BRICS Summit 2026: ನರೇಂದ್ರ ಮೋದಿ - ಷಿ ಜಿನ್‌ಪಿಂಗ್ ಭೇಟಿ ಬಳಿಕ ಗಡಿ ವಿಚಾರದಲ್ಲಿ ಭಾರತ-ಚೀನಾ ವಿಭಿನ್ನ ನಿಲುವು!

BRICS Summit 2026: ಭಾರತದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾದ ಬಳಿಕ ಭಾರತ ಮತ್ತು ಚೀನಾ ಬಿಡುಗಡೆ ಮಾಡಿರುವ ಹೇಳಿಕೆಗಳಲ್ಲಿ ಗಡಿ ಸಮಸ್ಯೆ ಮತ್ತು ಎರಡು ದೇಶಗಳ ನಡುವಿನ ಸಂಬಂಧವನ್ನು ಎರಡೂ ದೇಶಗಳು ವಿಭಿನ್ನವಾಗಿ ನೋಡುತ್ತಿವೆ ಎನ್ನುವುದು ಸ್ಪಷ್ಟವಾಗಿದೆ. ಪ್ರಧಾನಿ ನರೇಂದ್ರ ಮೋದಿ - ಷಿ ಜಿನ್ ಪಿಂಗ್ ಭೇಟಿ ಬಳಿಕ ಭಾರತ ಮತ್ತು ಚೀನಾದ ಗಡಿ ವಿಚಾರದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ವರದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಭಾರತ ಮತ್ತು ಚೀನಾ ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿವೆ. ಈ ಹೇಳಿಕೆಗಳಲ್ಲಿ ಗಡಿ ವಿಚಾರ ಮತ್ತು ಎರಡೂ ದೇಶಗಳ ನಡುವಿನ ಒಟ್ಟಾರೆ ಸಂಬಂಧವನ್ನು ಹೇಗೆ ನೋಡಲಾಗುತ್ತಿದೆ ಎಂಬುದರಲ್ಲಿ ವ್ಯತ್ಯಾಸ ಕಂಡುಬಂದಿದೆ.

BRICS Summit 2026 India China Take Different Positions on Border Issue After Modi-Xi Meeting

ಚೀನಾ ತನ್ನ ಹೇಳಿಕೆಯಲ್ಲಿ, ಗಡಿ ವಿಚಾರಕ್ಕೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಎರಡೂ ದೇಶಗಳ ನಡುವಿನ ಸಂಬಂಧವನ್ನೂ ಮುಂದುವರಿಸಬೇಕು ಎಂದು ಹೇಳಿದೆ. ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಂಡು, ಈ ಎರಡೂ ವಿಚಾರಗಳಲ್ಲಿ ಒಂದೇ ಸಮಯದಲ್ಲಿ ಪರಸ್ಪರ ಸಹಕಾರದೊಂದಿಗೆ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದೆ. ಆದರೆ, ಭಾರತದ ಹೇಳಿಕೆಯಲ್ಲಿ ಗಡಿ ಪರಿಸ್ಥಿತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಮುಂದುವರಿದಿರುವುದು ಭಾರತ-ಚೀನಾ ಸಂಬಂಧ ಮತ್ತಷ್ಟು ಅಭಿವೃದ್ಧಿಯಾಗಲು ಅಗತ್ಯವಾದ ಆಧಾರ ಎಂದು ಪ್ರಧಾನಿ ಮೋದಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಹೀಗಾಗಿ, ಎರಡೂ ದೇಶಗಳ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.

BRICS Summit 2026: ಚೀನಾ - ಭಾರತ ಗಡಿ ವಿಚಾರ ವ್ಯತ್ಯಾಸದ ಹೇಳಿಕೆ!

