಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಅವರು ತಮ್ಮ ತಾಯಿ (ಸೋನಿಯಾ ಗಾಂಧಿ) ಹಿಂದೆ ಹೋದರು. ಅವರು ವಿದೇಶಿಯರಾಗಿದ್ದಾರೆ. ನಾನು ಪ್ರಮಾಣ ಮಾಡಿ ಹೇಳುತ್ತೇನೆ, ರಾಹುಲ್ ಗಾಂಧಿಯವರು ರಾಜನೀತಿಯಲ್ಲಿ ಎಂದು ಸಫಲರಾಗುವುದಿಲ್ಲ" ಎಂದು ಜೈ ಪ್ರಕಾಶ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆಗೂ ಪಕ್ಷದ ನೀತಿಗೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆ ಎಂದಿರುವ ಮಾಯಾವತಿ ಅವರು, ಪಕ್ಷದ ಸಿದ್ಧಾಂತದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕಾಗಿ ಅವರನ್ನು ಪಕ್ಷದ ಹುದ್ದೆಯಿಂದ ಕಿತ್ತುಹಾಕಲಾಗಿದೆ ಎಂದಿದ್ದಾರೆ. ಯಾರೇ ಆಗಲಿ ಮೈತ್ರಿಯ ಬಗ್ಗೆಯಾಗಲಿ, ಯಾವುದೇ ನಾಯಕರ ವಿರುದ್ಧವಾಗಲಿ ಯಾವುದೇ ರೀತಿಯ ಹೇಳಿಕೆ ನೀಡಬಾರದೆಂದು ತಾಕೀತು ಮಾಡಿದ್ದಾರೆ.

BSP leader expelled for making comment against Rahul Gandhi

ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಗೋವು ಒಂದು ಪಶು ಮಾತ್ರ ಆಗಬಲ್ಲದು. ಕಡಿಮೆ ತಿಂದು ಹೆಚ್ಚು ಹಾಲು ನೀಡುವ ಗೋವು ಯಾರ ತಾಯಿಯಾಗಲು ಸಾಧ್ಯವಿಲ್ಲ. ನಮಗೆ ಜನ್ಮ ನೀಡಿದ ಮಹಿಳೆ ಮಾತ್ರ ನಮಗೆ ತಾಯಿಯಾಗಬಲ್ಲಳು. ಗೋವು ನಿಮ್ಮ ತಾಯಿಯಾಗಿರಬಹುದು, ನನ್ನ ತಾಯಿ ಮಾತ್ರ ನನಗೆ ಜನುಮ ನೀಡಿದವಳು ಎಂದು ಜೈ ಪ್ರಕಾಶ್ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+