ವಾಷಿಂಗ್ ಪೌಡರ್ ನಿರ್ಮಾ’ ಪೋಸ್ಟರ್ ಹಾಕಿ ಅಮಿತ್ ಶಾ ಗೆ ಸ್ವಾಗತ!; ಹೀಗೆ ಬಿಆರ್ ಎಸ್ ಸ್ವಾಗತಿಸಿದ್ದು ಯಾಕೆ?
‘ವಾಷಿಂಗ್ ಪೌಡರ್ ನಿರ್ಮಾ’ ಪೋಸ್ಟರ್ ಹಾಕಿ ಭಾರತ್ ರಾಷ್ಟ್ರ ಸಮಿತಿ (BRS ) ನಾಯಕರು ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ.
ಹೈದರಾಬಾದ್, ಮಾರ್ಚ್13: ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ 'ವಾಷಿಂಗ್ ಪೌಡರ್ ನಿರ್ಮಾ' ಪೋಸ್ಟರ್ ಹಾಕಿ ಭಾರತ್ ರಾಷ್ಟ್ರ ಸಮಿತಿ (BRS ) ನಾಯಕರು ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ.
ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೈದರಾಬಾದ್‌ನ ಹಕೀಂಪೇಟ್‌ನಲ್ಲಿರುವ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿ ಕ್ಯಾಂಪಸ್‌ನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 54 ನೇ ರೈಸಿಂಗ್ ಡೇ ಪರೇಡ್ ನ ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಗಮಿಸಿದ್ದ ವೇಳೆ ಬಿ ಆರ್ ಎಸ್ ನಾಯಕರು ವಾಷಿಂಗ್ ಪೌಡರ್ ನಿರ್ಮಾ' ಪೋಸ್ಟರ್ ಹಾಕಿ ಸ್ವಾಗತ ಕೋರಿದ್ದಾರೆ.

ವಾಷಿಂಗ್ ಪೌಡರ್ ನಿರ್ಮಾ ಜಾಹೀರಾತಿನಲ್ಲಿನ 'ನಿರ್ಮಾ ಗರ್ಲ್' ಚಿತ್ರಗಳನ್ನು ತಿದ್ದಿ, ಅದಕ್ಕೆ ಬಿಜೆಪಿ ನಾಯಕರ ಮುಖಗಳನ್ನು ಸೇರಿಸಲಾಗಿದೆ. ಇನ್ನೂ ವಾಷಿಂಗ್ ಪೌಡರ್ ನಿರ್ಮಾ' ಪೋಸ್ಟರ್ ನಲ್ಲಿ ಕರ್ನಾಟಕದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಕೆಎಸ್ ಈಶ್ವರಪ್ಪ ಅವರ ಚಿತ್ರಗಳನ್ನು ಹಾಕಲಾಗಿದೆ. ಇವರಲ್ಲಿ ಹೆಚ್ಚಿನವರು ಬೇರೆ ಪಕ್ಷಗಳಿಂದ ಬಂದು ಬಿಜೆಪಿ ಸೇರಿದವರು. ಹೋರ್ಡಿಂಗ್‌ನ ಕೆಳಗೆ 'ವೆಲ್ಕಂ ಟು ಅಮಿತ್ ಶಾ' ಎಂದು ಬರೆಯಲಾಗಿದೆ.
Amid ongoing questioning of BRS MLC K Kavitha in the Delhi liquor case, another poster featuring leaders who joined BJP from other parties is seen in Hyderabad as Union Home Minister Amit Shah attends the CISF Raising Day event in the city today pic.twitter.com/5fIi0az6Zq
— ANI (@ANI) March 12, 2023
ಈ ಹೋರ್ಡಿಂಗ್‌ನಲ್ಲಿ ಕಾಂಗ್ರೆಸ್‌ನಿಂದ ವಲಸೆ ಬಂದಿದ್ದ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ, ಮಹಾರಾಷ್ಟ್ರದ ನಾರಾಯಣ ರಾಣೆ, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ, ರಾಜ್ಯಸಭಾ ಸಂಸದ ಸುಜನಾ ಚೌಧರಿ, ಶಿವಸೇನಾದಿಂದ ಬಿಜೆಪಿಗೆ ಬಂದ ಅರ್ಜುನ್ ಖೋಟ್ಕರ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಕಮಿಷನ್ ಆರೋಪ ಎದುರಿಸಿರುವ ಕೆಎಸ್ ಈಶ್ವರಪ್ಪ ಮತ್ತು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮುಖಗಳನ್ನು 'ನಿರ್ಮಾ ಗರ್ಲ್'ಗೆ ಅಂಟಿಸಲಾಗಿದೆ. ಅದಲ್ಲದೇ ಕಳಂಕಿತರು ಬಿಜೆಪಿ ಸೇರಿದಾಗ ವಾಷಿಂಗ್ ಪೌಡರ್‌ನಂತೆ ಅವರು ಶುದ್ಧರಾಗುತ್ತಾರೆ ಎಂದು ಈ ಜಾಹೀರಾತಿನ ಮೂಲಕ ಅಣಕಿಸಲಾಗಿದೆ.

ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ತೆಲಂಗಾಣ ಮುಖ್ಯಮಂತ್ರಿ ಕೆ ಕವಿತಾ ಅವರು ಶನಿವಾರ ಹಾಜರಾದ ಸಂದರ್ಭದಿಂದ ಹೈದರಾಬಾದ್‌ನ ಅನೇಕ ಕಡೆ ಬಿಜೆಪಿ ವಿರುದ್ಧ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಇನ್ನೂ ಬಿಜೆಪಿ ನಾಯಕರನ್ನೊಳಗೊಂಡ ವಾಷಿಂಗ್ ಪೌಡರ್ ಬ್ರಾಂಡ್ ನ ಮತ್ತೊಂದು ಪೋಸ್ಟರ್ ಹಾಕಿದ್ದ ಬಿಆರ್ ಎಸ್, ಟೈಡ್ ಡಿಟರ್ಜೆಂಟ್ ನ ಮಾದರಿಯ ಜಾಹಿರಾತಿನಲ್ಲಿ ತನಿಖಾ ಸಂಸ್ಥೆಗಳ ರೈಡ್ ನ್ನು ವ್ಯಂಗ್ಯವಾಡಿತ್ತು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಬಿಆರ್ ಎಸ್ ರಾವಣನಿಗೆ ಹೋಲಿಕೆ ಮಾಡಿ ಪ್ರಜಾಪ್ರಭುತ್ವ ನಾಶ ಮಾಡಿದ ವ್ಯಕ್ತಿ, ಬೂಟಾಟಿಕೆಯ ಪಿತಾಮಹ ಎಂದು ಹೇಳಿದ್ದು, ಕೇಂದ್ರ ಸರ್ಕಾರದ ವಿರುದ್ದ ವಾಷಿಂಗ್ ಪೌಡರ್ ನಿರ್ಮಾ' ಪೋಸ್ಟರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.












Click it and Unblock the Notifications