ಚೀನಾದ ಪ್ರಕಾರ, ಗಡಿ ವಿಚಾರ ಇನ್ನೂ ಬಗೆಹರಿಯದಿದ್ದರೂ ಎರಡೂ ದೇಶಗಳ ನಡುವಿನ ಇತರ ಸಂಬಂಧಗಳನ್ನು ಮುಂದುವರಿಸಬಹುದು. ಆದರೆ ಭಾರತದ ನಿಲುವಿನಲ್ಲಿ, ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಇದ್ದರೆ ಮಾತ್ರ ಎರಡೂ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಅಭಿವೃದ್ಧಿಯಾಗಲು ಸಾಧ್ಯ ಎಂಬುದು ಸ್ಪಷ್ಟವಾಗಿದೆ.
2020ರ ಗಲ್ವಾನ್ ಸಂಘರ್ಷದ ಬಳಿಕ ಭಾರತ-ಚೀನಾ ಸಂಬಂಧದಲ್ಲಿ ದೊಡ್ಡ ಬಿರುಕು ಉಂಟಾಗಿತ್ತು. ಈ ಬೆಳವಣಿಗೆಯ ನಂತರ ಭಾರತವು ಗಡಿಯಲ್ಲಿ ಇರುವ ಪರಿಸ್ಥಿತಿಯನ್ನು ಎರಡೂ ದೇಶಗಳ ಒಟ್ಟಾರೆ ಸಂಬಂಧದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದು ನಿರಂತರವಾಗಿ ಪ್ರತಿಪಾದಿಸಿದೆ. ಆದರೆ, ಚೀನಾದ ಇತ್ತೀಚಿನ ಹೇಳಿಕೆಯು ಗಡಿ ವಿವಾದ ಇನ್ನೂ ಬಗೆಹರಿಯದಿದ್ದರೂ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮುಂದುವರಿಸುವ ಅವಕಾಶವಿದೆ ಎಂಬ ನಿಲುವನ್ನು ಹೊಂದಿದೆ.

BRICS Summit 2026: 7 ವರ್ಷದ ನಂತರ ಭಾರತಕ್ಕೆ ಷಿ ಜಿನ್ ಪಿಂಗ್ ಭೇಟಿ

ಇನ್ನು 7 ವರ್ಷದ ನಂತರ ಷಿ ಜಿನ್ ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. 2020ರ ಗಾಲ್ವಾನ್ ಕಣಿವೆಯ ಘರ್ಷಣೆಯ ನಂತರ ಗಡಿ ಉದ್ವಿಗ್ನತೆ ಉಂಟಾದ ಏಳು ವರ್ಷಗಳ ನಂತರ ಷಿ ಜಿನ್‌ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳ ನಡುವಿನ ಮಾತುಕತೆಯನ್ನು ಇಡೀ ವಿಶ್ವವೇ ನೋಡುತ್ತಿದೆ. ಇನ್ನು 2020ರ ದುರಂತದಲ್ಲಿ 20 ಜನ ಭಾರತೀಯ ಸೈನಿಕರು ಮತ್ತು ನಾಲ್ವರು ಚೀನಾ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.

ಚೀನಾ ತನ್ನ ಹೇಳಿಕೆಯಲ್ಲಿ, ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸಲು ಮತ್ತು ಅದೇ ಸಮಯದಲ್ಲಿ ಗಡಿ ಪ್ರಶ್ನೆಯನ್ನು ಪರಿಹರಿಸಲು ಎರಡೂ ದೇಶಗಳಿಗೆ ಕರೆ ನೀಡಿದ್ದಾರೆ. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವಾಗ ಎರಡೂ ಭಾಗಗಳಲ್ಲೂ "ಸಮಾನಾಂತರ, ಪರಸ್ಪರ ಬಲಪಡಿಸುವ ಪ್ರಗತಿ' ಇರಬೇಕು ಎಂದು ಪ್ರತಿಪಾದಿಸಿದ್ದಾರೆ.

ಮೂರನೆಯದಾಗಿ, ಪರಸ್ಪರ ಗೌರವ ಮತ್ತು ತಿಳವಳಿಕೆಯಿಂದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕು. ಎರಡೂ ದೇಶಗಳು ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸುವುದರೊಂದಿಗೆ ಗಡಿ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕು. ಈ ಎರಡೂ ವಿಚಾರಗಳಲ್ಲಿ ಒಂದೇ ಸಮಯದಲ್ಲಿ ಪ್ರಗತಿ ಸಾಧಿಸಬೇಕು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು ಎಂದು ಚೀನಾ ತನ್ನ ಹೇಳಿಕೆಯಲ್ಲಿ ಹೇಳಿದೆ.

ಇನ್ನು ಭಾರತವು ತನ್ನ ಹೇಳಿಕೆಯಲ್ಲಿ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗೆ ಅತ್ಯಗತ್ಯ ಆಧಾರವಾಗಿದೆ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಆದ್ಯತೆ ಎಂದು ಪರಿಗಣಿಸಿರುವುದಾಗಿ ಹೇಳಿದ್ದಾರೆ. ಗಡಿ ಸಂಬಂಧಿತ ವಿಷಯಗಳ ಕುರಿತು ಎರಡೂ ದೇಶಗಳು ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಪಾಲಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+