ಲ್ಯಾಂಡ್ ಲೈನ್ ಯುಗಕ್ಕೆ ಮರುಜೀವ: ಪ್ರಿಪೇಡ್ ಲ್ಯಾಂಡ್ ಲೈನ್ ಶೀಘ್ರ ಬರಲಿದೆ
ಬೆಂಗಳೂರು, ಜು.9: ಇಷ್ಟು ದಿನ ಕೇವಲ ಮೊಬೈಲ್‌ಗಳಿಗಷ್ಟೇ ಪ್ರಿಪೇಯ್ಡ್ ಆಗಿತ್ತು ಇನ್ನುಮುಂದೆ ಸ್ಥಿರ ದೂರವಾಣಿಗೂ ಕೂಡ ಪ್ರಿಪೇಯ್ಡ್ ಸೌಲಭ್ಯ ಬರಲಿದೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಪರಿಕಲ್ಪನೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕಂಪನಿಯು ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಹೊಸದೊಂದು ಮುನ್ನುಡಿ ಬರೆಯಲು ಸಿದ್ಧವಾಗಿದೆ. ಬಿಎಸ್‌ಎನ್‌ಎಲ್ ಇನ್ನುಮುಂದೆ ಸ್ಥಿರ ದೂರವಾಣಿಗೂ ಪ್ರಿಪೇಯ್ಡ್ ಸೌಲಭ್ಯ ನೀಡಲಿದೆ.
ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಲ್ಲಿ ಪ್ರಿಪೇಯ್ಡ್ ಸೇವೆ ಎಂಬುದು ಜಾರಿಗೆ ಬಂದಿಲ್ಲ. 2013ರಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿ ಬಳಿಕಕೆಲವು ಕಾರಣಗಳಿಂದ ಕೈಬಿಟ್ಟಿತ್ತು. ಇದೀಗ ಮೊಬೈಲ್ ಹಾಗೂ ವಿಲ್ ದೂರವಾಣಿಯಲ್ಲಿ ಈಗಘಾಲೇ ಈ ಸೌಲಭ್ಯ ಇದೆ. ಇನ್ನುಮುಂದೆ ಸ್ಥಿರದೂರವಾಣಿಯಲ್ಲೂ ಈ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.
ನೆಕ್ಸ್ಟ್ ಜನರೇಷನ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ಈ ತಂತ್ರಜ್ಞಾನದ ಪ್ರತ್ಯೇಕ ಸರ್ವರ್‌ಗಳನ್ನು ಎಲ್ಲ ಟೆಲಿಕಾಂ ಎಕ್ಸ್‌ಚೇಂಜ್‌ಗಳಲ್ಲಿ ಅಳವಡಿಸಲಾಗುತ್ತದೆ. ಇದರಿಂದಲೇ ಮನೆಯ ಸ್ಥಿರ ದೂರವಾಣಿಯಲ್ಲಿ ಪ್ರಿಪೇಯ್ಡ್ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಪ್ರಿಪೇಯ್ಡ್ ಸೌಲಭ್ಯವೆಂದರೇನು
ಪ್ರತಿಯೊಂದು ದೂರವಾಣಿ ವಿನಿಮಯ ಕೇಂದ್ರ ಈಗಿರುವ ತಾಂತ್ರಿಕ ವ್ಯವಸ್ಥೆಯಲ್ಲೇ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ದೂರವಾಣಿ ಕೇಂದ್ರ ಅಥವಾ ಕೇಬಲ್ ಅಗತ್ಯವಿರುವುದಿಲ್ಲ. ನೆಕ್ಸ್ಟ್ ಜನರೇಷನ್ ನೆಟ್‌ವರ್ಕ್ಸ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ.

ಬಿಎಸ್‌ಎನ್‌ಎಲ್ ಮೌಲ್ಯವರ್ಧಿತ ಸೇವೆ
ಪ್ರಿಪೇಯ್ಡ್ ಸ್ಥಿರ ದೂರವಾಣಿ ಸೌಲಭ್ಯವು ಸ್ಥಿರ ದೂರವಾಣಿಯಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡಲಿದೆ. ಈಗಿರುವ ಕಂಪ್ಯೂಟರ್‌ನಲ್ಲಿ ವೇಗದ ಇಂಟರ್‌ನೆಟ್ ಬಳಸಲು ಸ್ಥಿರ ದೂರವಾಣಿಯಲ್ಲಿ ಮೊಬೈಲ್ ಮಾದರಿಯ ಸೇವೆ ನೀಡಲು ಸಾಧ್ಯವಾಗಲಿದೆ. ಮೊಬೈಲ್‌ನಂತೆ ವೋಚರ್ ಕಾರ್ಡ್‌ನ್ನು ಪಡೆದು ಸ್ಥಿರ ದೂರವಾಣಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ರೀಚಾರ್ಜ್ ಎಷ್ಟು ಸಾವಿರದವರೆಗೆ ಮಾಡಿಸಬಹುದು
ಈಗಿರುವ ಮಾಹಿತಿಯಂತೆ ಕನಿಷ್ಠ 10 ಸಾವಿರ ರೂ.ನಿಂದ ಗರಿಷ್ಠ 200 ರೂವರೆಗೆ ರೀಚಾರ್ಜ್ ಟಾರಿಫ್ ಅನ್ನು ಆರಂಭದ ಹಂತದಲ್ಲಿ ನೀಡಲಾಗಿದೆ. ಅಲ್ಲದೆ ವಾರ್ಷಿಕ 1999 ರೂ.ಗಳ ಟಾರಿಫ್‌ನ್ನೂ ನೀಡಲಾಗಿದೆ. ಮಾಸಿಕ ಯಾವುದೇ ನೆಟ್‌ವರ್ಕ್ ಗಳ:ಇಗೆ ಅನಿಯಮಿತ ಕರೆ ಸೌಲಭ್ಯವನ್ನು ನೀಡಲಾಗುತ್ತಿದೆ.

ನೂತನ ಫೋನ್ ಖರೀದಿಸಬೇಕು
ಸ್ಥಿರ ಸೂರವಾಣಿ ಪ್ರಿಪೇಯ್ಡ್ ಹೊಸ ಸಂಪರ್ಕ ಪಡೆಯಲು ಠೇವಣಿ, ಅನುಷ್ಠಾನ ಶುಲ್ಕವನ್ನು ನೀಡಬೇಕಾಗಿಲ್ಲ. ಬಿಎಸ್‌ಎನ್‌ಎಲ್‌ನಿಂದ ಪ್ರತ್ಯೇಕವಾಗಿ ಸ್ಥಿರ ದೂರವಾಣಿ ಸೆಟ್‌ನ್ನು ಪಡೆದುಕೊಂಡರೆ ಸಾಕು, ಹಾಲಿ ಸ್ಥಿರ ದೂರವಾಣಿ ಸಂಪರ್ಕ ಹೊಂದಿರುವವರಿಗೆ ಬಿಎಸ್‌ಎನ್‌ಎಲ್ ವತಿಯಿಂದ ದೂರವಾಣಿ ಸೆಟ್ ಪೂರೈಕೆಯಾಗಲಿದೆ.
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications